Kannada News: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದ ಚೇತನ್, ಭಾರತ ತಂಡಕ್ಕೆ ಮೀಸಲಾತಿ ಯಾಕೆ ಬೇಕು ಎಂಬುದಕ್ಕೆ ಹೇಳಿದ್ದೇನು ಗೊತ್ತೇ?

AMP Ads

Kannada News: ಸ್ಯಾಂಡಲ್ ವುಡ್ ನ ವರ್ಸಟೈಲ್ ನಟರಲ್ಲಿ ಒಬ್ಬರು ಚೇತನ್ ಅಹಿಂಸಾ (Chetan Ahimsa) ವಿದೇಶದಲ್ಲಿ ಹುಟ್ಟಿ ಬೆಳೆದರೂ, ಕನ್ನಡವನ್ನು ಮರೆಯದ ಚೇತನ್. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಕನ್ನಡನಾಡಿಗೆ ಬಂದು, ಇಲ್ಲಿ ನೆಲೆಸಿದರು. ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಹತ್ತಿರವಾದರು. ಆ ದಿನಗಳು ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಚೇತನ್, ಮೊದಲ ಸಿನಿಮಾದಲ್ಲಿಯೇ ಭರವಸೆಯ ನಟನಾಗಿ ಹೊರಹೊಮ್ಮಿದರು. ಅದಾದ ನಂತರ ಮೈನಾ (Mynaa), ಸೂರ್ಯಕಾಂತಿ (Suryakanthi), ಬಿರುಗಾಳಿ (Birugali) ಅಂತಹ ಸದಭಿರುಚಿಯ ಪಾತ್ರಗಳಲ್ಲಿ ನಟಿಸಿ ನಟನಾ ಪ್ರತಿಭೆಯನ್ನು ನಿರೂಪಿಸಿದರು.

ನಿಜ ಜೀವನದಲ್ಲಿ ಅತ್ಯಂತ ಸರಳ ಸ್ವಭಾವದವರಾಗಿದ್ದಾರೆ ಚೇತನ್. ಇವರು ಜನರಿಗೆ ಮಾಡುವ ಸಹಾಯ ಹಾಗೂ ಜನರ ಹಿತದ ಪರವಾಗಿರುವ ಇವರ ಹೋರಾಟ ಮತ್ತು ನಿಲುವುಗಳು ಶ್ಲಾಘನೀಯವಾದದ್ದು. ನಟ ಚೇತನ್ ಹಲವಾರು ಅನಾಥ ಮಕ್ಕಳ ಯೋಗಕ್ಷೇಮ ನೋಡಿಕೊಂಡಿದ್ದಾರೆ. ಕೆಲವೊಮ್ಮೆ ವಿವಾದಗಳಿಂದಲು ಸುದ್ದಿಯಾಗುತ್ತಾರೆ ನಟ ಚೇತನ್ ಕುಮಾರ್. ಇತ್ತೀಚೆಗೆ ಕಾಂತಾರ (Kantara) ಸಿನಿಮಾ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದ ನಟ ಚೇತನ್ ಅವರು ಇದೀಗ ಭಾರತ ಕ್ರಿಕೆಟ್ ತಂಡ (Team India) ದಲ್ಲ ಮೀಸಲಾತಿ ಬರಬೇಕು ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಇದನ್ನು ಓದಿ..Kannada News: ಬೆಳಗಾವಿ ತಂಟೆಗೆ ಕರ್ನಾಟಕದ ಕಡೆಯಿಂದ ಖಡಕ್ ಉತ್ತರ: ಕನ್ನಡಿಗರು ಮೇಲುಗೈ ಸಾದಿಸಿದ ಮೇಲೆ ಮಹಾರಾಷ್ಟ್ರ ಸಿಎಂ ಮಾಡಿದ್ದೇನು ಗೊತ್ತೇ??

AMP Ad3

ಚಾಮರಾಜನಗರದಲ್ಲಿ (Chamarajanagar) ಮೀಸಲಾತಿ ಪ್ರಾತಿನಿಧ್ಯವೋ? ಅಥವಾ ಆರ್ಥಿಕ ಸಬಲೀಕರಣವೋ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚೇತನ್ ಅವರು ಟೀಮ್ ಇಂಡಿಯಾಗೆ ಎಸ್ಸಿ ಎಸ್ಟಿ ಮೀಸಲಾತಿ ಬರಬೇಕು ಎಂದು ಹೇಳಿದ್ದಾರೆ. “ಭಾರತೀಯ ಕ್ರಿಕೆಟ್‌ ತಂಡದಲ್ಲಿ ಶೇ.70 ಮಂದಿ ಮೇಲ್ಜಾತಿಯವ್ರಿದ್ದಾರೆ!; ಅಲ್ಲಿಯೂ ಮೀಸಲಾತಿ ನೀಡಿದರೆ, ತಂಡ ಮತ್ತಷ್ಟು ಉತ್ತಮವಾಗಬಹುದು” ಎಂದು ಹೇಳಿದ್ದಾರೆ ನಟ ಚೇತನ್. ಅಷ್ಟೇ ಅಲ್ಲದೆ, 2016ರಿಂದ ಸೌತ್ ಆಫ್ರಿಕಾ (South Africa) ತಂಡದಲ್ಲಿ ಕಪ್ಪು ಆಟಗಾರರಿಗೆ ಮೀಸಲಾತಿ ಇದೆ, ಭಾರತ ತಂಡದಲ್ಲಿ ಅದೇ ರೀತಿ ಮಾಡಬೇಕು..ಆಗ ಭಾರತ ತಂಡ ಅತ್ಯುತ್ತಮ ತಂಡವಾಗುತ್ತದೆ ಎಂದು ಚೇತನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಈ ಹೇಳಿಕೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದನ್ನು ಓದಿ.. Kannada Astrology: ಮನೆಯಲ್ಲಿರುವ ಸಕ್ಕರೆ ಬಳಸಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಮಾಡಿ ಬಿಡ್ತೀರಾ. ಏನಾಗುತ್ತದೆ ಗೊತ್ತೆ?

Comments (0)
Add Comment