Kannada Astrology: ಶನಿ ಮತ್ತು ಮಂಗಳ ಗ್ರಹಗಳ ನಡುವೆ ಇರುವ ಕಾಳಗದಿಂದ ಈ ರಾಶಿಗಳಿಗೆ ಕೆಂಪು ತಿಲಕ ಬಳಸುವುದು ಬೇಡ, ಯಾವ ರಾಶಿಗಳು ಗೊತ್ತೇ?

AMP Ads

Kannada Astrology: ನಮ್ಮ ಹಿಂದೂ ಧರ್ಮದ ಪ್ರಕಾರ ಹಣೆಯ ಮೇಲೆ ಕೆಂಪು ಕುಂಕುಮ, ಕೆಂಪು ತಿಲಕ ಇಡುವುದಕ್ಕೆ ವಿಶೇಷವಾದ ಅರ್ಥವಿದೆ. ತಿಲಕ ಇಟ್ಟುಕೊಳ್ಳುವುದರಿಂದ ಆ ವ್ಯಕ್ತಿಯ ಜೀವನದಲ್ಲಿ ಪಾಸಿಟಿವಿಟಿ ಹೆಚ್ಚಾಗುತ್ತದೆ. ಜಾತಕದಲ್ಲಿ ಕೋಪ ಮಾಡಿಕೊಂಡಿರುವ ಗ್ರಹಗಳು ಕೂಡ ಶಾಂತವಾಗುತ್ತದೆ. ಮನೆಯಲ್ಲಿ ಮಂಗಳಕರ ಕಾರ್ಯಗಳು ನಡೆದಾಗ, ಹಬ್ಬಗಳು ಹರಿದಿನಗಳು ಇದ್ದಾಗ ಹಣೆಗೆ ಇಡಲಾಗುತ್ತದೆ. ಹಲವರಿಗೆ ಇದರಿಂದ ಒಳ್ಳೆಯದಾಗುತ್ತದೆ, ಆದರೆ ಕೆಲವು ರಾಶಿಯವರು ಯಾವುದೇ ಕಾರಣಕ್ಕೂ ಹಣೆಗೆ ಕೆಂಪು ತಿಲಕವನ್ನು ಹಚ್ಚಬಾರದು, ಇದರ ಬಗ್ಗೆ ತಿಳಿಸುತ್ತೇವೆ ನೋಡಿ..

ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ ಗ್ರಹಗಳು ಬಣ್ಣಗಳ ಜೊತೆಗೆ ಸಂಬಂಧ ಇದೆ. ಪ್ರತಿ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ದುಃಖ ಬರುವುದು ಗ್ರಹಗಳ ಸಂಚಾರದಿಂದ. ಅದೇ ರೀತಿ ಬಣ್ಣಗಳು ಕೂಡ ಒಬ್ಬ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಂಪು ಬಣ್ಣ ಸಂಬಂಧಿಸಿರುವುದು ಮಂಗಳ ಗ್ರಹದ ಜೊತೆಗೆ, ಇದು ಧೈರ್ಯ ಮತ್ತು ಶಕ್ತಿಯ ಗ್ರಹ ಎಂದು ಕರೆಯುತ್ತಾರೆ. ಇದು ಕ್ರೂರ ಗ್ರಹ ಎಂದು ಕೂಡ ಕರೆಯುತ್ತಾರೆ, ಮಂಗಳ ಗ್ರಹದ ಹಾಗೆ ಜೀವನದ ಉತ್ಸಾಹ ಮತ್ತು ಕೋಪದ ಸಂಕೇತ ಆಗಿದೆ ಕೆಂಪು ಬಣ್ಣ. ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ ಎಂದು ಕರೆಯುತ್ತಾರೆ. ತಮ್ಮ ರಾಶಿಗಳ ಮೇಲೆ ಗ್ರಹಗಳ ಪರಿಣಾಮ ಹೆಚ್ಚಾಗಿರುತ್ತದೆ. ಅಧಿಪತ್ಯ ವಹಿಸುವ ರಾಶಿಹಳ ಮೇಲೆ ಗ್ರಹಗಳ ಗರಿಷ್ಟವಾಗಿರುತ್ತದೆ. ಮಂಗಳಗ್ರಹದ ಬಣ್ಣ ಕೆಂಪು, ಹಾಗಾಗಿ ಇದನ್ನು ಒಳ್ಳೆಯದು ಎನ್ನುತ್ತಾರೆ.

AMP Ad3

ಈ ಎರಡು ರಾಶಿಗಳಲ್ಲಿ ಮಂಗಳ ಗ್ರಹವು ನೀಚ ಅಥವಾ ಅಶುಭ ಸ್ಥಾನದಲ್ಲಿ ಇರುವಾಗ, ಕೆಂಪು ಬಣ್ಣವು ಕೋಪ ಮತ್ತು ಉತ್ಸಾಹವನ್ನು ಪ್ರತಿನಿಧಿಸುತ್ತದೆ. ಈ ರಾಶಿಯವರಿಗೆ ಆಗ ಕೆಂಪು ಬಣ್ಣ ಒಳ್ಳೆಯದಲ್ಲ, ಆ ಬಣ್ಣದಿಂದ ಅಮಂಗಳಕರ ಫಲಿತಾಂಶ ಪಡೆಯುತ್ತಾರೆ. ಹಹಾಗಿ ಮೇಷ ಮತ್ತು ವೃಶ್ಚಿಕ ರಾಶಿಯವರು ಕೆಂಪು ಬಣ್ಣವನ್ನು ತಪ್ಪಿಸಬೇಕು. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಶನಿ ಮತ್ತು ಮಂಗಳ ಗ್ರಹಗಳು ವಿರುದ್ಧದ ಗ್ರಹಗಳಾಗಿದೆ, ಹಾಗೂ ಶನಿದೇವರಿಗೆ ಕಪ್ಪು ಬಣ್ಣ ಅಂದ್ರೆ ಪ್ರೀತಿ, ಕೆಂಪು ಬಣ್ಣ ಅಂದರೆ ದ್ವೇಷ. ಹಾಗಾಗಿ ಶನಿದೇವರು ಅಧಿಪತಿ ಆಗಿರುವ ಮಕರ ಮತ್ತು ಕುಂಭ ರಾಶಿಯವರಿಗೆ ಕೆಂಪು ಬಣ್ಣ ಅಶುಭ ಎಂದು ಪರಿಗಣಿಸಲಾಗುತ್ತದೆ.

kannada astrologykannada horo
Comments (0)
Add Comment