ಒಂದಲ್ಲ ಎರಡಲ್ಲ 5 ಬಾರಿ ದಸರಾದಲ್ಲಿ ಪಾಲ್ಗೊಂಡಿದ್ದ ಆನೆ ಗೋಪಾಲಸ್ವಾಮಿ ಇನ್ನಿಲ್ಲ. ದುಃಖದಲ್ಲಿ ರಾಜ್ಯ.

AMP Ads

ವೈಸೂರು ದಸರಾ ಎಂದ ತಕ್ಷಣ ಬಹುತೇಕ ಜನರಿಗೆ ನೆನಪಿಗೆ ಬರುವುದು, ಅಂಬಾರಿ, ಅದನ್ನು ಹೊತ್ತುಬರುವ ಆನೆ, ಸುತ್ತಲೂ ಇರುವ ಗಜಪಡೆ. ನಮ್ಮ ರಾಜ್ಯದ ಹೆಮ್ಮೆ ದಸರಾ ಹಬ್ಬದ ಮುಖ್ಯ ಆಕರ್ಷಣೆಯೇ ಈ ಆನೆಗಳು ಎಂದರೆ ತಪ್ಪಲ್ಲ. ದಸರಾ ಗಜಪಡೆ ಎಂದರೆ ಹಲವರಿಗೆ ಅಚ್ಚುಮೆಚ್ಚು. ಆದರೆ ಈಗ ಒಂದು ಬೇಸರದ ಸುದ್ದಿ ಸಿಕ್ಕಿದೆ. ಸುಮಾರು ಐದು ವರ್ಷಗಳ ಕಾಲ ದಸರಾ ಗಜಪಡೆಯಲ್ಲಿ ಭಾಗವಹಿಸಿದ್ದ ಆನೆ ಗೋಪಾಲಸ್ವಾಮಿ ಇದೀಗ ಮೃತಪಟ್ಟಿದೆ.

ಗಜಪಡೆಯ ಆನೆಗಳು ಹುಣಸೂರಿನ ಮತ್ತಿಗೋಡು ಆನೆ ಶಿಬಿರದಲ್ಲಿದ್ದವು, ಅಲ್ಲಿ ಬಹಳ ಶಾಂತವಾಗಿದ್ದ ಗೋಪಾಲಸ್ವಾಮಿ ಆನೆ, ಕಾಡಾನೆಯ ಜೊತೆಗೆ ಕಾದಾಟಕ್ಕೆ ಇಳಿದಿದ್ದು, ಅದರಲ್ಲಿ ಕಾಡಾನೆಯ ದಾಳಿಗೆ ತೀವ್ರವಾಗಿ ಗಾಯಕ್ಕೆ ಒಳಗಾಗಿದೆ. ಎಷ್ಟೇ ಪ್ರಯತ್ನಪಟ್ಟರು ತಪ್ಪಿಸಿಕೊಳ್ಳಲಾಗದೆ, ಗೋಪಾಲಸ್ವಾಮಿ ಆನೆ ಕೊನೆಯುಸಿರೆಳೆದಿದೆ. ಈ ಸುದ್ದಿ ಈಗ ಹಲವರಿಗೆ ಬೇಸರ ತಂದಿದೆ. ದಾಳಿ ಮಾಡಿದ ಆನೆಯ ಹೆಸರು ಅಯ್ಯಪ್ಪ, ಇತ್ತೀಚೆಗೆ ಈ ಆನೆಯನ್ನು ಸೆರೆಹಿಡಿಯಲಾಗಿತ್ತು ಎಂದು ಹೇಳಲಾಗಿದೆ.

AMP Ad3

39 ವರ್ಷದ ಗೋಪಾಲಸ್ವಾಮಿ ಆನೆ ಮತ್ತು ಬೇರೆ ಎಲ್ಲಾ ಆನೆಗಳು ಮತ್ತಿ ಅರಣ್ಯದಲ್ಲಿದ್ದವು, ರಾತ್ರಿ ಪಾಳಿಯಲ್ಲಿ ಅಯ್ಯಪ್ಪ ಆನೆಯ ಜೊತೆಗೆ ಜಗಳ ಶುರುವಾಗಿದೆ. ಈ ಜಗಳದ ಶಬ್ಧ ಕೇಳಿ ಓಡಿ ಬಂದು ಮಾವುತರು ನೋಡಿದಾಗ, ಗೋಪಾಲಸ್ವಾಮಿ ಆನೆ ತೀವ್ರ ಗಾಯಕ್ಕೆ ಒಳಗಾಗಿತ್ತು. ಜೀವ ಉಳಿಸಲು ಎಷ್ಟೇ ಪ್ರಯತ್ನಪಟ್ಟರೂ ಸಹ, ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ನಾಗರಹೊಳೆಯಲ್ಲಿ ನಡೆದ ಈ ಕಾಳಗದಲ್ಲಿ ಗೋಪಾಲಸ್ವಾಮಿ ಆನೆಗೆ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ವರ್ಷ ಸೇರಿದಂತೆ, ಐದು ಸಾರಿ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿತ್ತು.

Comments (0)
Add Comment