ಮತ್ತೊಂದು ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕಿಂಗ್ ಕೊಹ್ಲಿ. ಈ ಬಾರಿ ಬರೆದ ವಿಶೇಷ ವಿಶ್ವ ದಾಖಲೆ ಏನು ಗೊತ್ತೇ??

AMP Ads

ನಿನ್ನೆ ನಡೆದ ಭಾರತ ವರ್ಸಸ್ ನೆದರ್ ಲ್ಯಾಂಡ್ ಪಂದ್ಯದಲ್ಲಿ ಭಾರತ ತಂಡ 56 ರನ್ ಗಳ ಅದ್ಭುತವಾಗಿ ವಿಜಯ ಸಾಧಿಸಿತು. ಇದು 2022ರ ಟಿ20 ವಿಶ್ವಕಪ್ ಭಾರತ ತಂಡ ಆಡಿದ ಎರಡನೇ ಪಂದ್ಯ, ಈ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮತ್ತು ಸೂರ್ಯಕುಮಾರ್ ಯಾದವ್ ಮೂವರು ಸಹ ಅತ್ಯುತ್ತಮ ಪ್ರದರ್ಶನ ನೀಡಿದರು. ಮೂವರು ಕೂಡ ಅರ್ಧಶತಕ ಭಾರಿಸಿದರು. ವಿರಾಟ್ ಕೋಹ್ಲಿ ಅವರು 44 ಎಸೆತಗಳಲ್ಲಿ ಬರೋಬ್ಬರಿ 62 ರನ್ ಭಾರಿಸಿದರು. ಈ ಮೂಲಕ ಕೋಹ್ಲಿ ಅವರು ಟಿ20 ವಿಶ್ವಕಪ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ನಿನ್ನೆಯ ಪಂದ್ಯದ ಬಳಿಕ ಕೋಹ್ಲಿ ಅವರು, ಐಸಿಸಿ ಮೆನ್ಸ್ ಟಿ20 ವಿಶ್ವಕಪ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಇದುವರೆಗೂ ಟಿ20 ವಿಶ್ವಕಪ್ ನಲ್ಲಿ ಕೋಹ್ಲಿ ಅವರು ಆಡಿರುವ 21 ಇನ್ನಿಂಗ್ಸ್ ಗಳಲ್ಲಿ, 89.90 ಆವರೇಜ್ ನಲ್ಲಿ 989 ರನ್ಸ್ ಗಳಿಸಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ಕೋಹ್ಲಿ ಅವರು 12 ಅರ್ಧಶತಕ ಸಿಡಿಸಿದ್ದಾರೆ. 89 ರನ್ ಗಳು ಅಜೇಯರಾಗಿ ಸಿಡಿಸಿರುವುದು ಕೋಹ್ಲಿ ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಅಷ್ಟೇ ಅಲ್ಲದೆ, 2014ರಲ್ಲಿ 319 ರನ್ ಗಳಿಸಿ, 2016ರಲ್ಲಿ 273 ರನ್ ಗಳಿಸಿ, ಕೋಹ್ಲಿ ಅವರು ಎರಡು ಸಾರಿ ಟಿ20 ವಿಶ್ವಕಪ್ ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಗೆದ್ದ ಒಬ್ಬರೇ ಆಟಗಾರ ಆಗಿದ್ದಾರೆ.

AMP Ad3

ಈ ಮೊದಲು ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿ ಇದ್ದವರು ಕ್ರೀಸ್ ಗೇಯ್ಲ್, ಇವರು 31 ಇನ್ನಿಂಗ್ಸ್ ಗಳಲ್ಲಿ, 34.40 ಆವರೇಜ್ ನಲ್ಲಿ, 965 ರನ್ ಗಳಿಸಿದ್ದರು. 2 ಶತಕ ಮತ್ತು 7 ಅರ್ಧಶತಕ ಸಿಡಿಸಿದ್ದರು ಕ್ರೀಸ್ ಗೇಯ್ಲ್, ಇವರ ಬೆಸ್ಟ್ ಸ್ಕೋರ್ 117 ಆಗಿದೆ. ಇನ್ನು ಅತಿಹೆಚ್ಚು ರನ್ ಗಳಿಸಿದ ಮೊದಲ ಆಟಗಾರನ ಸ್ಥಾನದಲ್ಲಿ ಇರುವುದು ಶ್ರೀಲಂಕಾ ಬ್ಯಾಟ್ಸ್ಮನ್ ಮಹೇಲಾ ಜಯವರ್ಧನೆ ಇವರು ಟಿ20 ವಿಶ್ವಕಪ್ ನಲ್ಲಿ ಆಡಿರುವ ಪಂದ್ಯಗಳಲ್ಲಿ 39.07 ಆವರೇಜ್ ನಲ್ಲಿ, 1016 ರನ್ ಸಿಡಿಸಿದ್ದಾರೆ, ಇವರು ಒಂದು ಶತಕ ಮತ್ತು 6 ಅರ್ಧಶತಕ ಭಾರಿಸಿದ್ದಾರೆ, ಇವರ ಬೆಸ್ಟ್ ಸ್ಕೋರ್ 100 ರನ್ ಗಳು. ಕೋಹ್ಲಿ ಅವರ ಸ್ಪೀಡ್ ಮತ್ತು ಅವರ ಆಟದ ವೈಖರಿ ನೋಡಿದರೆ, ಜಯವರ್ಧನೆ ಅವರನ್ನು ಸಹ ಶೀಘ್ರದಲ್ಲೇ ಬೀಟ್ ಮಾಡುವುದು ಖಂಡಿತ.

Comments (0)
Add Comment