Sudha Murty : ನಿಮ್ಮ ಅಳಿಯ ಪ್ರಧಾನಿ ಎಂದಿದ್ದಕ್ಕೆ ಸುಧಾಮೂರ್ತಿ ರವರ ಮೊದಲ ಬಾರಿಗೆ ಹೇಳಿದ್ದೇನು ಗೊತ್ತೇ?? Rishi Sunak

AMP Ads

ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಅಮ್ಮನವರದ್ದು ಬಹಳ ವೈಶಾಲ್ಯವಾದ ಹೃದಯ. ರಾಜ್ಯದಲ್ಲಿ ಎಲ್ಲಿ ಏನೇ ಕಷ್ಟವಾದರೂ ಮೊದಲು ನೆರವಿಗೆ ಬರುವುದು ಇನ್ಫೋಸಿಸ್ ಸಂಸ್ಥೆ. ಆರೋಗ್ಯ ಸಮಸ್ಯೆ ಇರಲಿ, ಆರ್ಥಿಕ ಸಮಸ್ಯೆ ಇರಲಿ, ನೆರೆ ಸಮಸ್ಯೆ ಇರಲಿ, ಬಡವರು ಅನುಭವಿಸುವ ಕಷ್ಟವೇ ಆಗಲಿ. ಎಂಥದ್ದೇ ಕಷ್ಟ ಇದ್ದರೂ, ಸಹಾಯಹಸ್ತ ಚಾಚುವುದು ಇನ್ಫೋಸಿಸ್ ಸಂಸ್ಥೆ. ಮಾತೃ ಹೃದಯಿ ಎಂದು ಹೆಸರು ಪಡೆದಿರುವ ಸುಧಾಮೂರ್ತಿ ಅವರು ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯ ಮತ್ತು ಹೊರದೇಶಗಳಲ್ಲಿ ಸಹ ಖ್ಯಾತಿ ಪಡೆದಿದ್ದಾರೆ. ಇವರನ್ನು ಇಂದಿನ ಕಾಲದ ಮದರ್ ಥೆರೆಸಾ ಎಂದು ಕರೆದರೆ ತಪ್ಪಾಗುವುದಿಲ್ಲ.

ಇವರ ಸಹಾಯ ಮನೋಭಾವ, ಸರಳತೆ ಎಂಥದ್ದು ಎನ್ನುವುದಕ್ಕೆ ಹಲವಾರು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಸಾವಿರಾರು ಕೋಟಿ ಆಸ್ತಿಯ ಒಡತಿ ಆಗಿದ್ದರೂ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಸರಳವಾದ ಸೀರೆಯುಟ್ಟು ಸಾಮಾನ್ಯ ಜನರ ಹಾಗೆ ಕಾಣಿಸಿಕೊಳ್ಳುತ್ತಾರೆ. ಸುಧಾಮೂರ್ತಿ ಮತ್ತು ನಾರಾಯಣ್ ಮೂರ್ತಿ ದಂಪತಿಯಮಗಳು ಅಕ್ಷತಾ ಅವರು ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ರಿಷಿ ಸುನಕ್ ಅವರೊಡನೆ ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳು, ಅವರು ಕೃಷ್ಣ ಸುನಕ್ ಮತ್ತು ಅನೌಷ್ಕ ಸುನಕ್. ಯುಕೆ ದೇಶದಲ್ಲಿ ರಿಷಿ ಸುನಕ್ ಅವರು ಡಿಫೆನ್ಸ್ ಮಿನಿಸ್ಟರ್ ಆಗಿದ್ದರು, ಆದರೆ ಒಂದು ಬ್ರಿಟನ್ ನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

AMP Ad3

ಭಾರತದವರು ಬ್ರಿಟನ್ ನ ಪ್ರಧಾನಿಯಾಗಿ ಆಯ್ಕೆಯಾಗಿರುವುದು, ಅಲ್ಲಿ ಆಳ್ವಿಕೆ ಮಾಡಲಿರುವುದು ಕನ್ನಡಿಗರಾಗಿ ನಮಗೆ ಬಹಳ ಹೆಮ್ಮೆಯ ವಿಚಾರ. ಎಲ್ಲೆಡೆ ಸುಧಾಮೂರ್ತಿ ಅವರ ಅಳಿಯ ಬ್ರಿಟನ್ ನ ಪ್ರಧಾನಿ ಆಗಿದ್ದಾರೆ ಎನ್ನುವುದೇ ಸುದ್ದಿ, ಇಂದು ಸುಧಾಮೂರ್ತಿ ಅಮ್ಮನವರು ದೇವಸ್ಥಾನಕ್ಕೆ ಬಂದಿದ್ದಾಗ, ನಿಮ್ಮ ಅಳಿಯ ಬ್ರಿಟನ್ ನ ಪ್ರಧಾನಿ ಆಗಿದ್ದಾರೆ, ಇದರ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರ ಕೊಟ್ಟಿರುವ ಸುಧಾಮೂರ್ತಿ ಅಮ್ಮನವರು, “ಅದನ್ನ ಬಿಡಿ..ಅವನ ಮೇಲೆ ನಮ್ಮ ಆಶೀರ್ವಾದ ಇದೆ..” ಎಂದು ಹೇಳಿದ್ದಾರೆ. ಮಾಧ್ಯಮದವರು ಇನ್ನು ಹೆಚ್ಚು ಪ್ರಶ್ನೆ ಕೇಳಿದಾಗ, ನಾನು ವಿವಾದಕ್ಕೆ ಸಿಕ್ಕಿಕೊಳ್ಳುವುದಿಲ್ಲ ಎಂದಿದ್ದಾರೆ. ಸುಧಾಮೂರ್ತಿ ಅಮ್ಮನವರ ಈ ಮಾತುಗಳನ್ನು ಕೇಳಿದರೆ, ಅವರ ವ್ಯಕ್ತಿತ್ವ ಎಂಥದ್ದು, ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಅವರು ಬಯಸುವುದಿಲ್ಲ ಎಂದು ಗೊತ್ತಾಗುತ್ತದೆ.

Comments (0)
Add Comment