ಸ್ವಂತ ಮಗ ಎನ್ನುವುದನ್ನು ನೋಡದೆ, ಆಕೆಯ ಮೇಲಿನ ಕೋಪಕ್ಕೆ ಮಗ ಜೀವನವನ್ನೇ ಹಳ್ಳಕ್ಕೆ ತಳ್ಳಿದ ನಾಗಾರ್ಜುನ. ಯಾರ ಮೇಲೆ ಕೋಪ ಅಂತೇ ಗೊತ್ತೇ??

AMP Ads

ಅಕ್ಕಿನೇನಿ ಕುಟುಂಬದ ವಾರಸುದಾರನಾಗಿ ಎಂಟ್ರಿ ಕೊಟ್ಟ ನಟ ನಾಗಚೈತನ್ಯ ಅವರು ಈಗ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಪರ್ಸನಲ್ ಲೈಫ್ ನಲ್ಲಿ, ಮದುವೆಯಿಂದ ವಿಚ್ಛೇದನ ಪಡೆದು ನೋವಿನಲ್ಲಿದ್ದರು, ಇತ್ತ ಸಿನಿಮಾ ಕೆರಿಯರ್ ಸಹ ಅಂದುಕೊಂಡ ಹಾಗೆ ಸಾಗುತ್ತಿಲ್ಲ. ನಾಗಚೈತನ್ಯ ಅವರ ಸಿನಿಮಾಗಳು ಬಿಡುಗಡೆಯಾಗಿ ಅದೇ ರೀತಿ ಥಿಯೇಟರ್ ಇಂದ ಹೊರಹೋಗುತ್ತಿವೆ. ಇದರಿಂದ ಚೈತನ್ಯ ಅವರು ತಮ್ಮ ಕೆರಿಯರ್ ಬಗ್ಗೆ ಚಿಂತೆ ಮಾಡುತ್ತಿದ್ದು, ಮಗನಿಗಾಗಿ ಒಳ್ಳೆಯ ಡೈರೆಕ್ಟರ್ ಹುಡುಕಾಟದಲ್ಲಿದ್ದಾರಂತೆ ತಂದೆ ನಾಗಾರ್ಜುನ. ನಾಗಚೈತನ್ಯ ಅವರು ನಾಗಾರ್ಜುನ ಅವರ ಮೊದಲ ಪತ್ನಿಯ ನಗ ಎನ್ನುವ ವಿಷಯ ಎಲ್ಲರಿಗೂ ಗೊತ್ತಿದೆ. ತೆಲುಗಿನ ಖ್ಯಾತ ನಿರ್ಮಾಪಕ ರಾಮಾನಾಯ್ಡು ಅವರ ಮಗಳು.

ನಟ ವೆಂಕಟೇಶ್ ಅವರು ತಂಗಿ ಆಗಿರುವ ಲಕ್ಷ್ಮಿ ದಗ್ಗುಬಾಟಿ ಅವರು ನಾಗಾರ್ಜುನ ಅವರೊಡನೆ ಮದುವೆಯಾದರು. ಈ ದಂಪತಿಯ ಮಗ ನಾಗಚೈತನ್ಯ, ಆದರೆ ಕೆಲವು ವರ್ಷಗಳ ನಂತರ ನಾಗಾರ್ಜುನ ಅವರು ಮತ್ತು ಲಕ್ಷ್ಮಿ ದಗ್ಗುಬಾಟಿ ಅವರು ವಿಚ್ಛೇದನ ಪಡೆದು ದೂರವಾದರು. ನಂತರ ನಾಗಾರ್ಜುನ ಅವರು ನಟಿ ಅಮಲಾ ಅವರನ್ನು ಪ್ರೀತಿಸಿ ಮದುವೆಯಾದರು. ಈ ರೀತಿ ಆಗಲು ಕಾರಣ ಲಕ್ಷ್ಮಿ ದಗ್ಗುಬಾಟಿ ಅವರೇ ಎಂದು ಹೇಳಲಾಗುತ್ತದೆ. ಲಕ್ಷ್ಮಿ ಅವರು ವಿದೇಶದಲ್ಲಿ ಓದಿ ಅಲ್ಲಿಯೇ ಸೆಟ್ಲ್ ಆಗಬೇಕು ಎಂದು ಬಯಸಿದ್ದರಂತೆ, ಆದರೆ ನಾಗಾರ್ಜುನ ಅವರು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಆ ಕಾರಣದಿಂದ ಇಬ್ಬರು ಬೇರೆಯಾದರಂತೆ. ಚೈತನ್ಯ ಅವರು ಚಿತ್ರರಂಗಕ್ಕೆ ಬಂದ ನಂತರ, ಅಕ್ಕಿನೇನಿ ನಾಗೇಶ್ವರ್ ರಾವ್ ಅವರು ವೆಂಕಟೇಶ್ ಅವರು ಮಗಳು ಆಶ್ರಿತ ಅವರೊಡನೆ ನಾಗಚೈತನ್ಯ ಅವರಿಗೆ ಮದುವೆ ಮಾಡಿಸಿದರೆ, ಎರಡು ಕುಟುಂಬ ಮತ್ತೆ ಒಂದಾಗುತ್ತದೆ ಎಂದು ಹೇಳಿದರಂತೆ.

AMP Ad3

ಆದರೆ ನಾಗಾರ್ಜುನ ಅವರು ಇದಕ್ಕೆ ಖಡಾಖಂಡಿತವಾಗಿ ಒಪ್ಪಲಿಲ್ಲವಂತೆ, ಲಕ್ಷ್ಮಿ ಅವರಿಂದ ಮನಸ್ಸಿಗೆ ಆಗಿದ್ದ ನೋವಿನಿಂದ ನಾಗಾರ್ಜುನ ಅವರು ತಂದೆಯ ಈ ಮಾತಿಗೆ ಒಪ್ಪಲಿಲ್ಲ. ಬಳಿಕ ಚೈತನ್ಯ ಅವರು ಸಮಂತಾ ಅವರನ್ನು ಪ್ರೀತಿಸಿ ಮನೆಯಲ್ಲಿ ಈ ವಿಚಾರ ತಿಳಿಸಿದರು, ಮನೆಯವರು ಒಪ್ಪಿಗೆ ನೀಡಿದರು. ಆದರೆ ನಾಗೇಶ್ವರ್ ರಾವ್ ಅವರಿಗೆ ವೆಂಕಟೇಶ್ ಅವರ ಮಗಳ ಜೊತೆಗೆ ಚೈತು ಮದುವೆ ನಡೆಯಬೇಕಿತ್ತು ಎಂದು ಆಸೆ ಇತ್ತು. ಈಕಡೆ ಮದುವೆಯಾಗಿ ನಾಲ್ಕೇ ವರ್ಷಕ್ಕೆ ಚೈತನ್ಯ ಮತ್ತು ಸಮಂತಾ ಬೇರ್ಪಟ್ಟರು, ಇದಕ್ಕೆ ಕಾರಣ ಆವರಿಬ್ಬರ ಜಾತಕ ಹೊಂದಾಣಿಕೆ ಆಗದೆ ಇರುವುದು ಎನ್ನಲಾಗುತ್ತಿದ್ದು, ವೆಂಕಟೇಶ್ ಅವರ ಮಗಳ ಜೊತೆಗೆ ಮದುವೆ ಆಗಿದ್ದರೆ ಈ ರೀತಿ ಆಗುತ್ತಿರಲಿಲ್ಲ, ಆದರೆ ನಾಗಾರ್ಜುನ ಅವರು ಆಶ್ರಿತಾ ಜೊತೆಗೆ ಮದುವೆಗೆ ಒಪ್ಪಲಿಲ್ಲ. ಈ ರೀತಿ ಮಗನ ಜೀವನವನ್ನು ತಂದೆಯೇ ಹಾಳು ಮಾಡಿದರು ಎನ್ನುವ ಚರ್ಚೆ ಮೀಡಿಯಾದಲ್ಲಿ ನಡೆಯುತ್ತಿದೆ.

Comments (0)
Add Comment