ಬಿಗ್ ನ್ಯೂಸ್: ಚೆನ್ನಾಗಿ ಕಲೆಕ್ಷನ್ ಮಾಡುತ್ತಿರುವ ಕಾಂತರಾಗೆ ಬಿಗ್ ಶಾಕ್, ಕೋರ್ಟಿನ ಮೆಟ್ಟಿಲೇರಲು ನಿರ್ಧಾರ. ಕಾಂತಾರ ಪರಿಸ್ಥಿತಿ ಏನಾಗಲಿದೆ?

AMP Ads

ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿ, ಇಂದಿಗೂ ನಂಬರ್ 1 ಸಿನಿಮಾ ಆಗಿ ಮುಂದುವರೆಯುತ್ತಿದೆ. ದೀಪಾವಳಿ ಹಬ್ಬಕ್ಕೆ ಹೊಸ ಸಿನಿಮಾಗಳು ಬಿಡುಗಡೆ ಆದರೂ ಕೂಡ, ಕಾಂತಾರ ಸಿನಿಮಾದ ಹವಾ ಮುಗಿಯುವುದಿಲ್ಲ, ಇಂದಿಗೂ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಕಥೆ, ಸಂಭಾಷಣೆ, ಅಭಿನಯ ಎಲ್ಲವನ್ನು ಜನರು ಇಷ್ಟಪಟ್ಟಿದ್ದಾರೆ. ಸಿನಿಮಾ ಹಾಡುಗಳು ಸಹ ಸೂಪರ್ ಹಿಟ್ ಆಗಿವೆ, ಸಿಂಗಾರ ಸಿರಿಯೇ ಮತ್ತು ವಾರಹ ರೂಪಂ ಹಾಡಿನ ಟ್ರಾನ್ಸ್ ಇಂದ ಹೊರಬರಲು ಆಗುತ್ತಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಆದರೆ ಈ ಹಾಡುಗಳ ವಿಚಾರದಲ್ಲಿಯೇ ಈಗ ಕಾಂತಾರ ಸಿನಿಮಾಗೆ ಸಂಕಷ್ಟ ಎದುರಾಗಿದೆ.

ವರಾಹ ರೂಪಂ ಹಾಡಿನ ಕಾಪಿರೈಟ್ಸ್ ಆರೋಪ ಕೇಳಿಬರುತ್ತಿದೆ, ಈ ಮೊದಲೇ ವರಾಹ ರೂಪಂ ಹಾಡು ಮಲಯಾಳಂ ನ ನವರಸಂ ಹಾಡಿನ ಹಾಗೆಯೇ ಇದೆ ಎನ್ನುವ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ನಡೆದಿದ್ದವು, ಆದರೆ ಅಜನೀಶ್ ಲೋಕನಾಥ್ ಅವರು ಸ್ಪಷ್ಟನೆ ನೀಡಿ, ನವರಸಂ ಹಾಡಿನಿಂದ ಇನ್ಸ್ಪಿರೇಷನ್ ತಗೊಂಡಿರೋದು, ಕಾಪಿ ಮಾಡಿಲ್ಲ, ಎರಡು ಹಾಡುಗಳು ಒಂದೇ ರಾಗ ಆಗಿರುವ ಕಾರಣ ಆ ರೀತಿ ಅನ್ನಿಸುತ್ತಿದೆ ಎಂದಿದ್ದಾರೆ. ಆದರೆ ಈಗ ಮಲಯಾಳಂ ನವರಸಂ ಹಾಡನ್ನು ಬಿಡುಗಡೆ ಮಾಡಿರುವ ತೈಕ್ಕುಡಮ್ ಬ್ರಿಡ್ಜ್ ಸಂಸ್ಥೆಯು ಕಾಂತಾರ ಸಿನಿಮಾ ತಂಡದ ಮೇಲೆ ಕಾಪಿ ರೈಟ್ ವೈಯೋಲೇಶನ್ ಕೇಸ್ ಹಾಕಲು ನಿರ್ಧಾರ ಮಾಡಿದ್ದಾರೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ.

AMP Ad3

ಕಾಂತಾರ ಸಿನಿಮಾ ಜೊತೆ ತೈಕ್ಕುಡಮ್ ಬ್ರಿಡ್ಜ್ ಸಂಸ್ಥೆ ಸಹಯೋಗ ಮಾಡಿಕೊಂಡಿಲ್ಲ, ನವರಸಂ ಮತ್ತು ವರಾಹ ರೂಪಂ ಹಾಡಿನಲ್ಲಿ ಇರುವ ಸಾಮ್ಯತೆ ಕಾಪಿರೈಟ್ಸ್ ನಿಯಮದ ಉಲ್ಲಂಘನೆ ಆಗಿದೆ. ಹಾಗಾಗಿ ನಾವು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ.. ಕಾಂತಾರ ಚಿತ್ರತಂಡ ನಮ್ಮಿಂದ ಹಾಡಿನ ರೈಟ್ಸ್ ಪಡೆದಿಲ್ಲ, ಹಾಡಿನ ಕ್ರೆಡಿಟ್ಸ್ ಪಡೆದಿಲ್ಲ, ಇದು ಅವರ ಸ್ವಂತ ಹಾಡು ಎಂದು ಹೇಳಿದ್ದಾರೆ. ಹಾಗಾಗಿ ಎಲ್ಲಾ ಕೇಳುಗರು ನಮಗೆ ಬೆಂಬಲ ಕೊಡಬೇಕು ಎಂದು ಕೇಳಿಕೊಳ್ಳುತ್ತೇವೆ. ಮ್ಯೂಸಿಕ್ ಕಾಪಿರೈಟ್ಸ್ ಬಗ್ಗೆ ಎಲ್ಲಾ ಸಂಗೀತ ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತೆವೆ.. ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆಯುವ ಮೂಲಕ ಕಾಂತಾರ ಚಿತ್ರತಂಡ ವಿರುದ್ಧ ಕೇಸ್ ಹಾಕುವುದಾಗಿ ತಿಳಿಸಿದ್ದಾರೆ. ಇದರ ಬಗ್ಗೆ ನಟ ರಿಷಬ್ ಶೆಟ್ಟಿ, ಹೊಂಬಾಳೆ ಸಂಸ್ಥೆ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹೇಗೆ ಪ್ರತಿಕ್ರಿಯೆ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.

Comments (0)
Add Comment