ಬಿಸಿಸಿಐ ಅಧ್ಯಕ್ಷರಾದ ಕೂಡಲೇ IND vs PAK ನಡುವೆ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ ರೋಜರ್ ಬಿನ್ನಿ. ಯಾರಂತೆ ಗೊತ್ತೇ??

AMP Ads

ಆಕ್ಟೊಬರ್ 23ರಂದು ಭಾನುವಾರ ನಡೆಯಲಿರುವ ಭಾರತ ವರ್ಸಸ್ ಪಾಕಿಸ್ತಾನ್ ನಡುವಿನ ಬಹುನಿರೀಕ್ಷಿತ ಪಂದ್ಯವನ್ನು ವೀಕ್ಷಿಸಲು ಎಲ್ಲರೂ ಕಾಯುತ್ತಿದ್ದಾರೆ. ಕಳೆದವರ್ಷ ಯುಎಇ ನಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಭಾರತ ವರ್ಸಸ್ ಪಾಕಿಸ್ತಾನ್ ಮೊದಲ ಪಂದ್ಯದಲ್ಲಿ, ಬಾಬರ್ ಅಜಂ ನೇತೃತ್ವದ ತಂಡ, ಭಾರತವನ್ನು 10 ವಿಕೆಟ್ ಗಳ ಅಂತರರಿಂದ ಸೋಲಿಸಿತ್ತು, ಈ ಸೋಲಿಗೆ ಪ್ರತ್ಯುತ್ತರ ನೀಡಲು ಭಾರತ ತಂಡ ಕಾದು ಕುಳಿತಿದೆ. ಪಂದ್ಯಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿದೆ. ಇತ್ತ ಪಾಕಿಸ್ತಾನ್ ತಂಡ ಸಹ ಭಾರತವನ್ನು ಸೋಲಿಸಬೇಕು ಎಂದು ಗೇಮ್ ಪ್ಲಾನ್ ಮಾಡಿಕೊಂಡಿದೆ.

ಇನ್ನು ಈಗಷ್ಟೇ ಬಿಸಿಸಿಐ ಪ್ರೆಸಿಡೆಂಟ್ ಆಗಿ ಆಯ್ಕೆಯಾಗಿರುವ ರೋಜರ್ ಬಿನ್ನಿ ಅವರು ಭಾನುವಾರ ನಡೆಯಲಿರುವ ಮ್ಯಾಚ್ ನಲ್ಲಿ ತಮ್ಮ ಮೆಚ್ಚಿನ ತಂಡ ಯಾವುದು ಎಂದು ತಿಳಿಸಿದ್ದಾರೆ. 1983ರಲ್ಲಿ ಭಾರತ ವರ್ಲ್ಡ್ ಕಪ್ ಗೆದ್ದ ತಂಡದಲ್ಲಿ ರೋಜರ್ ಬಿನ್ನಿ ಅವರು ಸಹ ಇದ್ದರು, ಪ್ರಸ್ತುತ ಇವರು ತಂಡದ ಬಗ್ಗೆ ಹೇಳಿರುವುದು ಹೀಗೆ.. “ಈಗ ಭಾರತ ತಂಡದಕ್ಕೆ ಅಂಡರ್ ಡಾಗ್ ಟ್ಯಾಗ್ ಇಲ್ಲ. ಮೊದಲಿನ ಹಾಗಿರದೆ, ಈಗ ಪಂದ್ಯಗಳಲ್ಲಿ ಆ ಸಮಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಯುಎಇ ನಲ್ಲಿ ನಡೆದ ಟಾಸ್ ಇಲ್ಲಿ ಎಲ್ಲಕ್ಕಿಂತ ಮುಖ್ಯ ಪಾತ್ರ ವಹಿಸುವುದಿಲ್ಲ. ಪಿಚ್ ಕೂಡ ಚೆನ್ನಾಗಿದೆ. ಈ ಪಂದ್ಯವನ್ನು ನೋಡಲು ಬಹಳ ಚೆನ್ನಾಗಿರುತ್ತದೆ, ಇಂಡಿಯಾ ವರ್ಸಸ್ ಪಾಕಿಸ್ತಾನ್ ಪಂದ್ಯ ನೋಡಲು ನಾನು ಕೂಡ ಕಾಯುತ್ತಿದ್ದೇನೇ..” ಎಂದು ಹೇಳಿದ್ದಾರೆ ರೋಜರ್ ಬಿನ್ನಿ.

AMP Ad3

ಪಂದ್ಯದ ಬಗ್ಗೆ ಇನ್ನೂ ಮಾತನಾಡಿದ ಬಿನ್ನಿ ಅವರು, “ಒಮ್ಮೆ ಪ್ಲೇಯರ್ ಗಳು ಗ್ರೌಂಡ್ ಗೆ ಬಂದರೆ ಬೇರೆ ಯಾವುದರ ಬಗ್ಗೆಯೂ ಆಲೋಚನೆ ಮಾಡುವುದಿಲ್ಲ. ಮತ್ತೊಂದು ಪಂದ್ಯದ ಹಾಗೆ ಆಡುತ್ತಾರೆ. ಪ್ಲೇಯರ್ ಗಳು ಎಲ್ಲಾ ರೂಲ್ಸ್ ಗಳನ್ನು ಫಾಲೋ ಮಾಡುತ್ತಾರೆ. ಪ್ರೆಶರ್ ಎನ್ನುವುದು ಗ್ರೌಂಡ್ ಇಂದ ಹೊರಗಡೆ ಇರುತ್ತದೆ, ಒಳಗೆ ಇರುವುದಿಲ್ಲ..ಆಡುವವರಿಗಿಂತ ನೋಡುಗರಲ್ಲಿ ಒತ್ತಡ ಜಾಸ್ತಿ ಇರುತ್ತದೆ, ಅವರು ಒತ್ತಡ ಬರುವ ಹಾಗೆ ಮಾಡುತ್ತಾರೆ..” ಎಂದು ಹೇಳಿದ್ದಾರೆ. ಭಾನುವಾರ ಮಧ್ಯಹ್ನ 1:30 ಕ್ಕೆ ಭಾರತ ವರ್ಸಸ್ ಪಾಕಿಸ್ತಾನ್ ಪಂದ್ಯ, ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿರುವ ಎಂಸಿಜಿ ಸ್ಟೇಡಿಯಂ ನಲ್ಲಿ ನಡೆಯಲಿದ್ದು, ವಿಶ್ವಾದ್ಯಂತ ಕ್ರಿಕೆಟ್ ಪ್ರಿಯರು ಈ ಪಂದ್ಯ ನೋಡಲು ಕಾಯುತ್ತಿದ್ದಾರೆ.

Comments (0)
Add Comment