ಮದುವೆಯಾದ ಮೇಲೆ ಹೊಸ ಜೋಡಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವ 6 ವಿಷಯಗಳು ಯಾವ್ಯಾವು ಗೊತ್ತೇ??

AMP Ads

ಮದುವೆ ಎನ್ನುವುದು ನೂರು ವರ್ಷಗಳ ಕಾಲ ಜೊತೆಯಾಗಿರುವ ಬಂಧ. ಮದುವೆ ಆಗುವ ಇಬ್ಬರ ನಡುವೆ ಇದು ಪ್ರೀತಿ ವಿಶ್ವಾಸ ಇರಬೇಕು. ಪ್ರತಿ ಸುಖ ದುಃಖದಲ್ಲೂ ಇಬ್ಬರು ಜೊತೆಯಾಗಿರಬೇಕು. ಮದುವೆಯಾದ ಮೊದಲ ವರ್ಷ ಎಲ್ಲವೂ ಬಹಳ ಎಕ್ಸೈಟಿಂಗ್ ಆಗಿ ಚೆನ್ನಾಗಿರುತ್ತದೆ. ಆದರೆ ಕೆಲವು ಕ್ರೇಜ್ ಗಳೇ ನಿಮ್ಮ ಇಡೀ ವೈವಾಹಿಕ ಜೀವನಕ್ಕೆ ಅಡಿಪಾಯ ಆಗಿದೆ. ಮದುವೆಯಾದ ಹೊಸತರಲ್ಲಿ ಹುಡುಗ ಹುಡುಗಿಯನ್ನು ಕಾಡುವ 6 ವಿಚಾರಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.

ಬದಲಾವಣೆಯ ಬಿಕ್ಕಟ್ಟು :- ಮಹಿಳೆಯರು ತಮ್ಮ ಗುರುತು ಮತ್ತು ಹೆಸರನ್ನು ಬದಲಾಯಿಸಿಕೊಳ್ಳಲು ಇಷ್ಟಪಡುವುದಿಲ್ಲ. ಮದುವೆ ಬಳಿಕ ಮನೆಯ ಕೆಲಸ, ವೃತ್ತಿ, ಜವಾಬ್ದಾರಿ ಎಲ್ಲವೂ ಬದಲಾಗುತ್ತದೆ. ಕುಟುಂಬ, ವೃತ್ತಿ ಎಲ್ಲವನ್ನು ಬ್ಯಾಲೆನ್ಸ್ ಮಾಡಿ ಸಾಗಬೇಕು.. ಈ ಪರಿಸ್ಥಿತಿಯಲ್ಲಿ ಬದಲಾವಣೆಯ ಬಿಕ್ಕಟ್ಟು ಬರಬಹುದು.
ಫ್ರೀಡಂ ಕೊರತೆ :- ಮದುವೆಯಾದ ಮೊದಲ ವರ್ಷದಲ್ಲಿ ನಿಮ್ಮ ಸಂಬಂಧಿಕರು ಅಥವಾ ಮನೆಯವರು ಹೀಗೆ ಹೆಚ್ಚು ಜನ ನಿಮ್ಮ ಸುತ್ತ ಮುತ್ತ ಇರುತ್ತಾರೆ, ಆಗ ನೀವು ಏನು ಮಾಡುತ್ತಿದ್ದೀರಿ, ಏನು ಹೇಳುತ್ತಿದ್ದೀರಿ ಎಂದು ಗೊತ್ತಾಗುವುದಿಲ್ಲ. ಇದರಿಂದ ನೀವು ಸ್ನೇಹಿತರ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಲು ಸಹ ಆಗುವುದಿಲ್ಲ.
ವಿರುದ್ಧ ಸ್ವಭಾವಗಳು :- ಮದುವೆ ನಂತರ ಮೊದಲ ವರ್ಷದಲ್ಲಿ ದಂಪತಿಗಳು ಒಂದೇ ಕಡೆ ಅಥವಾ ಒಂದೇ ರೀತಿಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಇದರಿಂದ ಒಳ್ಳೆಯ ವಿಚಾರಗಳು ಅಥವಾ ಭಿನ್ನಾಭಿಪ್ರಾಯಗಳು, ಅಥವಾ ತಪ್ಪುಗಳು ಆಗುವುದು ಸಹ ಸಹಜ. ಇದರಿಂದ ಮೊದಲ ವರ್ಷ ತೊಂದರೆ ಆಗಬಹುದು.

AMP Ad3

ಭವಿಷ್ಯದ ಭಯ :- ಮದುವೆಯಾದ ಮೊದಲ ವರ್ಷ ಮುಂದೆ ನಿಮ್ಮ ಜೀವನ ಏನಾಗಬಹುದು ಎನ್ನುವ ಭಯ ನಿಮಗೆ ಇರುತ್ತದೆ. ಮುಂದೆ ಇದೆಲ್ಲವೂ ಕೊನೆಯಾಗುತ್ತಾದೆಯೇ ಎನ್ನುವ ಆತಂಕ ಸಹ ಕಾಡಲು ಶುರು ಮಾಡುತ್ತದೆ. ಸಣ್ಣ ವಿಚಾರಗಳಿಂದಲೂ ನಿಮಗೆ ಭಯ ಅಭದ್ರತೆ ಉಂಟಾಗಬಹುದು.
ಕುಟುಂಬದ ಜೊತೆಗೆ ಹೊಂದಿಕೊಳ್ಳುವುದು :- ಮದುವೆಗಿಂತ ಮೊದಲು ನೀವಿಬ್ಬರು ಮಾತ್ರ ಇರುತ್ತೀರಿ, ಆದರೆ ಮದುವೆ ನಂತರ ನಿಮ್ಮಿಬ್ಬರ ಕುಟುಂಬ ಸಹ ಇರುತ್ತದೆ. ಹಾಗಿರುವಾಗ, ಕುಟುಂಬದ ಜೊತೆಗೆ ಹೊಂದಿಕೊಳ್ಳುವುದು ಮದುವೆಯಾದ ಮೊದಲ ವರ್ಷದಲ್ಲಿ ಕಷ್ಟ ಆಗುತ್ತದೆ.
ನಂಬಿಕೆ :- ಸಂಬಂಧ ಹೊಸದಾಗಿ ಶುರುವಾದಾಗ ನಂಬಿಕೆಯನ್ನು ಬಲಪಡಿಸಲು ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಒಂದೇ ದಿನದಲ್ಲಿ ಬದ್ಧತೆ ಮತ್ತು ನಂಬಿಕೆಯನ್ನು ನಿರ್ಮಿಸಲು ಆಗುವುದಿಲ್ಲ.

Comments (0)
Add Comment