ಅಬ್ಬಾ ಕೊನೆಗೂ ನಿಟ್ಟುಸಿರು ಬಿಟ್ಟ ಆರ್ಸಿಬಿ ಅಭಿಮಾನಿಗಳು. ಇನ್ನು ತಿಂಗಳುಗಳು ಬಾಕಿ ಇರುವಾಗ ಆರ್ಸಿಬಿ ಫ್ಯಾನ್ಸ್ ಸಿಕ್ತು ಗುಡ್ ನ್ಯೂಸ್: ಏನಂತೆ ಗೊತ್ತೇ??

AMP Ads

ಐಪಿಎಲ್ ಎಂದರೆ ಅಭಿಮಾನಿಗಳಿಗೆ ಎಷ್ಟರ ಮಟ್ಟಿಗೆ ಇಷ್ಟ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪ್ರತಿ ವರ್ಷ ಐಪಿಎಲ್ ಶುರು ಆಗುವಾಗಲು ಅದು ನಮಗೆ ತಿಳಿದುಬರುತ್ತದೆ. ಐಪಿಎಲ್ ನಲ್ಲಿ ಬಹಳ ದೊಡ್ಡ ಫ್ಯಾನ್ ಬೇಸ್ ಹೊಂದಿರುವ ಟೀಮ್ ಆರ್.ಸಿ.ಬಿ ಎಂದರೆ ತಪ್ಪಾಗುವುದಿಲ್ಲ. ವರ್ಷಗಳ ಕಳೆದು, ತಂಡ ಕಪ್ ಗೆಲ್ಲದೆ ಇದ್ದರು ಸಹ ಆರ್.ಸಿ.ಬಿ ಮೇಲಿನ ನಂಬಿಕೆಯನ್ನು ಅಭಿಮಾನಿಗಳು ಕಳೆದುಕೊಂಡಿಲ್ಲ. ಇಂದಿಗೂ ಆರ್.ಸಿ.ಬಿ ಅಭಿಮಾನಿಗಳು ತಂಡ ಕಪ್ ಗೆಲ್ಲಲಿ ಎಂದು ಕಾಯುತ್ತಿದ್ದಾರೆ.

ಇದೀಗ ಬಿಸಿಸಿಐ ಆರ್.ಸಿ.ಬಿ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದೆ. ಐಪಿಎಲ್ ವಿಚಾರದಲ್ಲಿ ಈಗಾಗಲೇ MI, KKR, ಪಂಜಾಬ್ ಸೂಪರ್ ಕಿಂಗ್ಸ್ ತಂಡಗಳು ತಮ್ಮ ಕೋಚ್ ಅನ್ನು ಬದಲಾಯಿಸಿದೆ. ಈ ನಡುವೆ ಬಿಸಿಸಿಐ ಸಹ ಒಂದು ಮುಖ್ಯವಾದ ನಿರ್ಧಾರ ತೆಗೆದುಕೊಂಡಿದೆ. ಅದೇನೆಂದರೆ 2023ರ ಐಪಿಎಲ್ ಇಂದ ಹೋಮ್ ಅಂಡ್ ಅವೇ ಮಾದರಿಯಲ್ಲಿ ಐ.ಪಿ.ಎಲ್ ಪಂದ್ಯಗಳನ್ನು ನಡೆಸುವ ಬಗ್ಗೆ ಬಿಸಿಸಿಐ ತೀರ್ಮಾನ ಕೈಗೊಂಡಿದೆ. ಪಂದ್ಯಗಳನ್ನಾಡುವ ಯಾವುದಾದರೂ ಒಂದು ತಂಡದ ಹೋಮ್ ಗ್ರೌಂಡ್ ನಲ್ಲಿ ಪಂದ್ಯ ನಡೆಯಲಿದೆ.

AMP Ad3

ಕಳೆದ 2 ವರ್ಷಗಳು ಕರೊನಾ ಕಾರಣದಿಂದ ನಿರ್ದಿಷ್ಟ ಗ್ರೌಂಡ್ ಗಳಲ್ಲಿ ಮಾತ್ರ ಐಪಿಎಲ್ ಪಂದ್ಯಗಳು ನಡೆಯುತ್ತಿದ್ದವು. ಆದರೆ ಈ ವರ್ಷ ಎಲ್ಲಾ ಗ್ರೌಂಡ್ ಗಳಲ್ಲೂ ಐಪಿಎಲ್ ನಡೆಯಲಿದ್ದು, ಆರ್.ಸಿ.ಬಿ ತಂಡದ ಕನಿಷ್ಠ ಎರಡು ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯಲಿದೆ. ಇದರಿಂದ ಅಭಿಮಾನಿಗಳಿಗೆ ಬಹಳ ಸಂತೋಷವಾಗಿದ್ದು, ಮತ್ತೊಮ್ಮೆ ಆರ್.ಸಿ.ಬಿ ಕಹಳೆ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಮೊಳಗಲಿದೆ.

Comments (0)
Add Comment