ಮೈಸೂರು ದಸರಾದಲ್ಲಿ ಮಿಂಚು ಹರಿಸಲು ಸಿದ್ದವಾದ ಕರುನಾಡಿನ ಮಗ ಅಪ್ಪು: ಎಲ್ಲದಕ್ಕೂ ಸಾಕ್ಷಿಯಾಗಲಿದೆ ದೊಡ್ಮನೆ ಕುಟುಂಬ. ತೆಗೆದುಕೊಂಡಿರುವ ನಿರ್ಧಾರ ಏನು ಗೊತ್ತೇ??

AMP Ads

ಮೈಸೂರು ದಸರಾದಲ್ಲಿ ಈ ವರ್ಷ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ವಿಶೇಷವಾದ ಗೌರವ ಸಲ್ಲಿಸಲಾಗುತ್ತಿದೆ. ದಸರಾ ಸಿನಿಮೋತ್ಸವದಲ್ಲಿ ಪುನೀತ್ ರಾಜ್ ಕುಮಾರ್ ಅವರ 6 ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಅಪ್ಪು ಅವರಿಗಾಗಿ ಒಂದು ದಿನವನ್ನು ಮೀಸಲಾಗಿ ಇಡಲಾಗುತ್ತಿದೆ. ಅಪ್ಪು ಅವರು ಹೋದ ಬಳಿಕ ದೊಡ್ಮನೆ ಕುಟುಂಬ ಹಾಗೂ ಅಪ್ಪು ಅವರ ಅಭಿಮಾನಿಗಳಿಗೆ ಇಂದಿಗು ಆ ನೋವು ಕಾಡುತ್ತಲಿದೆ. ಅಪ್ಪು ಅವರು ಇಲ್ಲವಾದ ಮೇಲೆ ಅವರು ಅಭಿನಯಿಸಿರುವ ಜೇಮ್ಸ್ ಹಾಗೂ ಲಕ್ಕಿ ಮ್ಯಾನ್ ಎರಡು ಸಿನಿಮಾಗಳು ಬಿಡುಗಡೆ ಆದವು, ಆ ಎರಡು ಸಿನಿಮಾಗಳನ್ನು ಸಹ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಥಿಯೇಟರ್ ನಲ್ಲಿ ವೀಕ್ಷಿಸಿರಲಿಲ್ಲ.

ಆದರೆ ಅಪ್ಪು ಅವರು ಇಲ್ಲವಾದ ಬಳಿಕ ಅಶ್ವಿನಿ ಅವರು ಅಪ್ಪು ಅವರ ಸಿನಿಮಾವನ್ನು ದಸರಾ ಸಿನಿಮೋತ್ಸವದಲ್ಲಿ ಇದೇ ಮೊದಲ ಬಾರಿಗೆ ವೀಕ್ಷಿಸಲಿದ್ದಾರೆ. ಅಪ್ಪು ಅವರ ಬೆಟ್ಟದ ಹೂವು, ಅಂಜನಿ ಪುತ್ರ, ಪೃಥ್ವಿ, ಯುವರತ್ನ, ಮೈತ್ರಿ ಮತ್ತು ರಾಜಕುಮಾರ ಸಿನಿಮಾವನ್ನು ಪ್ರದರ್ಶಿಸಲಾಗುತ್ತಿದ್ದು, ಅಶ್ವಿನಿ ಅವರು ಅಭಿಮಾನಿಗಳ ಜೊತೆಗೆ ಬೆಟ್ಟದ ಹೂವು ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ಸಿನಿಮೋತ್ಸವಕ್ಕೆ ದೊಡ್ಮನೆಗೆ ವಿಶೇಷವಾಗಿ ಆಮಂತ್ರಣ ನೀಡಲಾಗಿದೆ. ಹಾಗೂ ಸಿನಿಮೋತ್ಸವವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರೊಡನೆ ಶಿವಣ್ಣ ಉದ್ಘಾಟನೆ ಮಾಡಲಿದ್ದಾರೆ.

AMP Ad3

ಅಪ್ಪು ಅವರ ಸಿನಿಮಾಗಳ ಜೊತೆಗೆ, 56 ಕನ್ನಡ ಸಿನಿಮಾಗಳು, 28 ಪನೋರಮಾ ಸಿನಿಮಾಗಳು, ಪ್ರಶಸ್ತಿ ವಿಜೇತ ಸಿನಿಮಾಗಳನ್ನು ಸೇರಿಸಿ, ಒಟ್ಟು 112 ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3ರ ವರೆಗೂ ಸಿನಿಮೋತ್ಸವ ನಡೆಯಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರಿಗೂ ಗೌರವ ಸಲ್ಲಿಸಲಾಗಲಿದೆ. ಈ ವಿಷಯದ ಬಗ್ಗೆ ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಟಿ.ಕೆ.ಹರೀಶ್ ಅವರು ತಿಳಿಸಿದ್ದಾರೆ. ಸಿನಿಮೋತ್ಸವದಲ್ಲಿ ದೊಡ್ಮನೆ ಕುಟುಂಬದ ಜೊತೆಗೆ ಕುಳಿತು ಅಪ್ಪು ಅವರ ಸಿನಿಮಾ ನೋಡುವುದು ಬಹಳ ವಿಶೇಷ ಎಂದರೆ ತಪ್ಪಲ್ಲ. ಅಪ್ಪು ಅಬರ್ಸ್ ಅಭಿಮಾನಿಗಳಿಗೆ ಇದು ಬಹಳ ಭಾವುಕ ಘಳಿಗೆ ಆಗಿರುತ್ತದೆ.

Comments (0)
Add Comment