ಇದ್ದಕ್ಕಿದ್ದ ಹಾಗೆ ಉಸಿರು ನಿಲ್ಲಿಸಿದ ಬಿಎಸ್ಸಿ ವಿದ್ಯಾರ್ಥಿ: ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ರೊಚ್ಚಿಗೆದ್ದ ಜನ. ಯಾಕೆ ಗೊತ್ತೇ??

AMP Ads

ತೆಲಂಗಾಣ ರಾಜ್ಯದ ಕುಮಾರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಇರುವ ಬುಡಕಟ್ಟು ಜನಾಂಗದ ಕಲ್ಯಾಣ ಪದವಿ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ಪದವಿ ಓದುತ್ತಿರುವ ವಿದ್ಯಾರ್ಥಿನಿ ದಿಢೀರ್ ಎಂದು ಮೃತಪಟ್ಟಿದ್ದಾರೆ. ವಿದ್ಯಾರ್ಥಿನಿಯ ಹೆಸರು ಲಾಗುಡ್ಯಾ ಸಂಗೀತ, ಈಕೆಗೆ ಕಳೆದ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು, ಆದರೆ ಹಾಸ್ಟೆಲ್ ನವರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸದೆ, ಆಸ್ಪತ್ರೆಗೆ ಸೇರಿಸುವುದನ್ನು ತಡ ಮಾಡಿರುವ ಕಾರಣ, ಚಿಕಿತ್ಸೆ ಕೊಡುತ್ತಿರುವಾಗಲೇ ಸಂಗೀತ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಒಂದೇ ವಾರದ ಸಮಯದಲ್ಲಿ ಇದೇ ರೀತಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಗೀತ ತಂದೆ ತಾಯಿ ಸಹ ಹಾಸ್ಟೆಲ್ ಸಿಬ್ಬಂದಿಗಳ ಮೇಲೆ ದೂರು ನೀಡಿದ್ದಾರೆ. ಪ್ರತಿಭಟನೆಗೆ ಕುಳಿತು, ಈ ರೀತಿ ಆಗಲು ಕಾರಣ ಕಾಲೇಜಿನ ಆಡಳಿತ ವಿಭಾಗ, ಅವರ ಬೇಜವಾಬ್ದಾರಿತನವೇ ಇದಕ್ಕೆ ಕಾರಣ ಎಂದು ದೂರು ದಾಖಲಿಸಿದ್ದಾರೆ. ಸಂಗೀತ ಅವರನ್ನು ಕರೀಂನಗರದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡುತ್ತಿರುವಾಗಲೇ ಆಕೆ ಕೊನೆಯುಸಿರೆಳೆದಿದ್ದಾರೆ. ಕಾಲೇಜು ಮಂಡಳಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಗೀತ ಅವರ ತಂದೆ ತಾಯಿ ಬಹುಜನ ಸಮಾಜ ಪಾರ್ಟಿ ಆಶಿಫಾಬಾದ್ ನ ಪೊಲೀಸ್ ವರಿಷ್ಠಾಧಿಕಾರಿ ಕೆ.ಸುರೇಶ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.

AMP Ad3

ಸುರೇಶ್ ಕುಮಾರ್ ಅವರು ಈ ಬಗ್ಗೆ ತನಿಖೆ ಶುರು ಮಾಡಿದ್ದು, ಮೃತ ಹುಡುಗಿಯ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಆಗಸ್ಟ್ 24ರಂದು ಪಂಚಿಕಲ್ ಪೇಟೆ ಮಂಡಲದ ಯಳ್ಳೂರು ಗ್ರಾಮದ ಬುಡಕಟ್ಟು ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿ 15 ವರ್ಷದ ಆಲಂ ರಾಜೇಶ್ ಚಿಕಿತ್ಸೆ ಫಲ ನೀಡದೆ ಕಾಘಜ್ ನಗರದಲ್ಲಿ ಮೃತಪಟ್ಟಿದ್ದಾರೆ, ಆಗಸ್ಟ್ 28ರಂದು ಸಿರ್ಪುರ ಮಂಡಲ ಕೇಂದ್ರದ ಸಮಾಜ ಕಲ್ಯಾಣ ವಸತಿ ಶಾಲೆಯಲ್ಲಿ ಓದುತ್ತಿರುವ 5ನೇ ತರಗತಿ ವಿದ್ಯಾರ್ಥಿನಿ ಗೋಮಾಸ ಅಶ್ವಿನಿ ಕರೀಂನಗರದ ಆಸ್ಪತೆಯಲ್ಲಿ ಮೃತಪಟ್ಟಿದ್ದಾರೆ. ಇದೀಗ ಸಂಗೀತ ಸಹ ಮೃತಪಟ್ಟಿದ್ದಾರೆ. ಈ ರೀತಿ ಒಂದು ವಾರದ ಸಮಯದಲ್ಲಿ ಮೂರು ವಿದ್ಯಾರ್ಥಿಗಳಿಗೆ ಹೀಗಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Comments (0)
Add Comment