ಯಾರೇ ಆಗಲಿ ಇಂತಹ ಗಂಡನನ್ನು ಪಡೆಯಲು ಪುಣ್ಯ ಮಾಡಿರಬೇಕು: ಅದೃಷ್ಟ ಮಾಡಿರುವ ಮಹಿಳೆಯರಿಗೆ ಎಂತಹ ಗಂಡ ಸಿಗುತ್ತಾನೆ ಗೊತ್ತೆ??

AMP Ads

ಮಹಾಭಾರತದಲ್ಲಿ ಬರುವ ಮಹಾರಾಜ ವಿಧುರ ಮಹಾಭಾರತದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಇವರು ವಿವೇಕ ಹೊಂದಿದ ಬುದ್ಧಿವಂತ ರಾಜಕಾರಣಿಗಳಲ್ಲಿ ಒಬ್ಬರು. ಇವರು ತಮ್ಮ ನೀತಿಗಳ ಮೂಲಕ ಜೀವನದಲ್ಲಿ ಹೇಗಿರಬೇಕು ಎನ್ನುವುದನ್ನು ಕಳಿಸಿದ್ದಾರೆ, ವಿಧುರನು ತಿಳಿಸಿದ ವಿಷಯಗಳನ್ನು ವಿಧುರ ನೀತಿಯಲ್ಲಿ ಸಂಪೂರ್ಣವಾಗಿ ಹೇಳಲಾಗಿದೆ. ಇವರು ಪುರುಷರು ಜೀವನದಲ್ಲಿ ಹೇಗಿರಬೇಕು ಎಂದು ತಿಳಿಸಿದ್ದಾರೆ. ಈ ಗುಣಗಳನ್ನು ಹೊಂದಿರುವ ಪುರುಷರನ್ನು ಮಹಿಳೆಯರು ಪಡೆದರೆ, ನಿಜಕ್ಕೂ ಅದೃಷ್ಟವಂತರಾಗುತ್ತಾರೆ. ಪುರುಷರಲ್ಲಿ ಇರಬೇಕಾದ ಆ ಗುಣಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಉಪಕಾರ :- ವಿಧುರ ನೀತಿಯಲ್ಲಿ ತಿಳಿಸಿರುವ ಪ್ರಕಾರ, ಉಪಕಾರ ಮಾಡುವವರನ್ನು ಭೂಮಿಯಲ್ಲಿ ಮಾತ್ರವಲ್ಲ ಸ್ವರ್ಗದಲ್ಲಿ ಸಹ ಗೌರವಿಸಲಾಗುತ್ತದೆ. ಪರೋಪಕಾರ ಮಾಡುವ ವ್ಯಕ್ತಿಗೆ ತನ್ನ ಒಳ್ಳೆಯತನ ಗೌರವ ಮತ್ತು ಖ್ಯಾತಿ ತಂದುಕೊಡುತ್ತದೆ. ಈ ಗುಣ ಇರುವ ಗಂಡನನ್ನು ಮಹಿಳೆ ಪಡೆದರೆ, ಆಕೆ ಅದೃಷ್ಟವಂತೆ ಆಗಿರುತ್ತಾಳೆ.
ಪ್ರಾಮಾಣಿಕತೆ :- ಇದು ಒಬ್ಬ ಮನುಷ್ಯನಲ್ಲಿ ಇರಬೇಕಾದ ಬಹಳ ಮುಖ್ಯವಾದ ಗುಣ. ಈ ಗುಣ ಇರುವ ವ್ಯಕ್ತಿಗೆ ಸಮಾಜದಲ್ಲಿ ಗೌರವ ಮತ್ತು ಒಳ್ಳೆಯ ಮರಿಯಾದೆ ಸಿಗುತ್ತದೆ. ಮಕ್ಕಳು ಕೂಡ ಇವರನ್ನು ಅನುಸರಿಸುತ್ತಾರೆ, ಹಾಗೂ ಅವರು ಸಹ ಸುಸಂಸ್ಕೃತ ಹಾಗೂ ಪ್ರಾಮಾನಿಕರಾಗಿರುತ್ತಾರೆ. ಇಂತಹ ಗಂಡ ಮತ್ತು ಮಕ್ಕಳನ್ನು ಪಡೆಯುವ ಮಹಿಳೆ, ಜೇವನದಲ್ಲಿ ಯಾವಾಗಲೂ ಸಂತೋಷವಾಗಿರುತ್ತಾಳೆ.

AMP Ad3

ಧರ್ಮ ಮತ್ತು ದಾನ :- ಬಡವರಿಗೆ ದಾನ ಮಾಡುವುದು, ತಮ್ಮ ಬಳಿ ಇರುವ ಹಣವನ್ನು ಸರಿಯಾಗಿ ಬಳಕೆ ಮಾಡುವ ಒಂದು ರೀತಿ ಎಂದು ಹೇಳಲಾಗುತ್ತದೆ. ತನ್ನ ಬಳಿ ಇರುವ ಹಣದಲ್ಲಿ ಕುಟುಂಬದ ಬೇಕು ಬೇಡಗಳನ್ನು ನಿರ್ವಹಿಸಿ, ಅದರ ಜೊತೆಗೆ ದಾನ ಧರ್ಮ ಮಾಡುತ್ತಾ ಜೀವನ ಸಾಗಿಸುವ ವ್ಯಕ್ತಿಗೆ ಸಿಗುವ ಪುಣ್ಯ, ಹಲವು ತಲೆಮಾರುಗಳ ವರೆಗೂ ಅವರ ಜೊತೆಯಲ್ಲೇ ಇರುತ್ತದೆ. ಆ ಕುಟುಂಬದ ಮೇಲೆ ದೇವರ ಆಶೀರ್ವಾದ ಸದಾ ಇರುತ್ತದೆ. ಇಂಥಹ ವ್ಯಕ್ತಿಯ ಮನೆಯಲ್ಲಿ ಸಂತೋಷ ಸಮೃದ್ಧಿ ಹೆಚ್ಚಾಗಿರುತ್ತದೆ. ಇಂತಹ ಗಂಡನನ್ನು ಪಡೆಯುವ ಹೆಂಡತಿ ಜೀವನದಲ್ಲಿ ಬಹಳ ಸಂತೋಷವಾಗಿದ್ದು, ಸ್ವರ್ಗಸುಖ ಅನುಭವಿಸುತ್ತಾಳೆ ಎಂದು ಹೇಳಲಾಗುತ್ತದೆ.

Comments (0)
Add Comment