ಸಿಲ್ಕ್ ಸ್ಮಿತಾ ರವರ ಫೋನ್ ಅನ್ನು ಆ ಟಾಪ್ ನಟ ಅವತ್ತು ಎತ್ತಿ ಮಾತನಾಡಿದ್ದರೆ ಆಕೆ ಉಳಿಯುತ್ತಿದ್ದಳು. ತೆರೆ ಹಿಂದೆ ನಡೆದ ಕತೆಯೇನು ಗೊತ್ತೇ??

AMP Ads

ಬೆಳ್ಳಿತೆರೆಯಲ್ಲಿ ಗ್ಲಾಮರಸ್ ಇಮೇಜ್ ಹೊಂದ್ದ ನಟಿ ಸಿಲ್ಕ್ ಸ್ಮಿತಾ. ತಮ್ಮ ನಟನೆ, ಸೌಂದರ್ಯ, ಕುಣಿತದಿಂದ ಅಭಿಮಾನಿಗಳನ್ನು ರಂಜಿಸಿದ ಈ ಚೆಲುವೆ ಅರ್ಧದಲ್ಲೇ ಜೀವನ ಮುಗಿಸಿಕೊಂಡಿದ್ದು ಗೊತ್ತೇ ಇದೆ. ಸಿಲ್ಕ್ ಸ್ಮಿತಾ ಆತ್ಮಹತ್ಯೆ ಚಿತ್ರಜಗತ್ತಿಗೆ ಬಿಗ್ ಶಾಕ್ ನೀಡಿತ್ತು. 200ಕ್ಕೂ ಹೆಚ್ಚು ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಸಿಲ್ಕ್ ಸ್ಮಿತಾ ಅವರ ಹಠಾತ್ ಸಾವು ಚಿತ್ರರಂಗದ ಗಣ್ಯರನ್ನು ದಿಗ್ಭ್ರಮೆಗೊಳಿಸಿತ್ತು. ಅನೇಕ ಸಿನಿಮಾಗಳಲ್ಲಿ ಸಿಲ್ಕ್ ಅವರ ವಿಶೇಷ ಹಾಡುಗಳು ಮತ್ತು ರೊಮ್ಯಾಂಟಿಕ್ ನೃತ್ಯಗಳು ಅಪಾರ ಕ್ರೇಜ್ ತಂದಿವೆ. ಬಾವಲು ಸಯ್ಯ, ಮರದಾಳು ಸಯ್ಯಾ ಹಾಡು ತೆಲುಗಿನಲ್ಲಿ ಹಾಟ್ ಸಾಂಗ್ ಆಗಿದೆ. ಸಿಲ್ಕ್ ಕೆಲವು ಸಿನಿಮಾದಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ.

ಒಬ್ಬ ನಿರ್ದೇಶಕನ ಹೆಂಡತಿ ಆಕೆಯನ್ನು ನೋಡಿ ತುಂಬಾ ಸುಂದರವಾಗಿದ್ದಾಳೆ ಎಂದು ಹೇಳಿದ್ದರು, ಆದ್ದರಿಂದ ಸಿಲ್ಕ್ ಸ್ಮಿತಾ ಅವರಿಗೆ ಸೈಡ್ ಡ್ಯಾನ್ಸರ್ ಆಗಿ ಅವಕಾಶ ಸಿಕ್ಕಿತು.ನಂತರ, ಆಕೆ ತನ್ನ ನೋಟದಿಂದ ಪುರುಷರನ್ನು ಅಮಲೇರಿಸಿ ಸಾಲು ಸಾಲು ಆಫರ್ ಗಳನ್ನು ಪಡೆದರು. ಸಿಲ್ಕ್ ಸ್ಮಿತಾ ಅವರ ಡೇಟ್ಸ್ ಗಾಗಿ ಸ್ಟಾರ್ ಹೀರೋಗಳೂ ಕಾಯುವ ಮಟ್ಟಕ್ಕೆ ಬೆಳೆದಿದ್ದರು. ಅವಕಾಶಗಳು ಕ್ಷೀಣಿಸುತ್ತಿದ್ದಂತೆ, ಜನರು ಅವರಿಗೆ ಮೋಸ ಮಾಡಿದರು ಅದರಿಂದ ಅಂತಿಮವಾಗಿ ಆಕೆ ಖಿನ್ನತೆಗೆ ಒಳಗಾದರು. ಕೊನೆಗೆ ಒಬ್ಬ ವ್ಯಕ್ತಿ ತನಗೆ ಮೋಸ ಮಾಡಿದ ಕಾರಣ, ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದೇನೆ ಎಂದು ಸಿಲ್ಕ್ ಸ್ಮಿತಾ ಪತ್ರ ಬರೆದಿದ್ದರು. ಕನ್ನಡದ ಸ್ಟಾರ್ ಹೀರೋ ರವಿಚಂದ್ರನ್ ಮತ್ತು ಸಿಲ್ಕ್ ಸ್ಮಿತಾ ಒಳ್ಳೆಯ ಸ್ನೇಹಿತರು. ಹಳ್ಳಿ ಮೇಷ್ಟ್ರು ಎಂಬ ಸಿನಿಮಾದಲ್ಲಿ ಇವರಿಬ್ಬರೂ ಮೊಟ್ಟಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು

AMP Ad3

ಸಿಲ್ಕ್ ತಮ್ಮ ಜೀವನದ ಎಲ್ಲಾ ವಿಷಯಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂದು ರವಿಚಂದ್ರನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸಾಯುವ ಹಿಂದಿನ ದಿನವೂ ಸಿಲ್ಕ್ ಸ್ಮಿತಾ ಅವರು ರವಿಚಂದ್ರನ್ ಅವರಿಗೆ ಕರೆ ಮಾಡಿದ್ದಾಗಿ ರವಿಚಂದ್ರನ್ ಹೇಳಿದ್ದಾರೆ. ಆದರೆ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಕಾರಣ ರವಿಚಂದ್ರನ್ ಅವರು ಫೋನ್ ತೆಗೆಯಲಾಗಲಿಲ್ಲ ಎಂದಿದ್ದಾರೆ. ಮಾಮೂಲಿ ಕರೆಯಾದ್ದರಿಂದ ಮತ್ತೆ ಕರೆ ಕೂಡ ಮಾಡಲಿಲ್ಲ ಎಂದ ಅವರು, ಫೋನ್ ಎತ್ತಿದರೆ ಸಿಲ್ಕ್ ಸ್ಮಿತಾ ಬದುಕುಳಿಯುತ್ತಿದ್ದರೋ ಏನೋ ಎಂದಿದ್ದಾರೆ. 1996 ಸೆಪ್ಟೆಂಬರ್ 23ರಂದು ಚೆನ್ನೈನ ಅಪಾರ್ಟ್ ಮೆಂಟ್ ನಲ್ಲಿ ಸ್ಮಿತಾ ಸಾವನ್ನಪ್ಪಿದ್ದರು. ಆದರೆ ಇದಕ್ಕೆ ಹಲವು ಕಾರಣಗಳಿವೆ ಎನ್ನುತ್ತವೆ ಮೂಲಗಳು. ಆಕೆಯ ಪ್ರೇಮ ಸಂಬಂಧಗಳು ವಿಫಲವಾದವು ಮತ್ತು ಸಿನಿಮಾ ನಿರ್ಮಾಣದ ಪ್ರಯತ್ನದಲ್ಲಿ ಆಕೆಗೆ ಭಾರಿ ನಷ್ಟ ಉಂಟಾಗಿದೆ ಎಂಬ ವರದಿಗಳಿವೆ. ಅದೂ ಅಲ್ಲದೆ ಕುಡಿತದ ಚಟವೂ ಆಕೆಗೆ ಇತ್ತು ಎನ್ನಲಾಗುತ್ತದೆ.

Comments (0)
Add Comment