ಹಂಗಾಮಿ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದರೂ ಕೂಡ ರಾಹುಲ್ ಬಂಡ ತಕ್ಷಣ ರಾಹುಲ್ ಗೆ ಕ್ಯಾಪ್ಟನ್ ಪಟ್ಟ ಕೊಟ್ಟಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಧವನ್: ಹೇಳಿದ್ದೇನು ಗೊತ್ತೆ??

AMP Ads

ಟೀಮ್ ಇಂಡಿಯಾದ ಚಾಂಪ್ ಭರವಸೆಯ ಆಟಗಾರ ಕೆ.ಎಲ್.ರಾಹುಲ್ ಅವರು ಇದೀಗ ಟೀಮ್ ಇಂಡಿಯಾಗೆ ವಾಪಸ್ ಬಂದಿದ್ದಾರೆ. ಐಪಿಎಲ್ ಪಂದ್ಯಗಳ ಬಳಿಕ ರಾಹುಲ್ ಅವರು ಅನಾರೋಗ್ಯದಿಂದ ಭಾರತ ತಂಡದಿಂದ ದೂರ ಉಳಿದರು. ಇದೀಗ ಜಿಂಬಾಬ್ವೆ ತಂಡದ ವಿರುದ್ಧ ನಡೆಯುತ್ತಿರುವ ಮೂರು ಸರಣಿ ಪಂದ್ಯಗಳಿಗೆ ಭಾರತ ತಂಡದ ಕ್ಯಾಪ್ಟನ್ ಆಗಿ ಕೆ.ಎಲ್.ರಾಹುಲ್ ಅವರು ಆಯ್ಕೆಯಾಗಿದ್ದಾರೆ. ರಾಹುಲ್ ಅವರು ಮರಳಿ ಬಂದಿರುವುದಕ್ಕೆ ಶಿಖರ್ ಧವನ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಮೊದಲು ಜಿಂಬಾಬ್ವೆ ತಂಡದ ಸರಣಿ ಪಂದ್ಯಗಳಿಗೆ ಶಿಖರ್ ಧವನ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿತ್ತು, ಆದರೆ ಕೆ.ಎಲ್.ರಾಹುಲ್ ಅವರು ಫಿಟ್ನೆಸ್ ಟೆಸ್ಟ್ ಪಾಸ್ ಆದ ಬಳಿಕ ತಕ್ಷಣವೇ ಅವರನ್ನು ಭಾರತ ತಂಡಕ್ಕೆ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದ್ದು, ಶಿಖರ್ ಧವನ್ ಅವರಿಗೆ ಉಪನಾಯಕನ ಸ್ಥಾನ ನೀಡಲಾಗಿದೆ, ಇನ್ನು ಈ ವಿಚಾರದ ಬಗ್ಗೆ ಶಿಖರ್ ಧವನ್ ಅವರು ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಅವರು ಮರಳಿ ಬಂದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ರಾಹುಲ್ ಬಂದಿರುವುದು, ಆರಂಭಿಕ ಆಟಗಾರನ ಸ್ಥಾನಕ್ಕೆ ಒಳ್ಳೆಯದು, ಹಾಗೂ ರಾಹುಲ್ ಇದರ ಪ್ರಯೋಜನ ಪಡೆಯುತ್ತಾರೆ ಎಂದಿದ್ದಾರೆ ಶಿಖರ್ ಧವನ್.

AMP Ad3

ಇನ್ನು ಕೆ.ಎಲ್. ರಾಹುಲ್ ಅವರು ಈಗ ಭಾರತ ತಂಡದ ನಾಯಕನಾಗಿ ಜಿಂಬಾಬ್ವೆ ನಡುವಿನ ಪಂದ್ಯಗಳನ್ನು ಮುನ್ನಡೆಸಲಿದ್ದಾರೆ. ಮೊದಲಿಗೆ ಭಾರತದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಗಳನ್ನು ಬಿಟ್ಟರೆ, ಬೇರೆ ಇಂಗ್ಲೆಂಡ್ ಸೀರೀಸ್, ಹಾಗೂ ಐರ್ಲೆಂಡ್ ಸೀರೀಸ್ ನಲ್ಲಿ ಕೆ.ಎಲ್.ರಾಹುಲ್ ಪಾಲ್ಗೊಳ್ಳಲು ಆಗಲಿಲ್ಲ. ಆ ಸಮಯದಲ್ಲಿ ಅವರು ಜರ್ಮಿನಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ರಾಹುಲ್ ಅವರು ಫಿಟ್ ಆಗಿದ್ದು, ಮರಳಿ ನ್ಯಾಷನಲ್ ಟೀಮ್ ಗೆ ಬಂದಿರುವುದು ಅವರ ಅಭಿಮಾನಿಗಳಿಗೆ ಮತ್ತು ಭಾರತ ತಂಡಕ್ಕೆ ಒಳ್ಳೆಯದು ಎಂದೇ ಹೇಳಬಹುದು.

Comments (0)
Add Comment