ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದಿಂದ ವಿವಿಧ ಸೌಲಭ್ಯ ಪಡೆಯುವವರಿಗೆ ಶಾಕ್ ನೀಡಿದ ಕೇಂದ್ರ: ಮಹತ್ವದ ಆದೇಶ ಹೊರಡಿಸಿ ಹೇಳಿದ್ದೇನು ಗೊತ್ತೆ??

AMP Ads

ಈಗಿನ ಕಾಲದಲ್ಲಿ ನಮ್ಮ ಭಾರತ ದೇಶದಲ್ಲಿ ಪ್ರತಿಯೊಬ್ಬರಿಗೂ ಬಹಳ ಮುಖ್ಯವಾದದ್ದು ಆಧಾರ್ ಕಾರ್ಡ್. ದೇಶದ ನಾಗರೀಕರಲ್ಲಿ ಆಧಾರ್ ಕಾರ್ಡ್ ಇದ್ದರೆ ಮಾತ್ರ ಅವರು ಸರ್ಕಾರದ ಪ್ರಯೋಜನ ಪಡೆಯಲು ಸಾಧ್ಯ. ಸಬ್ಸಿಡಿ ಗಳು, ಹಾಗೂ ಇನ್ನಿತರ ಪ್ರಯೋಜನಗಳನ್ನು ಆಧಾರ್ ಕಾರ್ಡ್ ಇಂದ ಪಡೆಯಬಹುದು. ಇದೀಗ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ವಿಚಾರದಲ್ಲಿ ಇನ್ನು ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದೆ.

ಇಷ್ಟು ದಿನಗಳ ಕಾಲ, ಒಂದು ವೇಳೆ ಒಬ್ಬ ವ್ಯಕ್ತಿಯ ಬಳಿ ಆಧಾರ್ ಕಾರ್ಡ್ ಇಲ್ಲದೆ ಹೋದರೆ, ಆತ ಬೇರೆ ಪ್ರೂಫ್ ಯಾವುದಾದರೂ ಒಂದನ್ನು ನೀಡಿ, ಸರ್ಕಾರದಿಂದ ಸಿಗುವ ಸಬ್ಸಿಡಿ, ಲೋನ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆಯಬಹುದಾಗಿತ್ತು. ಇದು ಹಲವು ಅಕ್ರಮ ಕೆಲಸಕ್ಕೂ ಬಳಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಕಲಿ ಡಾಕ್ಯುಮೆಂಟ್ ಗಳನ್ನು ನೀಡಿ, ಜನರು ಸರ್ಕಾರದ ಸೌಲಭ್ಯ ಪಡೆದಿರುವ ಘಟನೆ ನಡೆದಿದೆ. ಆದ ಕಾರಣದಿಂದ ಕೇಂದ್ರ ಸರ್ಕಾರವು ಈ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದೆ.

AMP Ad3

ಸರ್ಕಾರದ ಹೊಸ ನಿಯಮರ ಪ್ರಕಾರ, ಒಬ್ಬ ವ್ಯಕ್ತಿ ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಲು, ಆಧಾರ್ ನಂಬರ್ ನೀಡಲೇಬೇಕು. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದೆ ಹೋದರೆ, ಆಧಾರ್ ಕಾರ್ಡ್ ಗೆ ಅಪ್ಲೈ ಮಾಡಿ, ಅದಕ್ಕೆ ಕೊಡಲಾಗುವ ಚೀಟಿಯನ್ನು ತೋರಿಸಬೇಕು. ಆಗ ಮಾತ್ರ ಸರ್ಕಾರದ ಸೌಲಭ್ಯವನ್ನು ಪಡೆಯಲು ಸಾಧ್ಯ ಎಂದು ಸರ್ಕಾರ ಹೊಸ ರೂಲ್ಸ್ ಜಾರಿಗೆ ತಂದಿದೆ. ಸರ್ಕಾರದ ನಿಯಮವನ್ನು ಪಾಲಿಸಿ, ಅಕ್ರಮ ವಿಚಾರಗಳನ್ನು ತಡೆಗಟ್ಟಲು ಈ ರೂಲ್ಸ್ ತರಲಾಗಿದೆ.

Comments (0)
Add Comment