ಆಯ್ಕೆ ಸಮಿತಿಯ ನಿರ್ಧಾರದಿಂದ ಮತ್ತಷ್ಟು ಅಸಮಾಧಾನ: ಸ್ಟಾರ್ ಆಟಗಾರನನ್ನು ಕೈಬಿಟ್ಟಿದ್ದಕ್ಕೆ ಬೇಸರ. ಯಾರು ಗೊತ್ತೇ??

AMP Ads

ಪ್ರಸ್ತುತ ಕ್ರಿಕೆಟ್ ಪ್ರೇಮಿಗಳ ಕಣ್ಣು ಏಷ್ಯಾಕಪ್ ಮೇಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾಕಪ್ ಪಂದ್ಯಗಳು ಶುರುವಾಗಲಿದ್ದು, ಈಗಾಗಲೇ ಆಯ್ಕೆ ಸಂಸ್ಥೆಯು ಏಷ್ಯಾಕಪ್ ಗೆ ಸೆಲೆಕ್ಟ್ ಆಗಿರುವ 15 ಆಟಗಾರರ ತಂಡವನ್ನು ಪ್ರಕಟಣೆ ಮಾಡಿದೆ. ಈ ಬಾರಿ ಬಿಸಿಸಿಐ ಆಯ್ಕೆ ಮಾಡಿರುವ ಪ್ಲೇಯರ್ ಗಳನ್ನು ನೋಡಿ, ಅಭಿಮಾನಿಗಳು ಮತ್ತು ಹಿರಿಯ ಆಟಗಾರರು ಸಹ ಶಾಕ್ ಆಗಿದ್ದಾರೆ. ಊಹೆ ಮಾಡಿರದಂತಹ ಆಟಗಾರರನ್ನು ಈ ಬಾರಿ ಬಿಸಿಸಿಐ ಆಯ್ಕೆ ಮಾಡಿಕೊಂಡಿದೆ.

ಇದೀಗ ಏಷ್ಯಾಕಪ್ ಗಾಗಿ ವಿರಾಟ್ ಕೋಹ್ಲಿ ಅವರು ಒಂದು ತಿಂಗಳ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ ವಾಪಸ್ ಬಂದಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರನ್ನು ತಂಡಕ್ಕೆ ಮರಳಿ ಬಂದಿರುವುದು ಸಹ ಅನೇಕರಿಗೆ ಆಶ್ಚರ್ಯ ತಂದಿದೆ. ಆದರೆ ಇದೀಗ ಸ್ಟಾರ್ ಆಟಗಾರರೊಬ್ಬರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿಲ್ಲ ಎಂದು ಭಾರತದ ಮಾಜಿ ಕ್ರಿಕೆಟ್ ಆಟಗಾರ, ಕಿರಣ್ ಮೋರೆ ಅಭಿಪ್ರಾಯ ವ್ಯಕ್ತಪಡಿಸಿ, ಅಸಮಾಧಾನ ತಿಳಿಸಿದ್ದಾರೆ. ಇವರು ಹೇಳಿರುವುದು, ಮೊಹಮ್ಮದ್ ಶಮಿ ಅವರ ಬಗ್ಗೆ. ಮೊಹಮ್ಮದ್ ಶಮಿ ಅವರನ್ನು ಏಷ್ಯಾಕಪ್ ಪಂದ್ಯಗಳಿಗೆ ಭಾರತದ ಪರವಾಗಿ ಆಡಲು ಆಯ್ಕೆ ಮಾಡಿಕೊಂಡಿಲ್ಲ.

AMP Ad3

ಹಾಗಾಗಿ ಕಿರಣ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಟಿ20 ವಿಶ್ವಕಪ್ ಪಂದ್ಯಗಳಿಗೆ ಕೋಚ್ ರಾಹುಲ್ ದ್ರಾವಿಡ್ ಅವರು ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡುತ್ತಾರೆ, ಏಷ್ಯಾಕಪ್ ನಲ್ಲಿದ್ದ ತಂಡವೇ, ಟಿ20 ವಿಶ್ವಕಪ್ ನಲ್ಲಿಯೂ ಇರುವುದಿಲ್ಲೆ ಎಂದು ಹೇಳಿದ್ದಾರೆ ಕಿರಣ್ ಮೋರೆ. ಇದು ನಿಜ ಆಗುತ್ತದೆಯೋ ಇಲ್ಲವೋ ಎಂದು ಕಾದು ನೋಡಬೇಕಿದೆ.ಕ್ರಿಕೆಟ್ ಪ್ರಿಯರು ಸಹ, ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

Comments (0)
Add Comment