ಮನೆಯಲ್ಲಿ ವಿದ್ಯುತ್ ಬಿಲ್ ಜಾಸ್ತಿ ಬರುತ್ತಿದೆಯೇ?? ಹಾಗಿದ್ದರೆ ಈ ಸುಲಭ ಟ್ರಿಕ್ ಬಳಸಿ ಸಾವಿರಾರು ರೂಪಾಯಿ ಉಳಿಸುವುದು ಗೊತ್ತೇ?

AMP Ads

ವಿದ್ಯುತ್ ಬಿಲ್ ಎನ್ನುವುದು ಪ್ರತಿತಿಂಗಳ್ಚ್ ನಾವು ತಪ್ಪದೆ ಕಟ್ಟಲೇಬೇಕಾದ ವಿಚಾರ. ನಮ್ಮ ಮನೆಗಳಲ್ಲಿ ನಾವು ಬಳಕೆ ಮಾಡಿದ ವಿದ್ಯುತ್ ಗೆ ಹಣ ಪಾವತಿ ಮಾಡಬೇಕು. ಕೆಲವೊಮ್ಮೆ ನಾ ಮನೆಗಳಲ್ಲಿ ಹೆಚ್ಚಿನ ಎಲೆಕ್ಟ್ರಿಸಿಟಿ ಬಿಲ್ ಬರುತ್ತದೆ. ಅದನ್ನು ನೋಡಿದರೆ, ನಾವು ಬಳಸಿದ್ದಕ್ಕಿಂತ ಹೆಚ್ಚು ಬಿಲ್ ಬಂದಿದೆ ಎಂದು ಅನ್ನಿಸದೆ ಇರಲಾರದು. ವಿದ್ಯುತ್ ಬಿಲ್ ನಲ್ಲಿ ಈ ರೀತಿ ಆಗುವುದರಿಂದ ನಿಮ್ಮ ತಿಂಗಳ ಬಜೆಟ್ ನಲ್ಲಿ ತೊಂದರೆ ಸಹ ಆಗಬಹುದು. ಆದರೆ ಹಲವು ಬಾರಿ ನೀವು ಹೆಚ್ಚಿನ ವಿದ್ಯುತ್ ಬಿಲ್ ಪೇ ಮಾಡಿರುತ್ತೀರಿ. ಅದಕ್ಕೆ ಕಾರಣ, ನಿಮ್ಮ ಮನೆಯಲ್ಲಿ ನೀವು ಬಳಸುವ ಉಪಕರಣಗಳಿಂದ ಇರಬಹುದು. ಅವುಗಳ ಬಳಕೆ ಕಡಿಮೆ ಮಾಡಿದರೆ ನಿಮ್ಮ ವಿದ್ಯುತ್ ಬಿಲ್ ನಲ್ಲಿ ಇಳಿಕೆ ಕಾಣಬಹುದು.

ಎಸಿ ಬಳಸುವುದನ್ನು ಕಡಿಮೆ ಮಾಡಿ :- ಹಲವರ ಮನೆಯಲ್ಲಿ ಎಸಿ ಬಳಕೆ ಮಾಡುತ್ತಾರೆ. ಆದರೆ ಈಗಿನ ವಾತಾವರಣಕ್ಕೆ ಏರ್ ಕಂಡೀಶನರ್ ಅವಶ್ಯಕತೆ ಇರುವ ಹಾಗೆ ತೋರುತ್ತಿಲ್ಲ. ಹೊರಗಿನ ವಾತಾವರಣವೇ ಬಹಳ ತಣ್ಣಗೆ ಇರುವ ಕಾರಣ, ಎಸಿ ಅವಶ್ಯಕತೆ ಇಲ್ಲ. ಹಾಗಾಗಿ ಬೇಸಿಗೆ ಬದಲು ಬೇರೆ ಸಮಯದಲ್ಲಿ ಎಸಿ ಬಳಸುವುದನ್ನು ಕಡಿಮೆ ಮಾಡಿದರೆ ಒಳ್ಳೆಯದು. ಎಸಿ ಬಳಸುವ ಅವಶ್ಯಕತೆ ಇರುವ ಸಮಯದಲ್ಲಿ ಮಾತ್ರ ಅದನ್ನು ಬಳಸಿ. ಈ ಪ್ಲಾನ್ ಅನುಸರಿಸಿದರೆ, ವಿದ್ಯುತ್ ಉಳಿತಾಯ ಮಾಡಬಹುದು.

AMP Ad3

ಗೀಸರ್ ಬಳಕೆ ಕಡಿಮೆ ಮಾಡಿ :- ದಿನನಿತ್ಯ ಮನೆಗಳಲ್ಲಿ ಬಳಸುವ ಉಪಕರಣಗಳಲ್ಲಿ ಒಂದು ಗೀಸರ್. ಚಳಿಗಾಲದಲ್ಲಿ ಗೀಸರ್ ಬಳಕೆ ಹೆಚ್ಚು. ಆದರೆ ಚಳಿಗಾಲ ಬರಲು ಇನ್ನು ಸಮಯ ಇದೆ. ಹಾಗಾಗಿ ಈ ಸಮಯದಲ್ಲಿ ಗೀಸರ್ ಬಳಕೆ ಮಾಡುವುದನ್ನು ಕಡಿಮೆ ಮಾಡಬಹುದು. ಗೀಸರ್ ಹೆಚ್ಚಾಗಿ ಬಳಸಿದಷ್ಟು ನಿಮ್ಮ ಮನೆಯ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತದೆ. ಹಾಗಾಗಿ ವಿದ್ಯುತ್ ಉಳಿಸಲು ಬಯಸುತ್ತಿದ್ದರೆ, ಗೀಸರ್ ಬಳಕೆ ಕಡಿಮೆ ಮಾಡುವುದು ಒಳ್ಳೆಯದು.

Comments (0)
Add Comment