ಪ್ರತಿ ಪತ್ನಿಯು ಕೂಡ ತನ್ನ ಗಂಡನ ಕಡೆಯಿಂದ ಇದನ್ನು ಬಯಸುತ್ತಾಳೆ. ಗಂಡ ಏನೇ ಆದರೂ ಸರಿ ಇದನ್ನು ಪೂರೈಸಲೇಬೇಕು. ಯಾವ್ಯಾವು ಗೊತ್ತೆ?

AMP Ads

ನಮಸ್ಕಾರ ಸ್ನೇಹಿತರೇ ನಾವು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಸಾಕಷ್ಟು ಗೌರವ ಹಾಗೂ ಪ್ರೀತಿಯನ್ನು ನೀಡುತ್ತೇವೆ. ಹೆತ್ತ ತಾಯಿಯ ಹೆಣ್ಣು ಹೊತ್ತ ಭೂಮಿಯು ಹೆಣ್ಣು ಎನ್ನುವ ಪರಿಕಲ್ಪನೆ ನಮ್ಮದು. ಮಹಿಳೆಯನ್ನು ನಾವು ಎಷ್ಟೇ ಗೌರವಿಸಿದರು ಕೂಡ ಹಿರಿಯರು ಹೇಳುವಂತೆ ಆಕೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಮಹಿಳೆಯರ ಮನಸ್ಸು ಸಾಕಷ್ಟು ಚಂಚಲವಾಗಿರುತ್ತದೆ.

ಮಹಿಳೆಯರು ಪ್ರೀತಿ ವಾತ್ಸಲ್ಯಗಳ ಸಂಕೇತವಾಗಿ ಇರುತ್ತಾರೆ. ಕುಟುಂಬಕ್ಕಾಗಿ ಯಾವ ತ್ಯಾಗವನ್ನು ಮಾಡಲು ಕೂಡ ಸಿದ್ಧರಾಗಿರುತ್ತಾರೆ. ಇದಕ್ಕಾಗಿ ಮಹಿಳೆಯರ ವ್ಯಕ್ತಿತ್ವವನ್ನು ಸರಿದೂಗಿಸುವ ಅಂತಹ ಪುರುಷರು ಇಲ್ಲವೆಂದು ಹೇಳಬಹುದು ಇದರಲ್ಲಿ ಯಾವುದೇ ಅನುಮಾನವಿಲ್ಲ. ಇಷ್ಟೊಂದೆಲ್ಲಾ ತ್ಯಾಗಮಯಿ ರೂಪಿ ಆಗಿರುವ ಮಹಿಳೆಗೆ ಏನೆಲ್ಲಾ ಬೇಕಾಗಿರುತ್ತದೆ ಎನ್ನುವ ಅವರ ಬಯಕೆಯ ವಿಚಾರಗಳ ಕುರಿತಂತೆ ಪುರುಷರು ಕೂಡ ಕೊಂಚಮಟ್ಟಿಗೆ ಆಲೋಚನೆ ಮಾಡಬೇಕು.

AMP Ad3

ಮದುವೆಯೆಂದರೆ ಎರಡು ಜೀವಗಳು ಪರಸ್ಪರ ಒಪ್ಪಿ ಜೀವನಪೂರ್ತಿ ಪರಸ್ಪರರ ಕಷ್ಟಸುಖಗಳಿಗೆ ಭಾಗಿಯಾಗುವ ಒಂದೇ ಜೀವನವನ್ನು ಎರಡು ಜೀವಗಳು ಜೀವಿಸುವ ಪವಿತ್ರವಾದ ಸಂಬಂಧವಾಗಿದೆ. ಈ ಸಂದರ್ಭದಲ್ಲಿ ಪರಸ್ಪರ ಕಷ್ಟ ಇಷ್ಟಗಳನ್ನು ಸರಿಯಾಗಿ ಅರಿತುಕೊಂಡರೆ ಮಾತ್ರ ದಾಂಪತ್ಯ ಜೀವನ ಎನ್ನುವುದು ದೀರ್ಘಕಾಲದವರೆಗೆ ಸುಮಧುರವಾಗಿ ಕಂಡುಬರುತ್ತದೆ. ಇದಕ್ಕಾಗಿ ಪ್ರತಿಯೊಬ್ಬ ಪುರುಷ ಕೂಡ ತನ್ನ ಪತ್ನಿಯ ಕೆಲವೊಂದು ಅತ್ಯಗತ್ಯ ಬಯಕೆಗಳನ್ನು ಈಡೇರಿಸಲೇ ಬೇಕಾಗುತ್ತದೆ. ಆಕೆ ಇದನ್ನು ಹೇಳಿಕೊಳ್ಳದೆ ಇರಬಹುದು ಆದರೆ ಒಬ್ಬ ಪತಿಯಾಗಿ ನೀವು ಇದನ್ನು ಅರ್ಥ ಮಾಡಿಕೊಂಡು ಈಡೇರಿಸ ಬೇಕಾಗಿರುವುದು ಆದ್ಯ ಕರ್ತವ್ಯವಾಗಿದೆ.

ಮೊದಲನೇದಾಗಿ ಪ್ರತಿಯೊಬ್ಬ ಗಂಡ ಕೂಡ ತನಗೆ ನಿಷ್ಠ ಆಗಿರಬೇಕು ಎಂಬುದಾಗಿ ಪ್ರತಿಯೊಬ್ಬ ಹೆಂಡತಿಯು ಕೂಡ ಅಪೇಕ್ಷಿಸುತ್ತಾಳೆ. ಸಂಬಂಧದಲ್ಲಿ ಪರಸ್ಪರ ಪ್ರಾಮಾಣಿಕರಾಗಿರುವ ಹಾಗೂ ಎಲ್ಲಾ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುವುದರಲ್ಲಿ ದಾಂಪತ್ಯ ಜೀವನದ ಸಾರ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೆಂಡತಿಯಿಂದ ಯಾವುದೇ ವಿಷಯಗಳನ್ನು ಮುಚ್ಚಿಟ್ಟುಕೊಳ್ಳದೇ ಆಕೆಯೊಂದಿಗೆ ಪ್ರಾಮಾಣಿಕರಾಗಿರಿ.

AMP Ads4

ಒಂದು ವೇಳೆ ನಿಮ್ಮ ಜೊತೆಗೆ ಏನಾದರೂ ಬೇಕು ಎನ್ನುವ ಬಯಕೆಯನ್ನು ಹೆಂಡತಿ ವ್ಯಕ್ತಪಡಿಸಿದರೂ ಅದನ್ನು ಆದಷ್ಟು ಶೀಘ್ರವಾಗಿ ಪರಿಹರಿಸಲು ಅಥವಾ ಈಡೇರಿಸಲು ಪ್ರಯತ್ನಿಸಿ. ಮನೆಯನ್ನು ಬಿಟ್ಟು ನೀವೇ ತನ್ನ ಸರ್ವಸ್ವ ಎಂಬುದಾಗಿ ನಿಮ್ಮ ಜೊತೆಗೆ ಬಂದಿರುವ ಆಕೆಯ ಬಯಕೆಯನ್ನು ಈಡೇರಿಸುವುದು ನಿಮ್ಮ ಆದ್ಯ ಕರ್ತವ್ಯವಾಗಿರುತ್ತದೆ ಹೀಗಾಗಿ ಆದಷ್ಟು ಬೇಗ ಆಕೆಯ ಆಸೆಗಳನ್ನು ಈಡೇರಿಸುವುದು ಆಕೆಗೆ ನಿಮ್ಮ ಮೇಲೆ ಇರುವ ಪ್ರೀತಿಯನ್ನು ಹೆಚ್ಚು ಮಾಡಲು ಸಹಕಾರಿಯಾಗುತ್ತದೆ.

ಕೊನೆಯದಾಗಿ ಹಾಗೂ ಮುಖ್ಯವಾಗಿ ಯಾವುದೇ ಸಂದರ್ಭದಲ್ಲಿಯೂ ಕೂಡ ಕೆಲಸದ ಕಾರಣದಿಂದಾಗಿ ನಿಮ್ಮ ಹೆಂಡತಿಯ ಕಡೆಗೆ ನಿರ್ಲಕ್ಷದ ಮನೋಭಾವನೆಯನ್ನು ಇಟ್ಟುಕೊಳ್ಳುವುದು ಸಂಪೂರ್ಣ ತಪ್ಪು. ಆಕೆಗೆ ನೀವು ಕ್ವಾಲಿಟಿ ಸಮಯವನ್ನು ನೀಡಿದಾಗ ಮಾತ್ರ ನಿಮ್ಮ ನಡುವೆ ಸಂಬಂಧದಲ್ಲಿ ತಾಜಾತನ ಮೂಡಿಬರುತ್ತದೆ. ಒಂದು ವೇಳೆ ನೀವು ನಿಮ್ಮ ಸಂಗಾತಿಗೆ ಸಮಯವನ್ನು ನೀಡಲು ವಿಫಲರಾದರೇ ನಿಮ್ಮ ಸಂಬಂಧ ಹಳಸಲು ಹೆಚ್ಚು ಹೊತ್ತು ಬೇಕಾಗಿರುವುದಿಲ್ಲ. ಈ ಎಲ್ಲಾ ಬಯಕೆಗಳನ್ನು ನೀವು ಈಡೇರಿಸಿದರೆ ಖಂಡಿತವಾಗಿ ನಿಮ್ಮ ಸಾಂಸಾರಿಕ ಜೀವನ ಕೂಡ ಉತ್ತಮವಾಗಿರುತ್ತದೆ ಮತ್ತು ನೀವೊಬ್ಬ ಉತ್ತಮ ಗಂಡನಾಗಿ ಕೂಡ ತಮ್ಮ ಜವಾಬ್ದಾರಿ ಸಂಪೂರ್ಣವಾಗಿ ನಿಭಾಯಿಸಿ ದಂತಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments (0)
Add Comment