ಆತನೊಬ್ಬ ತಂಡದಲ್ಲಿ ಇದ್ದಿದ್ದರೆ, ಭಾರತ ತಂಡ ಗೆಲ್ಲುತ್ತಿತ್ತೇ?? ದಾನೇಶ್ ಕಾನೇರಿಯ ದ್ರಾವಿಡ್ ರವರನ್ನು ತರಾಟೆಗೆ ತೆಗೆದುಕೊಂಡು ಹೇಳಿದ್ದೇನು ಗೊತ್ತೇ?

AMP Ads

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ವರ್ಷ ಮಹಾಮಾರಿ ಹಾಗೂ ಲಾಕ್ ಡೌನ್ ಕಾರಣದಿಂದಾಗಿ ಇಂಗ್ಲೆಂಡ್ ಹಾಗೂ ಭಾರತ ತಂಡಗಳ ನಡುವಿನ ಟೆಸ್ಟ್ ಸರಣಿ ಪಂದ್ಯ ಅರ್ಧಕ್ಕೆ ನಿಂತಿತ್ತು. ಅದರ ಕೊನೆಯ ಪಂದ್ಯವನ್ನು ಈ ಬಾರಿ ಇಂಗ್ಲೆಂಡ್ನಲ್ಲಿ ಆಡಿಸಲಾಗಿದೆ. ಪ್ರತಿಯೊಬ್ಬರು ಕೂಡ ಭಾರತೀಯ ಕ್ರಿಕೆಟ್ ತಂಡ ಜಸ್ಪ್ರೀತ್ ಬುಮ್ರಾ ರವರ ನಾಯಕತ್ವದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಆಡಿರುವ ಬಗೆಯನ್ನು ನೋಡಿ ಖಂಡಿತವಾಗಿ ಟೆಸ್ಟ್ ಸರಣಿಯ ಜೊತೆಗೆ ಟೆಸ್ಟ್ ಪಂದ್ಯವನ್ನು ಕೂಡ ಭಾರತೀಯ ಕ್ರಿಕೆಟ್ ತಂಡ ಗೆಲ್ಲಲಿದೆ ಎಂಬುದಾಗಿಯೇ ಎಲ್ಲರೂ ಭಾವಿಸಿದ್ದರು.

ಆದರೆ ಎರಡನೇ ಇನ್ನಿಂಗ್ಸಿನಲ್ಲಿ ಇಂಗ್ಲೆಂಡ್ ತಂಡ ನೀಡಿದ ಫೈಟ್ ಬ್ಯಾಕ್ ನಿಜಕ್ಕೂ ಕೂಡ ಪ್ರತಿಯೊಬ್ಬ ಕ್ರಿಕೆಟ್ ಪಂಡಿತರನ್ನು ಕೂಡ ಅವರ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ. ಇನ್ನು ಭಾರತ ಕ್ರಿಕೆಟ್ ತಂಡ ಸೋಲಲು ಏನು ಕಾರಣ ಎಂಬುದನ್ನು ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನೇಶ್ ಕನೇರಿಯ ಬಹಿರಂಗವಾಗಿ ಬಿಚ್ಚಿಟ್ಟಿದ್ದಾರೆ ಹಾಗೂ ಇದಕ್ಕಾಗಿ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ. ಹೌದು ಗೆಳೆಯರೇ ಮಾಧ್ಯಮ ಸಂದರ್ಶನದಲ್ಲಿ ಇದರ ಕುರಿತಂತೆ ಮಾತನಾಡಿದ ದಾನೇಶ್ ಕನೇರಿಯ ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡದ ಅದರಲ್ಲೂ ಕೋಚ್ ರಾಹುಲ್ ದ್ರಾವಿಡ್ ಹಾಗೂ ಜಸ್ಪ್ರೀತ್ ಬುಮ್ರಾ ರವರ ಆಯ್ಕೆ ನಿಜಕ್ಕೂ ಕೂಡ ವಿಫಲವಾಗಿತ್ತು.

AMP Ad3

ಈ ಪಿಚ್ ನಲ್ಲಿ ಮೂರನೇ ದಿನದ ನಂತರ ಸ್ಪಿನ್ ಬೌಲಿಂಗ್ ಉತ್ತಮವಾಗಿ ನಡೆಯುತ್ತಿದ್ದು ಇದಕ್ಕಾಗಿ ಆಲ್-ರೌಂಡರ್ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿರುವ ರವಿಚಂದ್ರನ್ ಅಶ್ವಿನ್ ರವರನ್ನು ತಂಡದಲ್ಲಿ ಸೇರಿಸಿ ಕೊಳ್ಳಬೇಕಾಗಿತ್ತು ಆದರೆ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಿಲ್ಲ. ಇದಕ್ಕಾಗಿ ಭಾರತೀಯ ಕ್ರಿಕೆಟ್ ತಂಡ ಸೋಲಿನ ಮತವನ್ನು ತೆರಬೇಕಾಯಿತು ಎಂಬುದಾಗಿ ಟೀಕಿಸಿದ್ದಾರೆ. ದಾನೇಶ್ ಕನೇರಿಯ ರವರ ಹೇಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ವ್ಯಕ್ತಪಡಿಸಿ.

Comments (0)
Add Comment