ಒಮ್ಮೆಲೇ ಭಾರತ ತಂಡದ ತ್ರಿಮೂರ್ತಿಗಳಾದ ರಾಹುಲ್, ರೋಹಿತ್ ಹಾಗೂ ಕೊಹ್ಲಿ ಎಚ್ಚರಿಕೆ ನೀಡಿದ ಬಿಸಿಸಿಐ. ಯಾಕೆ ಗೊತ್ತೇ?? ಮುಂದೇನು ಕಥೆ ಅಂತೇ ಗೊತ್ತೇ?

AMP Ads

ನಮಸ್ಕಾರ ಸ್ನೇಹಿತರೇ ಸಮಯ ಯಾವಾಗಲೂ ಒಂದೇ ತೆರನಾಗಿ ಇರುವುದಿಲ್ಲ. ಅದು ಆಗಾಗ ಬದಲಾಗುತ್ತಿರುತ್ತದೆ.ಇಂದು ರಾಜನಾದವನು ನಾಳೆ ಗುಲಾಮನಾಗಬೇಕಾಗುತ್ತದೆ. ಕಾಲಚಕ್ರ ಸದಾ ತಿರುಗುತ್ತಿರುತ್ತದೆ. ಅಂತಹುದೇ ಪರಿಸ್ಥಿತಿ ಈಗ ಭಾರತದ ತ್ರಿಮೂರ್ತಿಗಳಿಗೆ ಬಂದೆರೆಗಿದೆ. ಯಾರೇ ಬರಲಿ, ಯಾರೇ ಹೋಗಲಿ ತಂಡದಲ್ಲಿ ತಮ್ಮ ಸ್ಥಾನ ಖಾಯಂ ಎಂದು ಬೀಗುತ್ತಿದ್ದ ತ್ರಿಮೂರ್ತಿಗಳಿಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ಹೌದು ಅಷ್ಟಕ್ಕೂ ಆ ತ್ರಿಮೂರ್ತಿಗಳು ಯಾರು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಆ ತ್ರಿಮೂರ್ತಿಗಳು ಬೇರೆ ಯಾರು ಅಲ್ಲ, ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಕೆ.ಎಲ್.ರಾಹುಲ್. ಹೌದು ಈ ತ್ರಿಮೂರ್ತಿಗಳ ಸ್ಥಾನ ಟೀಂ ಇಂಡಿಯಾದಲ್ಲಿ ಭದ್ರವಾಗಿತ್ತು. ಆದರೇ ಈಗ ಬಿಸಿಸಿಐ ಈ ತ್ರಿಮೂರ್ತಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ. ಇತ್ತಿಚೆಗೆ ನಡೆದ ಐಪಿಎಲ್ ನಲ್ಲಿ ಈ ಮೂವರ ಸ್ಟ್ರೈಕ್ ರೇಟ್ ಬಹಳ ಕಡಿಮೆ ಇತ್ತು. ಅದರಲ್ಲಿಯೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸರಾಸರಿ 20ರ ಗಿಂತ ಕೆಳಗಿತ್ತು. ಇನ್ನು 600ಕ್ಕೂ ಹೆಚ್ಚು ರನ್ ಬಾರಿಸಿದರೂ ಕೆ.ಎಲ್ ರಾಹುಲ್ ರವರ ಸ್ಟ್ರೈಕ್ ರೇಟ್ ಸಹ ಟಿ 20 ಕ್ರಿಕೆಟ್ ಗೆ ಹೇಳಿ ಮಾಡಿಸಿದಂತಹದ್ದಾಗಿರಲಿಲ್ಲ.

AMP Ad3

ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಬಿಗ್ ಬಾಸ್ ಬಿಸಿಸಿಐ ಮುಂಬರುವ ಟಿ 20 ವಿಶ್ವಕಪ್ ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಬೇಕು ಎಂದರೇ ಮೊದಲಿಗೆ ನಿಮ್ಮ ಸ್ಟ್ರೈಕ್ ರೇಟ್ ಉತ್ತಮ ಪಡಿಸಿಕೊಳ್ಳಿ. ಆಗ ಮಾತ್ರ ನಿಮಗೆ ಅವಕಾಶ ಎಂದಿದೆ. ಹೀಗಾಗಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಮೂರು ಟಿ 20 ಪಂದ್ಯಗಳಲ್ಲಿ ಈ ತ್ರಿಮೂರ್ತಿಗಳ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Comments (0)
Add Comment