ಆರ್ಸಿಬಿ ಇಂದ ಖಚಿತವಾಗಿ ಹೊರಹೋಗುವ ಆಟಗಾರರನ್ನು ಹೆಸರಿಸಿದ ಆಕಾಶ್ ಚೋಪ್ರಾ: ಇವರನ್ನು ಹೊರಹಾಕಿ ಎಂದದ್ದು ಯಾಕೆ ಗೊತ್ತೇ?

AMP Ads

ನಮಸ್ಕಾರ ಸ್ನೇಹಿತರೆ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಮುಖ ಹಂತದಲ್ಲಿ ಬಂದು ಎಡವಿದ ಕಾರಣದಿಂದಾಗಿ ಕಪ್ ಗೆಲ್ಲುವ ತಂಡವಾಗಿದ್ದು ಆರ್ಸಿಬಿ ತಂಡ ಸೋಲನ್ನು ಕಂಡು ಸೆಮಿಫೈನಲ್ ಹಂತದಿಂದ ನಿರ್ವಹಿಸಬೇಕಾಯಿತು. ಹೀಗಾಗಿ ಮಾಜಿ ಕ್ರಿಕೆಟರ್ ಹಾಗೂ ಕಾಮೆಂಟೇಟರ್ ಮತ್ತು ಕ್ರಿಕೆಟ್ ಎಕ್ಸ್ಪರ್ಟ್ ಆಗಿರುವ ಆಕಾಶ್ ಚೋಪ್ರಾ ರವರು ಮುಂಬರುವ ಐಪಿಎಲ್ ಗು ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೀಮ್ ಮ್ಯಾನೇಜ್ಮೆಂಟ್ ಕೆಲವೊಂದು ಆಟಗಾರರನ್ನು ತಂಡದಿಂದ ಹೊರ ಹಾಕುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ ಎಂಬುದಾಗಿ ಹೇಳಿದ್ದಾರೆ.

ಕೇವಲ ಇಷ್ಟು ಮಾತ್ರವಲ್ಲದೆ ತಂಡದಿಂದ ಹೊರಹೋಗುವ ಭಾಗ್ಯವನ್ನು ಪಡೆದುಕೊಳ್ಳಲು ಇರುವ ಆರ್ಸಿಬಿ ಆಟಗಾರರ ಪಟ್ಟಿಯನ್ನು ಕೂಡ ಹೇಳಿದ್ದಾರೆ. ಹಾಗಿದ್ದರೆ ಮುಂದಿನ ಐಪಿಎಲ್ ಒಳಗೆ ಆರ್ಸಿಬಿ ಪಾಳಯದಿಂದ ಹೊರಹೋಗುವ ಟಿಕೆಟನ್ನು ಪಡೆದುಕೊಳ್ಳಲಿರುವ ಸಂಭಾವ್ಯ ಕ್ರಿಕೆಟಿಗರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಖಂಡಿತವಾಗಿ ಈ ಸಾಲಿನಲ್ಲಿ ಮೊಹಮ್ಮದ್ ಸಿರಾಜ್ ರವರು ಕಂಡುಬರುತ್ತಾರೆ. ಯಾಕೆಂದರೆ ಇವರನ್ನು ಬರೋಬ್ಬರಿ ಏಳು ಕೋಟಿ ರೂಪಾಯಿ ನೀಡಿ ರಿಟೈನ್ ಆಟಗಾರರಲ್ಲಿ ಉಳಿಸಿಕೊಳ್ಳಲಾಗಿತ್ತು ಆದರೆ ಹತ್ತರ ಸರಾಸರಿಯಲ್ಲಿ ರನ್ ನೀಡಿ ದುಬಾರಿಯಾಗಿದ್ದು ಮಾತ್ರವಲ್ಲದೆ ಕೇವಲ ಒಂಬತ್ತು ವಿಕೆಟ್ ಗಳನ್ನು ಮಾತ್ರ ಕಬಳಿಸಿದ್ದರು. ಹೀಗಾಗಿ ಇವರನ್ನು ಕೈ ಬಿಟ್ಟರೆ ನೆಕ್ಸ್ಟ್ ಹರಾಜಿನಲ್ಲಿ ಆರ್ಸಿಬಿ ಪರ್ಸ್ ನಲ್ಲಿ ಏಳು ಕೋಟಿ ರೂಪಾಯಿ ಹೆಚ್ಚಳ ಕಂಡು ಬರಲಿದೆ.

AMP Ad3

ಮತ್ತೆ ಬೇಕಾದರೆ ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಅವರನ್ನು ಖರೀದಿಸಬಹುದಾಗಿದೆ. ಇದಾದನಂತರ ಅನುಜ್ ರಾವತ್ ಅವರು ಆರಂಭಿಕ ಆಟಗಾರನಾಗಿ ಸಂಪೂರ್ಣ ಮಂಕಾಗಿದ್ದ ಕಾರಣದಿಂದಾಗಿ ಇವರನ್ನು ಕೂಡ ತಂಡ ಕೈಬಿಡಬಹುದು. ಇವರ ಜೊತೆಗೆ ಪರಿಣಾಮಕಾರಿ ಆಟಗಾರರಾಗಿದ್ದರು ಕೂಡ ಅವರ ಬದಲಿಗೆ ತಂಡದಲ್ಲಿ ಸೆಟ್ ಆಗಿರುವ ಆಟಗಾರರು ಇರುವ ಕಾರಣದಿಂದಾಗಿ ಡೇವಿಡ್ ವಿಲ್ಲಿ ಶರ್ಫಾನ್ ರುದರ್ಫೋರ್ಡ್ ರವರನ್ನು ಕೂಡ ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ. ಒಟ್ಟಾರೆಯಾಗಿ ಆರ್ಸಿಬಿ ತಂಡ ಮುಂದಿನ ಸೀಸನ್ ಗಾಗಿ ಬಲಿಷ್ಠ ತಂಡವನ್ನು ಸಿದ್ಧಗೊಳಿಸಲು ಟೊಂಕಕಟ್ಟಿ ನಿಂತಿದೆ ಎಂದು ಹೇಳಬಹುದಾಗಿದೆ.

Comments (0)
Add Comment