ಶುರುವಾಯಿತೇ ಹೊಸ ನಾಯಕನ ಲಾಬಿ?? ಒಮ್ಮೆಲೇ ಪಂತ್ ವಿರುದ್ಧ ಬಾಣಗಳ ಸುರಿಮಳೆ. ಈಗ ಆಶಿಶ್ ನೆಹ್ರಾ ಹೇಳಿದ್ದೇನು ಗೊತ್ತೇ?

AMP Ads

ನಮಸ್ಕಾರ ಸ್ನೇಹಿತರೆ ಈ ವರ್ಷದ ಅಂತ್ಯದಲ್ಲಿ ಪ್ರಾರಂಭವಾಗುವ ಈ ಬಾರಿಯ ಟಿ-20ವಿಶ್ವಕಪ್ ಗೂ ಮುನ್ನವೇ ಉತ್ತಮ ಅಭ್ಯಾಸಕ್ಕಾಗಿ ಪ್ರಾರಂಭವಾಗಿರುವ ಸೌತ್ ಆಫ್ರಿಕಾ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯದಲ್ಲಿಯೇ ಗೆಲ್ಲುವ ಪಂದ್ಯವನ್ನು ಭಾರತೀಯ ಕ್ರಿಕೆಟ್ ತಂಡ ಸೋತು ಕೈಚೆಲ್ಲಿ ಕುಳಿತುಕೊಂಡಿದೆ.

ಕೆಎಲ್ ರಾಹುಲ್ ಅವರ ಅನುಪಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಂಡಿರುವ ಪಂತ್ ರವರು ಸರಣಿಯ ಮೊದಲ ಪಂದ್ಯದಲ್ಲಿ ಸೋತ ತಂಡದ ನಾಯಕನಾಗಿ ಎಲ್ಲಾ ಅಪವಾದಗಳನ್ನು ಕೂಡ ತಮ್ಮ ತಲೆಯ ಮೇಲೆ ಹೊತ್ತುಕೊಂಡಿದ್ದಾರೆ. ಕ್ರಿಕೆಟ್ ಪಂಡಿತರು ಅಭಿಮಾನಿಗಳು ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರು ಕೂಡ ಭಾರತೀಯ ಕ್ರಿಕೆಟ್ ತಂಡದ ಸೋಲಿನ ಹೊಣೆಯನ್ನು ಕಪ್ತಾನ ಅವರ ಮೇಲೆ ಹಾಕಿದ್ದಾರೆ. ರಿಷಬ್ ಪಂತ್ ರವರ ನಾಯಕತ್ವವನ್ನು ಗಮನಿಸುವುದಾದರೆ ಐಪಿಎಲ್ ನಲ್ಲಿ ಕೂಡ ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ ಎಂಬುದನ್ನು ಗಮನಿಸಬಹುದಾಗಿದೆ. ಇನ್ನು ಹಲವಾರು ಜನರು ರಿಷಬ್ ಪಂತ್ ಅವರ ನಾಯಕತ್ವವನ್ನು ಕೂಡ ಪ್ರಶ್ನಿಸಿದ್ದಾರೆ. ಅದರಲ್ಲೂ ಮಾಜಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಆಗಿರುವ ಆಶಿಸ್ ನೆಹ್ರ ರವರು ಕೂಡ ರಿಷಬ್ ಪಂತ್ ರವರ ನಾಯಕತ್ವದ ಕುರಿತಂತೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

AMP Ad3

ರಿಷಬ್ ಪಂತ್ ನಾಯಕತ್ವವನ್ನು ಕಲಿಯುತ್ತಿದ್ದಾನೆ ನಿಜ ಆದರೆ ಆತ ಐಪಿಎಲ್ ನಲ್ಲಿ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿರುವ ಚಹಾಲ್ ರವರಿಗೆ ಕೇವಲ 2.1 ಅವರುಗಳನ್ನು ಬೌಲಿಂಗ್ ಮಾಡಲು ಬಿಟ್ಟಿರುವುದು ನಿಜಕ್ಕೂ ಕೂಡ ಆಶ್ಚರ್ಯಕರ ಎನಿಸಿದೆ ಎಂಬುದಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿ ತಂಡದ ನಾಯಕ ಆಗಿದ್ದಾಗಲೂ ಕೂಡ ಕುಲದೀಪ್ ಯಾದವ್ ರವರನ್ನು ಚೆನ್ನಾಗಿ ಬಳಸಿಕೊಳ್ಳಲು ಅವರು ಎಡವಿದ್ದಾರೆ ಎಂಬುದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳುತ್ತಾರೆ. ಅಷ್ಟೊಂದು ಮತವನ್ನು ಪೇರಿಸಿದರು ಕೂಡ ಬೌಲಿಂಗ್ ಆಯ್ಕೆಯಲ್ಲಿ ರಕ್ಷಣಾತ್ಮಕ ಆಟವನ್ನು ಪ್ರದರ್ಶಿಸಿದ್ದು ರಿಷಬ್ ಪಂತ್ ರವರ ನಾಯಕತ್ವವನ್ನು ಪ್ರಶ್ನಿಸುವಂತೆ ಮಾಡುತ್ತದೆ ಎಂಬುದಾಗಿ ಹೇಳಿದ್ದಾರೆ. ಬೌಲರ್ಗಳನ್ನು ಈ ಸಂದರ್ಭದಲ್ಲಿ ಸರಿಯಾಗಿ ಬಳಸಿಕೊಂಡಿಲ್ಲ ಎಂಬುದಾಗಿ ರಿಶಬ್ ಪಂತ್ ರವರ ಬಗ್ಗೆ ಆಶಿಶ್ ನೆಹ್ರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Comments (0)
Add Comment