ಈ ಚಿಕ್ಕ ಕ್ರಮಗಳನ್ನು ಭಿಕ್ಷುಕನನ್ನು ಕೂಡ ರಾಜನನ್ನಾಗಿ ಮಾಡುತ್ತವೆ. ನಿಮಗೂ ಹಣದ ಸಮಸ್ಯೆ ಇದ್ದರೇ ಪ್ರಯತ್ನಿಸಿ ನೋಡಿ. ಏನು ಮಾಡಬೇಕು ಗೊತ್ತೇ?

AMP Ads

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುವಂತಹ ಯೋಚನೆ ಇರುತ್ತದೆ. ಹಣ ಎನ್ನುವುದು ಯಾವತ್ತೂ ಕೂಡ ಕಡಿಮೆಯಾಗುವುದಿಲ್ಲ ಎಷ್ಟು ಬೇಕಾದರೂ ಕೂಡ ಹಣ ಬರಲು ಎಂಬುದಾಗಿ ಎಲ್ಲರೂ ಪ್ರಾರ್ಥಿಸುತ್ತಾರೆ. ಆದರೆ ಇದಕ್ಕಾಗಿ ಅವರು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಕೆಲವೊಮ್ಮೆ ಅವರು ಅಂದುಕೊಂಡಷ್ಟು ಹಣ ಕೂಡ ಸಿಗುವುದಿಲ್ಲ. ಇನ್ನು ಕೈಗೆ ಹಣ ಬಂದರೂ ಕೂಡ ಖರ್ಚುಗಳಿಂದಾಗಿ ಅದು ಮಾಯವಾಗಿಬಿಡುತ್ತದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ವಾಸ್ತುಶಾಸ್ತ್ರದ ಪ್ರಕಾರ ಕೆಲವೊಂದು ಕಾರ್ಯ ಗಳನ್ನು ಯಥಾವತ್ತಾಗಿ ಮಾಡಿದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಲಕ್ಷ್ಮೀದೇವಿಯ ಸಂಪೂರ್ಣ ಕೃಪಾಕಟಾಕ್ಷ ಆಗುತ್ತದೆ. ಹಾಗಿದ್ದರೆ ಅವುಗಳು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

AMP Ad3

ಮೊದಲನೇದಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ತುಳಸಿ ಗಿಡ ಇರಲೇಬೇಕು. ಹಿಂದೂ ಧರ್ಮದ ಪ್ರಕಾರ ತುಳಸಿಯನ್ನು ಅತ್ಯಂತ ಪವಿತ್ರ ವೃಕ್ಷವನ್ನಾಗಿ ಗುರುತಿಸಲಾಗುತ್ತದೆ. ಪ್ರತಿದಿನ ಎದ್ದ ತಕ್ಷಣ ಸ್ನಾನ ಮಾಡಿ ತುಳಸಿ ಗಿಡಕ್ಕೆ ನೀರು ಹಾಕಬೇಕು. ಹಾಗೂ ಪ್ರತಿದಿನ ಪೂಜೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಭಾನುವಾರ ಹಾಗೂ ಏಕಾದಶಿಯಂದು ತುಳಸಿ ಗಿಡಕ್ಕೆ ನೀರು ಹಾಕಬಾರದು. ತುಳಸಿ ಮಾತೆಯನ್ನು ಪ್ರಸನ್ನ ವಾಗಿಸುವುದರಿಂದ ಲಕ್ಷ್ಮಿ ದೇವಿ ಕೂಡ ಸಂತೋಷದಿಂದ ನಿಮಗೆ ಅನುಗ್ರಹ ಮಾಡುತ್ತಾಳೆ.

ಎರಡನೇದಾಗಿ ವಾಸ್ತುಶಾಸ್ತ್ರದ ಪ್ರಕಾರ ಹಸಿವಿನಿಂದ ಇರುವಂತಹ ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಕೂಡ ನಿಮಗೆ ಒಳ್ಳೆಯದಾಗುತ್ತದೆ. ಮನೆಯಲ್ಲಿ ಅಡುಗೆ ಮಾಡಿದಾಗ ಮೊದಲ ಆಹಾರ ಹಸುವಿಗೆ ನೀಡಿದರೆ ಕೊನೆಯ ಆಹಾರವನ್ನು ನಾಯಿಗೆ ನೀಡಬೇಕು. ಹಕ್ಕಿಗಳಿಗೆ ದಾನ್ಯ ಹೀಗೆ ಹಸಿದ ಜೀವಿಗಳಿಗೆ ಆಹಾರವನ್ನು ನೀಡುವ ಮೂಲಕ ನಿಮ್ಮ ಜೀವನದಲ್ಲಿ ಎಲ್ಲಾ ಕಷ್ಟಗಳು ನಿವಾರಣೆಯಾಗಿ ನಿಮ್ಮ ಜೀವನದಲ್ಲಿ ಆರ್ಥಿಕ ಸ್ಥಿತಿ ಪ್ರಗತಿ ಕಾಣುತ್ತದೆ.

ಮೂರನೇದಾಗಿ ನಿಮಗೆಲ್ಲರಿಗೂ ಗೊತ್ತಿರುವ ಲಕ್ಷ್ಮೀದೇವಿಯ ಪತಿ ಶ್ರೀಮನ್ನಾರಾಯಣನನ್ನು ಲಕ್ಷ್ಮೀನಾರಾಯಣ ಎಂಬುದಾಗಿ ಎಂಬುದಾಗಿ ಕೂಡ ಕರೆಯುತ್ತಾರೆ. ಹೀಗಾಗಿ ನಾರಾಯಣನನ್ನು ಸಂತುಷ್ಟಗೊಳಿಸಿದರೆ ಲಕ್ಷ್ಮಿ ದೇವಿಯನ್ನೇ ಸಂತೋಷ ಗೊಳಿಸಿದಂತಾಗುತ್ತದೆ. ಹೀಗಾಗಿ ಪ್ರತಿ ಗುರುವಾರ ನಾರಾಯಣನ ಪೂಜೆಯನ್ನು ಮಾಡಬೇಕು. ಪೂಜೆ ಮುಗಿದ ನಂತರ ಲಕ್ಷ್ಮೀನಾರಾಯಣ ಸ್ತೋತ್ರವನ್ನು ಪಠಿಸಬೇಕು. ಇದರಿಂದಾಗಿ ಮನೆಯಲ್ಲಿ ಸದಾ ಕಾಲ ಲಕ್ಷ್ಮಿ ನೆಲೆಸಿರುತ್ತಾಳೆ.

AMP Ads4

ನಾಲ್ಕನೇದಾಗಿ ಪ್ರತಿದಿನ ದೇವಸ್ಥಾನದಲ್ಲಿ ಇಲ್ಲವೇ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಅಥವಾ ಮನೆಯೆದುರು ಪ್ರತಿದಿನ ತಪ್ಪದೆ ದೀಪವನ್ನು ಹಚ್ಚಬೇಕು. ಇದರಿಂದಾಗಿ ನಿಮ್ಮ ಜೀವನದಲ್ಲಿ ತುಂಬಿಕೊಂಡಿರುವ ಅಂಧಕಾರ ಹಾಗೂ ದುಃಖಗಳೆಲ್ಲ ಮುಕ್ತವಾಗಿ ನಿಮ್ಮ ಜೀವನದಲ್ಲಿ ಸಂತೋಷ ಯಾವುದೇ ವಿಚಾರಕ್ಕೂ ನಿಮ್ಮ ಜೀವನದಲ್ಲಿ ಕೊರತೆ ಇರುವುದಿಲ್ಲ.

ಐದನೇ ದಾಗಿ ಪ್ರತಿನಿತ್ಯ ಎದ್ದು ಸೂರ್ಯೋದಯಕ್ಕೂ ಮುನ್ನ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ ಶಿವ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಕೂಡ ಪೂರೈಸಿ ನಿಮ್ಮ ಕಷ್ಟಗಳನ್ನು ದೂರ ಮಾಡುತ್ತಾರೆ. ಬಿಲ್ಪತ್ರೆ ಹಾಲಿನಿಂದ ಹಾಗೂ ನೀರಿನಿಂದಲೂ ಕೂಡ ಅಭಿಷೇಕ ಮಾಡಬಹುದಾಗಿದೆ. ಇದನ್ನು ದೈನಂದಿನ ಸೂರ್ಯೋದಯಕ್ಕೂ ಮುನ್ನವೇ ಮಾಡುವುದರಿಂದ ಶಿವ ಪರಮಾತ್ಮ ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸುತ್ತಾನೆ.

ಕೊನೆಯದಾಗಿ ಹೇಳುವುದಾದರೆ ಯಾರ ಜಾತಕದಲ್ಲಿ ಚಂದ್ರ ಉತ್ತಮ ಸ್ಥಿತಿಯಲ್ಲಿ ಇರುತ್ತಾನೆ ಅವರಿಗೆ ಯಾವುದೇ ಆರ್ಥಿಕ ಕೊರತೆ ಇರುವುದಿಲ್ಲ ಎಂಬುದಾಗಿ ಹೇಳುತ್ತಾರೆ. ಅದರಲ್ಲೂ ಚಂದ್ರನನ್ನು ಸಂಪತ್ತಿನ ಪ್ರತೀಕವಾಗಿ ಗುರುತಿಸಲಾಗುತ್ತದೆ. ವಿಶೇಷವಾಗಿ ಪೌರ್ಣಮಿಯಂದು ಚಂದ್ರನನ್ನು ಪೂಜಿಸಿದರೆ ನಿಮ್ಮ ಜೀವನದಲ್ಲಿ ಭಾರಿ ಮೊತ್ತದಲ್ಲಿ ಧನಾಗಮನ ಹಾಗೂ ನಿಮ್ಮ ವೃತ್ತಿಯಲ್ಲಿ ಉನ್ನತಿ ಸಿಗುತ್ತದೆ. ಈ ಎಲ್ಲಾ ಕಾರ್ಯಗಳನ್ನು ನೀವು ನಿಮ್ಮ ಜೀವನದಲ್ಲಿ ಮಾಡಿದರೆ ಎಂತಹ ಕಷ್ಟದಲ್ಲಿದ್ದರು ಕೂಡ ನೀವು ಧನವಂತರಾಗುತ್ತಾರೆ ಆಗಿ ಸಮಾಜದಲ್ಲಿ ಉತ್ತಮ ಗೌರವವನ್ನು ಪಡೆಯುತ್ತೀರಿ.

Comments (0)
Add Comment