ಬಿಗ್ ನ್ಯೂಸ್: ಟಿಪ್ಪು ಕಾಲದ ಮತ್ತೊಂದು ಆಚರಣೆಗೆ ಬ್ರೇಕ್? ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ಸಲಾಂ ಆರತಿಯ ಇನ್ನು ಮುಂದೆ ಏನಾಗಲಿದೆ ಗೊತ್ತೇ?

AMP Ads

ನಮಸ್ಕಾರ ಸ್ನೇಹಿತರೇ ನಮ್ಮ ದೇಶ ಎನ್ನುವುದು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದೇಶವಾಗಿದೆ. ಹೀಗಾಗಿ ಇಲ್ಲಿ ದೇವಸ್ಥಾನಗಳು ಕೂಡ ಅಧಿಕವಾಗಿ ಕಾಣಸಿಗುತ್ತವೆ. ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನದ ಕುರಿತಂತೆ. ಇಲ್ಲಿ ಒಂದು ಆಚರಣೆ ಮೊದಲಿನಿಂದಲೂ ಕೂಡ ನಡೆದುಕೊಂಡು ಬರುತ್ತಿತ್ತು ಆದರೆ ಇದರ ಕುರಿತಂತೆ ಕೆಲವೊಂದು ವಿರೋಧಗಳು ಕೂಡ ಕೇಳಿಬಂದಿದ್ದವು. ಹಾಗಿದ್ದರೆ ಈಗ ಸುದ್ದಿಯಲ್ಲಿರುವ ಈ ವಿಚಾರದ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ಅರ್ಥವಾಗುವಂತೆ ಹೇಳುತ್ತೇವೆ ಬನ್ನಿ.

ಹೌದು ಗೆಳೆಯರೇ ಹಿಂದೂ ದೇವಸ್ಥಾನ ವಾಗಿರುವ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸಂಜೆ 7 ಗಂಟೆಗೆ ಸಲಾಂ ಆರತಿ ನಡೆಯುತ್ತದೆ. ಮೈಸೂರು ಸಂಸ್ಥಾನವನ್ನು ಆಳ್ವಿಕೆ ಮಾಡುತ್ತಿದ್ದಾಗ ಟಿಪ್ಪುಸುಲ್ತಾನ್ ಈ ನಿಯಮವನ್ನು ದೇವಸ್ಥಾನದಲ್ಲಿ ಹೇರಿದ್ದ ಎಂಬುದಾಗಿ ಇತಿಹಾಸದಲ್ಲಿ ಉಲ್ಲೇಖವಾಗಿದೆ. ಆದರೆ ಹಿಂದೂ ದೇವಾಲಯದಲ್ಲಿ ಇಂತಹ ಹೆಸರಿನ ಆಚರಣೆ ನಡೆಯುವುದು ಎಷ್ಟರಮಟ್ಟಿಗೆ ಸರಿ ಎನ್ನುವುದಾಗಿ ಹಲವಾರು ವಾದಿಸಿದ್ದು ಜಿಲ್ಲಾಡಳಿತಕ್ಕೆ ಕೂಡ ಈ ಕುರಿತಂತೆ ಹೆಸರು ಬದಲಾಯಿಸುವಂತೆ ಮನವಿಯನ್ನು ಸಲ್ಲಿಸಲಾಗಿತ್ತು.

AMP Ad3

ಹೌದು ಗೆಳೆಯರೇ ಹಲವಾರು ಹಿಂದೂ ಮುಖಂಡರು ಸಲಾಂ ಆರತಿ ಎನ್ನುವ ಹೆಸರನ್ನು ಬದಲಾಯಿಸಿ ಹಿಂದೂ ಸಂಸ್ಕೃತಿಗೆ ಅನುಗುಣವಾಗುವಂತೆ ಹೆಸರನ್ನು ಮರು ನಾಮಕರಣ ಮಾಡುವಂತೆ ಆಗ್ರಹಿಸಿದ್ದರು. ಇನ್ನು ಈ ಕುರಿತಂತೆ ದೇವಸ್ಥಾನದ ಅಧಿಕಾರಿಗಳಿಂದ ಜಿಲ್ಲಾಧಿಕಾರಿಯವರಿಗೆ ಹೆಸರು ಬದಲಾವಣೆಯ ಅನುಮೋದನೆ ಹೋಗಿತ್ತು. ಜಿಲ್ಲಾಧಿಕಾರಿ ಆಗಿರುವ ಅಶ್ವತಿ ಯವರು ರಾಜ್ಯ ಮುಜರಾಯಿ ಇಲಾಖೆಯ ಕಮಿಷನರ್ ರವರಿಗೆ ಸಲಾಂ ಆರತಿಯ ಬದಲು ಸಂಧ್ಯಾ ಆರತಿ ಎಂದು ಹೆಸರು ಇಡುವ ಕುರಿತಂತೆ ಶಿಫಾರಸ್ಸನ್ನು ಮಾಡಿದ್ದಾರೆ ಎಂಬುದಾಗಿ ಈಗ ತಿಳಿದು ಬಂದಿದ್ದು ಮುಂದಿನ ದಿನಗಳಲ್ಲಿ ಇದು ಬದಲಾಗುವ ಸಾಧ್ಯತೆ ದಟ್ಟವಾಗಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ಕುರಿತಂತೆ ಮುಜರಾಯಿ ಇಲಾಖೆ ಯಾವ ನಿರ್ಧಾರವನ್ನು ಕೈ ತೆಗೆದುಕೊಳ್ಳುತ್ತದೆ ಎಂಬುದನ್ನು ಅಧಿಕೃತವಾಗಿ ಕಾದುನೋಡಬೇಕಾಗಿದೆ.

Comments (0)
Add Comment