ಐಪಿಎಲ್ ನಲ್ಲಿ ಭರ್ಜರಿಯಾಗಿ ಮಿಂಚುತ್ತಿರುವ ಇಬ್ಬರು ಆಟಗಾರರನ್ನು ಹಾಡಿ ಹೊಗಳಿದ ಸೌರವ್ ಗಂಗೂಲಿ. ಸೌರವ್ ಮನಗೆದ್ದ ಇಬ್ಬರು ಯಾರು ಗೊತ್ತೇ?

AMP Ads

ನಮಸ್ಕಾರ ಸ್ನೇಹಿತರೇ ಈ ಬಾರಿ ಐಪಿಎಲ್ ನಲ್ಲಿ ಯುವ ಪ್ರತಿಭೆಗಳು ಪರ್ಫಾರ್ಮ್ ಮಾಡುತ್ತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಯಾರನ್ನು ಆಯ್ಕೆ ಮಾಡಬೇಕು ಯಾರನ್ನು ಬಿಡಬೇಕು ಎನ್ನುವ ಗೊಂದಲದಲ್ಲಿ ಬಿಸಿಸಿಐನ ಆಯ್ಕೆಗಾರರು ಇದ್ದಾರೆ ಎಂದು ಹೇಳಬಹುದಾಗಿದೆ. ಅಷ್ಟರಮಟ್ಟಿಗೆ ಈ ಬಾರಿಯ ಐಪಿಎಲ್ ನಲ್ಲಿ ಹೊಸ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದಾರೆ. ಹೌದು ಗೆಳೆಯರೇ ಅನುಭವಿ ಆಟಗಾರರು ಪರದಾಡುತ್ತಿರುವ ಸಂದರ್ಭದಲ್ಲಿ ಹೊಸ ಯುವ ಭಾರತೀಯ ಆಟಗಾರರು ತಮ್ಮ ಭರವಸೆಯ ಪ್ರದರ್ಶನದ ಮೂಲಕ ಎಲ್ಲರಲ್ಲಿಯೂ ಕೂಡ ತಾವು ಭಾರತೀಯ ಕ್ರಿಕೆಟ್ ತಂಡಕ್ಕೆ ಸೇವೆ ಸಲ್ಲಿಸಲು ಸಿದ್ಧರಾಗಿದ್ದೇವೆ ಎಂಬುದನ್ನು ತೋರಿಸಿದ್ದಾರೆ.

ಇನ್ನು ಈ ಕುರಿತಂತೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಆಗಿರುವ ಸೌರವ್ ಗಂಗೂಲಿ ಅವರು ಕೂಡ ಯುವ ಆಟಗಾರರ ಕುರಿತಂತೆ ಮೆಚ್ಚುಗೆಯನ್ನು ಹೃದಯಪೂರ್ವಕವಾಗಿ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಈ ಬಾರಿ ಐಪಿಎಲ್ ನಲ್ಲಿ ತಮ್ಮ ಆಟದಿಂದ ಪ್ರತಿಯೊಬ್ಬರಲ್ಲೂ ಕೂಡ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗುವಂತಹ ಭರವಸೆ ಮೂಡಿಸಿರುವ ಇಬ್ಬರು ಕುರಿತಂತೆ ಸೌರವ್ ಗಂಗುಲಿ ಮನಬಿಚ್ಚಿ ಮಾತನಾಡಿದ್ದು ಅವರಿಬ್ಬರು ಕುರಿತಂತೆ ಸಾಕಷ್ಟು ನಿರೀಕ್ಷೆಗಳನ್ನು ಕೂಡ ಅವರು ಹೊಂದಿದ್ದಾರೆ. ಹೌದು ಗೆಳೆಯರೇ ಸೌರವ್ ಗಂಗೂಲಿ ರವರು ಮೆಚ್ಚಿರುವ ಇಬ್ಬರು ಫಾಸ್ಟ್ ಬೌಲರ್ ಗಳ ಇನ್ಯಾರು ಅಲ್ಲ ಒಬ್ಬರು ಸನ್ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬೌಲರ್ ಆಗಿರುವ ಉಮ್ರಾನ್ ಮಲ್ಲಿಕ್ ಇನ್ನೊಬ್ಬರು ರಾಜಸ್ತಾನ ರಾಯಲ್ಸ್ ತಂಡದ ಕುಲದೀಪ್ ಸೇನ್.

AMP Ad3

ಮಲಿಕ್ ಅವರು ಈ ಬಾರಿ ಐಪಿಎಲ್ ನಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡಿರುವ ದಾಖಲೆಗೆ ಒಳಗಾಗಿದ್ದಾರೆ. ವಿಕೆಟ್ ನಲ್ಲಿಯೂ ಕೂಡ ಈಗಾಗಲೇ 12 ಪಂದ್ಯಗಳಿಂದ 18 ವಿಕೆಟ್ ಗಳನ್ನು ಕಬಳಿಸಿ ಮಿಂಚುತ್ತಿದ್ದಾರೆ. ಇನ್ನು ಕುಲದೀಪ್ ಸೆನ್ ರವರು ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಕೊನೆಯ ಓವರ್ಗಳಲ್ಲಿ ಅತ್ಯುತ್ತಮವಾಗಿ ಕಂಟ್ರೋಲ್ ಮಾಡುವ ಕ್ಷಮತೆಯನ್ನು ಹೊಂದಿದ್ದರು. ನಿಜಕ್ಕೂ ಕೂಡ ಇವರಿಬ್ಬರ ಆಟವನ್ನು ನೋಡಲು ಸಂತೋಷವಾಗುತ್ತದೆ ಆದರೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡುವುದು ಆಯ್ಕೆಗಾರರ ಕೈಯಲ್ಲಿದೆ ಎಂಬುದಾಗಿ ಹೇಳಿದ್ದಾರೆ. ಇನ್ನು ಇಂತಹ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಭಾರತ ಕ್ರಿಕೆಟ್ ತಂಡದಲ್ಲಿ ಬಳಸುವಾಗ ಜಾಗರೂಕರಾಗಿರಬೇಕು ಇವರು ಮುಂದಿನ ಸ್ಟಾರ್ ಗಳಾಗಿ ಕಾಣಿಸಿಕೊಳ್ಳಬಹುದು ಎಂಬುದಾಗಿ ಕೂಡ ನುಡಿದಿದ್ದಾರೆ. ಸೌರವ್ ಗಂಗೂಲಿ ಅವರ ಅಭಿಪ್ರಾಯದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments (0)
Add Comment