ಕೊನೆಗೂ ಪ್ರೇಕ್ಷಕರ ಕ್ಷಮೆ ಕೇಳಿದ ಕಾಮೆಂಟೆಟರ್ ಸೈಮನ್ ಡುಲ್, ಐಪಿಎಲ್ ಪಂದ್ಯದಲ್ಲಿ ಒಬ್ಬ ಆಟಗಾರನ ಕುರಿತು ಹೀಗಾ ಮಾತನಾಡೋದು ಎಂದ ನೆಟ್ಟಿಗರು.

AMP Ads

ನಮಸ್ಕಾರ ಸ್ನೇಹಿತರೇ ಐಪಿಎಲ್ ಎಂಬುದು ಭಾರತೀಯ ಕ್ರೀಡಾಭಿಮಾನಿಗಳಿಗೆ ಇದೊಂದು ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವ ಆಗರ. ಭಾವನೆಗಳ ಸಮ್ಮಿಶ್ರಣ. ಇಲ್ಲಿ ಕೋಪ,ತಾಪ,ಪ್ರೀತಿ, ವ್ಯಂಗ್ಯ, ವಿಡಂಬನೆ ಎಲ್ಲವೂ ಇವೆ. ವೀಕ್ಷಕರು, ಆಟಗಾರರು, ನಿರೂಪಕರು,ಕಾಮೆಂಟೆಟರ್ ಗಳು ಹೀಗೆ ಪ್ರತಿಯೊಬ್ಬರಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಈಗ ಐಪಿಎಲ್ ನಲ್ಲಿಯೂ ಸಹ ಒಂದು ಭಾವನಾತ್ಮಕ, ಟೀಕಾತ್ಮಕ ಸನ್ನಿವೇಶ ನಡೆದು, ಕೊನೆಗೆ ಕ್ಷಮೆ ಕೇಳುವ ಮೂಲಕ ಅಂತ್ಯಗೊಂಡಿದೆ. ಬನ್ನಿ ಅದು ಏನು ಎಂಬುದನ್ನು ತಿಳಿಯೋಣ.

ಸಂಜು ಸ್ಯಾಮ್ಸನ್ ನಾಯಕನಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸಮನ್ ರಿಯಾನ್ ಪರಾಗ್ ಕಣಕ್ಕಿಳಿದಿದ್ದರು. ಆಗ ಕಾಮೆಂಟರಿಯಲ್ಲಿ ತೊಡಗಿದ್ದ ವೀಕ್ಷಕ ವಿವರಣೆಗಾರ ಸೈಮನ್ ಡುಲ್, ಪರಾಗ್ ಬಗ್ಗೆ ಕೇವಲವಾಗಿ ಮಾತನಾಡಿದರು.ಇವರು ಸೋಶಿಯಲ್ ಮೀಡಿಯಾ ದಲ್ಲಿ ಅಭಿಮಾನಿಗಳನ್ನು ಗಳಿಸಬಹುದೇ ಹೊರತು, ಮೈದಾನದಲ್ಲಿ ರನ್ ಗಳನ್ನಲ್ಲ ಎಂದು. ಇದು ಸೋಶಿಯಲ್ ಮೀಡಿಯಾ ದಲ್ಲಿ ಅಭಿಮಾನಿಗಳನ್ನು ಕೆರಳಿಸಿತು.

AMP Ad3

ಒಬ್ಬ ಆಟಗಾರನನ್ನು ನೀವು ಬಹಿರಂಗವಾಗಿ ಹೀಗೆ ಕೀಳಾಗಿ ಕಾಮೆಂಟ್ ಮಾಡಬಹುದಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಲು ಆರಂಭಿಸಿದರು. ಇದು ದೊಡ್ಡದಾಗಿ ವೈರಲ್ ಆಗತೊಡಗಿತು. ಆಗ ತಮ್ಮ ವರಸೆ ಬದಲಿಸಿದ ಸೈಮನ್ ಡುಲ್ ಕ್ಷಮೆ ಕೇಳುವ ಮೂಲಕ ವಿವಾದವನ್ನು ತಣ್ಣಗಾಗಿಸಿದ್ದಾರೆ. ಈ ಬಗ್ಗೆ ಟ್ವೀಟ್ ಸಹ ಮಾಡಿದ್ದಾರೆ. ನೀವಿಲ್ಲಿ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿದ್ದಾರೆ.ರಿಯಾನ್ ಪರಾಗ್ ಗೆ ಸೋಶಿಯಲ್ ಮೀಡಿಯಾ ದಲ್ಲಿ ಸಾಕಷ್ಟು ಅಭಿಮಾನಿಗಳಿರಬಹುದು. ಆದರೇ ಇದು ಅಂಗಳದಲ್ಲಿ ಉಪಯೋಗಕ್ಕೆ ಬರುವುದಿಲ್ಲ. ನನ್ನ ಮಾತಿನ ಒಳಾರ್ಥ ಇದು. ಆದರೂ ನನ್ನ ಮಾತಿನಿಂದ ನಿಮಗೆ ಬೇಸರವಾಗಿದ್ದರೇ ದಯವಿಟ್ಟು ಕ್ಷಮಿಸಿ ಎಂದು ಹೇಳಿದ್ದಾರೆ. ಈ ಮೂಲಕ ಐಪಿಎಲ್ ಆರಂಭದ ವಾರದಲ್ಲಿಯೇ ವಿವಾದವೊಂದು ತಣ್ಣಗಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Comments (0)
Add Comment