ವಿಷ್ಣುವರ್ಧನ್ ಅವರ ಈ ಒಂದು ಸಿನಿಮಾವನ್ನು ನೀವು ನೋಡಿಲ್ಲವಾದರೆ ನಿಮ್ಮ ಬದುಕೇ ವ್ಯರ್ಥ, ಬದುಕಿದ್ದು ಪ್ರಯೋಜನ ಇಲ್ಲ ಬಿಡಿ

AMP Ads

ನಮಸ್ಕಾರ ಸ್ನೇಹಿತರೇ, ಡಾ ವಿಷ್ಣುವರ್ಧನ್ ಅವರು ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪು ಮಾತ್ರ ಸದಾ ಸದಾ ಕಾಲಕ್ಕೆ ಶಾಶ್ವತ. ಅವರ ನಟನೆಯ ಎಲ್ಲಾ ಚಿತ್ರಗಳೂ ಅವರ ನೆನಪನ್ನು ಮತ್ತೆ ಮತ್ತೆ ಮರುಕಳಿಸುವಂತೆ ಮಾಡುತ್ತೆ. ಅಂದಿನ ಕಾಲದಲ್ಲಿ ಅವರು ಪಾತ್ರಕ್ಕೆ ಜೀವತುಂಬಿ ನಟಿಸಿದ್ದ ಅದೆಷ್ಟೋ ಚಿತ್ರಗಳು ಇಂದಿಗೂ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವಂಥದ್ದು. ಮಹಾಭಾರತದಲ್ಲಿ ಕರ್ಣ ಪಾತ್ರವನ್ನ ಜನರು ಎಷ್ಟು ಇಷ್ಟಪಡುತ್ತಾರೋ, ಹಾಗೆ ವಿಷ್ಣು ದಾದಾ ಅಭಿನಯದ ಕರ್ಣ ಚಿತ್ರ ಕೂಡ ಜನ ಅಷ್ಟೇ ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಕಾರಣ ಕರ್ಣ ಚಿತ್ರದ ಕಥೆ ಹಾಗೂ ವಿಷ್ಣು ಅವರ ಅಭಿನಯ.

ಕರ್ಣ ಚಿತ್ರ ಹೆಸರೇ ಹೇಳುವಂತೆ ತ್ಯಾಗಕ್ಕೆ ಹೆಸರಾದ ಚಿತ್ರ. ಇದೊಂದು ಯುನಿವರ್ಸಲ್ ಕಥೆ. ಅಂದೂ ಇಂದು ಎಂದೆಂದೂ ಜನರ ಜೀವನಕ್ಕೆ ಹೊಂದಾಣಿಕೆಯಾಗುವಂಥ ಕಥಾ ಹಂದರ ಈ ಚಿತ್ರದಲ್ಲಿದೆ. ಕರ್ಣ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರು ನಿಭಾಯಿಸಿದ್ದ ಅಭಿನಯಿಸಿರುವಂತಹ ಪಾತ್ರ ಅಜರಾಮರ, ಶಂಕರ್ ಅವರ ಸಾಹಿತ್ಯ, ಎಂ ರಂಗರಾವ್ ಅವರ ಸಂಗೀತ ಇರುವ ಈ ಚಿತ್ರಕ್ಕೆ ಭಾರ್ಗವ ಅವರ ನಿರ್ದೇಶನವಿದೆ. ಇವರುಗಳಿಗೆ ವಿಷ್ಣು ಸರ್ ಅತ್ಯುತ್ತಮ ಕಾಂಬಿನೇಶನ್ ಆಗಿದ್ರು. ಹಾಗಾಗಿ ಈ ಚಿತ್ರ ಅತ್ಯದ್ಭುತವಾಗಿ ಮೂಡಿಬಂದಿತ್ತು.

AMP Ad3

ಈ ಚಿತ್ರದ ಒಂದು ಹಾಡು ನಿಮಗೆಲ್ಲಾ ನೆನಪಿರಬಹುದು.. ಆ ಕರ್ಣನಂತೆ ನೀ ದಾನಿಯಾದೆ ಇನ್ನೊಂದು ಜೀವಕೆ ಆಧಾರವಾದೆ.. ಎಂಬ ಆ ಹಾಡು ಇಂದಿಗೂ ನಮ್ಮನ್ನು ಭಾವುಕರನ್ನಾಗಿಸುತ್ತೆ. ವಿಷ್ಣು ಜೊತೆ ಅವರ ಅತ್ತಿಗೆಯಾಗಿ ನಾಯಕಿ ಸುಮಿತ್ರಾ, ತಂದೆ ಅಶ್ವಥ್ ಅವರು ನಿರ್ವಹಿಸಿದ ಜವಾಬ್ದಾರಿ ಶ್ಲಾಘನೀಯ. ವಿದ್ಯೆ ಇದ್ದರೂ ಕೆಲಸ ಸಿಗದೆ ನಿರುದ್ಯೋಗಿಯಾಗಿರುವ ಒಬ್ಬ ಯುವಕ ತನ್ನ ತಂಗಿಯ ಮದುವೆಗಾಗಿ ತನ್ನ ಜೀವದ ಅಂಗಾಂಗವನ್ನು ಕೂಡ ದಾನ ಮಾಡಿದಂತಹ ಕರ್ಣ ಚಿತ್ರದ ಸನ್ನಿವೇಶಗಳು ಮನಕಲಕುತ್ತವೆ. ಒಟ್ಟಿನಲ್ಲಿ ಅದ್ಭುತ ಸಾಂಸಾರಿಕ ಚಿತ್ರವಾದ ಕರ್ಣ ಚಿತ್ರವನ್ನ ನೀವಿನ್ನೂ ನೋಡಿಲ್ಲವಾದರೆ ತಪ್ಪದೇ ನೋಡಿ.

Comments (0)
Add Comment