ಉಕ್ರೇನ್ ಬಗ್ಗೆ ನಿಮಗೆ ತಿಳಿಯದ 7 ಸಂಗತಿಗಳು ಯಾವ್ಯಾವು ಗೊತ್ತೇ?? ಚಿಕ್ಕ ದೇಶವಾದರೂ ಅಚ್ಚರಿಗಳಿಗೇನು ಕಡಿಮೆಯಿಲ್ಲ.

AMP Ads

ನಮಸ್ಕಾರ ಸ್ನೇಹಿತರೇ , ಸದ್ಯ ಉಕ್ರೇನ್ ರಷ್ಯಾ ಯುದ್ಧದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಉಕ್ರೇನ್ ನಲ್ಲಿ ಓದುತ್ತಿದ್ದ ಹಲವು ಭಾರತೀಯ ವಿದ್ಯಾರ್ಥಿಗಳು ದೇಶ ತಲುಪುವಲ್ಲಿ ಸಫಲರಾಗಿದ್ದಾರೆ. ಸದ್ಯ ಎರಡೂ ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆ ಯಶಸ್ವಿಯಾಗಬೇಕಿದೆ. ಈ ಸಂದರ್ಭದಲ್ಲಿ ಉಕ್ರೇನ್ ನ ಬಗ್ಗೆ ಕೆಲವು ವಿಷಯಗಳು ನಮ್ಮ ಗಮನಕ್ಕೆ ಬಂದವು. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

AMP Ad3

ಮೊದಲನೆಯದಾಗಿ ಮೆಕ್ ಡೊನಾಲ್ಡ್ಸ್. ಪ್ರಪಂಚದಾದ್ಯಂತ 32,000 ಕ್ಕೂ ಹೆಚ್ಚು ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳಿವೆ, ಆದರೆ ಉಕ್ರೇನ್‌ನ ಕೀವ್‌ನಲ್ಲಿರುವ ವೊಕ್ಜಾಲ್ನಾ ಸ್ಕ್ವೇರ್‌ನಲ್ಲಿರುವ ಮೆಕ್‌ಡೊನಾಲ್ಡ್ಸ್ ಬ್ರಾಂಚ್ ಮೂರನೇ ಅತಿ ಹೆಚ್ಚು ಜನ ಭೇಟಿ ನೀಡಿದ ಬ್ರಾಂಚ್ ಆಗಿದೆ. ಇನ್ನು ಉಕ್ರೇನ್ ಯುರೋಪ್ ನಲ್ಲಿ ಸಂಪೂರ್ಣವಾಗಿ ವಿಸ್ತರಿಸಿರುವ ಅತಿದೊಡ್ಡ ದೇಶವಾಗಿದೆ. ಇದು ರಷ್ಯಾ, ಕಝಾಕಿಸ್ತಾನ್ ಮತ್ತು ಟರ್ಕಿಗಿಂತ ಚಿಕ್ಕದಾಗಿದೆ, ಆದರೆ ಆ ದೇಶಗಳ ಹೆಚ್ಚಿನ ಭಾಗಗಳು ಏಷ್ಯಾದಲ್ಲಿವೆ.

ಇನ್ನು ಈ ಫಾಕ್ಟ್ ಕೇಳಿದ್ರೆ ನಿಮಗೆ ಶಾಕ್ ಆಗ್ಬಹುದು. ದಕ್ಷಿಣ ಆಫ್ರಿಕಾದ ನಂತರ ಉಕ್ರೇನ್ ವಿಶ್ವದ ಎರಡನೇ ಅತಿ ಹೆಚ್ಚು ಸಾ’ವಿನ ಪ್ರಮಾಣವನ್ನು ಹೊಂದಿದ ದೇಶ ಎನಿಸಿಕೊಂಡಿದೆ. ಉಕ್ರೇನ್‌ನಲ್ಲಿ ಪ್ರತಿ ವರ್ಷ 1000 ನಿವಾಸಿಗಳಿಗೆ 15.75 ಜನರು ಸಾ’ಯು’ತ್ತಾರೆ. ಇದು ನೆದರ್ಲೆಂಡ್ಸ್‌ಗಿಂತ ಸುಮಾರು ಎರಡು ಪಟ್ಟು ಹೆಚ್ಚು. ಉಕ್ರೇನ್‌ನಲ್ಲಿ ಈ ರೀತಿ ಸಾ’ವಿನ ಪ್ರಮಾಣ ಹೆಚ್ಚುವುದಕ್ಕೆ ಮುಖ್ಯ ಕಾರಣ, ಧೂಮಪಾನ ಮತ್ತು ಅತಿಯಾದ ಮದ್ಯಪಾನ!

AMP Ads4

ಉಕ್ರೇನಿನ ಇನ್ನೊಂದು ಆಸಕ್ತಿದಾಯಕ ಸಂಗತಿ ಎಂದರೆ ಇಲ್ಲಿ ವಾಸಿಸುವ ಸುಮಾರು 77% ಉಕ್ರೇನಿಯನ್ನರು ಎಂದಿಗೂ ಉಕ್ರೇನ್ ಬಿಟ್ಟು ಹೊರಗೆ ಹೋಗೇ ಇಲ್ಲ, ಮೂರನೇ ಒಂದು ಭಾಗದಷ್ಟು ನಿವಾಸಿಗಳು ತಮ್ಮ ಸ್ಥಳೀಯ ಪ್ರಾಂತ್ಯ ಬಿಟ್ಟು ಆಚೆ ಬಂದೂ ಇಲ್ಲ! ಉಕ್ರೇನ್ ನ ಕೀವ್ ವಿಶ್ವದ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣವನ್ನು ಹೊಂದಿದೆ. ಆರ್ಸೆನಲ್ನಾಯಾ ನಿಲ್ದಾಣವು 105 ಮೀಟರ್ ಗಳಷ್ಟು ಆಳದಲ್ಲಿದೆ. ಇಲ್ಲಿಗೆ ಬಂದರೆ ಮೊದಲು ಈ ಮೆಟ್ರೋದಲ್ಲಿ ಸವಾರಿ ಮಾಡಬೇಕು. ಅಲ್ಲಿಗೆ ಹೋಗವುದಕ್ಕೆ ನೀವು ಎಸ್ಕಲೇಟರ್ ಮೇಲೆ ಕೆಲವು ನಿಮಿಷಗಳ ಕಾಲ ನಿಲ್ಲಬೇಕು.

ಇದು ನಿಜಕ್ಕೂ ಊಹಿಸಲಾಗದ ಸಂಗತಿ. 2ನೇ ವಿಶ್ವ ಯುದ್ಧದಲ್ಲಿ 6 ಮಿಲಿಯನ್ ಯಹೂದಿಗಳು ಕೊಲ್ಲಲ್ಪಟ್ಟರು ಎಂದು ಹಲವರಿಗೆ ಗೊತ್ತಿದೆ. ಆದರೆ ಅವರಲ್ಲಿ 1.5 ಮಿಲಿಯನ್‌ಗಿಂತಲೂ ಹೆಚ್ಚು ಜನರು ಉಕ್ರೇನಿಯನ್ ಯಹೂದಿಗಳು ಎಂಬುದು ಗೊತ್ತಾ? ಆಗ ಯಹೂದಿಗಳನ್ನು ಒಬ್ಬರ ನಂತರ ಒಬ್ಬರಂತೆ, ಗುಂಡು ಹಾರಿಸಿ ಸಾಮೂಹಿಕ ಸಮಾಧಿಗಳಿಗೆ ಎಸೆಯಲಾಗುತ್ತಿತ್ತು. 1941ರ ಪ್ಟೆಂಬರ್ 29 ಮತ್ತು 30ರಂದು, ಕೀವ್‌ನ ಬಾಬಿ ಯಾರ್ ಕಂದರದಲ್ಲಿ ಸುಮಾರು 34,000 ಯಹೂದಿಗಳನ್ನು ಗುಂಡಿಕ್ಕಿ ಕೊಲ್ಲಲಾಯಿತು. ಒಟ್ಟೂ, ಈ ಕಂದರದಲ್ಲಿಯೇ 100,000 ಕ್ಕೂ ಹೆಚ್ಚು ಯಹೂದಿಗಳನ್ನು ಸಮಾಧಿ ಮಾಡಲಾಯಿತು ಎನ್ನುವುದು ನೋವಿನ ಸಂಗತಿ.

ಇನ್ನು ಕೊನೆಯದಾಗಿ, ಉಕ್ರೇನಿಯನ್ ಅಧ್ಯಕ್ಷ ಪೆಟ್ರೋ ಪೊರೊಶೆಂಕೊ ತನ್ನ ಚಾಕೊಲೇಟ್ ಕಾರ್ಖಾನೆಗೆ ಹೆಸರುವಾಸಿಯಾದವರು. ಅವರ ’ರೋಶೆನ್’ ಚಾಕಲೇಟ್ ಉಕ್ರೇನ್‌ನ ಅತ್ಯಂತ ಜನಪ್ರಿಯ ಚಾಕೊಲೇಟ್ ಎನಿಸಿದೆ.

Comments (0)
Add Comment