ಏರ್ಟೆಲ್ ಗೆ ಠಕ್ಕರ್, ಜಿಯೋ ಬಳಕೆದಾರರಿಗೆ ಸಿಹಿಸುದ್ದಿ: ದಿನಕ್ಕೆ 1GB ಡೇಟಾ, ಉಚಿತ ಕರೆ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಿರಿ. ಹೇಗೆ ಗೊತ್ತೇ??

AMP Ads

ನಮಸ್ಕಾರ ಸ್ನೇಹಿತರೇ, ಭಾರತದ ದೈತ್ಯ ಟೆಲಿಕಾಂ ಎಂದೇ ಹೆಸರಾಗಿರುವ ಜಿಯೋ ಕಂಪನಿ ಗ್ರಾಹಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲವಾಗುವಂಥ ರೀಚಾರ್ಜ್ ಪ್ಲ್ಯಾನ್ ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದ್ದು ದಿನಕ್ಕೆ 1ಜಿಬಿ ಡೇಟಾ, ಅನಿಯಮಿತ ವಾಯಿಸ್ ಕರೆಗಳೂ ಸೇರಿವೆ. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನವಾಗುವಂಥ ಅನೇಕ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸಿದೆ. ಇದರಲ್ಲಿ ಕಡಿಮೆ ಬೆಲೆಗೆ ಹೆಚ್ಚು ಸೌಲಭ್ಯಗಳನ್ನು ಹೊಂದಿರ್ವ ರೀಚಾರ್ಜ್ ಪ್ಲ್ಯಾನ್ ಗಳೂ ಸೇರಿವೆ. 200 ರೂ. ಗಿಂತಲೂ ಕಡಿಮೆ ಬೆಲೆಗೆ ರೀಚಾರ್ಜ್ ಪ್ಲ್ಯಾನ್ ಗಳನ್ನು ಜಿಯೋ ಪರಿಚರಿಸಿದ್ದು, ಇದರಲ್ಲಿ ಇಂಟರ್ ನೆಟ್, ವಾಯಿಸ್ ಕರೆ, ಎಸ್ ಎಂ ಎಸ್ ಎಲ್ಲಾ ಲಾಭಗಳನ್ನೂ ಗ್ರಾಹಕರು ಪಡೆಯಬಹುದು.

AMP Ad3

ಜಿಯೋ ಫೋನ್ ನ 186 ರೂ. ಯೋಜನೆ ಬಗ್ಗೆ ನೋಡೋಣ. ಇದರಲ್ಲಿ ಬಳಕೆದಾರರು 28 ದಿನಗಳ ವ್ಯಾಲಿಡಿಟಿ ಪಡೆಯುತ್ತಾರೆ. ಪ್ರತಿದಿನ 1ಜಿಬಿ ಡೇಟಾ ಸಿಗುತ್ತದೆ. ದಿನದ ಡೇಟಾ ಬಳಕೆ ಮುಗಿದಿದ್ದರೆ, ಇಂಟರ್ನೆಟ್ ವೇಗವು 64 Kbps ಗೆ ಇಳಿಯುತ್ತದೆ. ಆದರೆ ದೈನಂದಿನ ಡಾಟಾ ಮುಗಿದರೂ ನೀವು ಇಂಟರ್ನೆಟ್ ಬಳಸಬಹುದು. ಅಷ್ಟೇ ಅಲ್ಲ ಈ ಯೋಜನೆಯಲ್ಲಿ ಅನಿಯಮಿತ ಕರೆ ಮಾಡುವ ಸೌಲಭ್ಯವನ್ನು ನೀಡಲಾಗುತ್ತದೆ. ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಉಚಿತ ಕರೆ ಮಾಡಬಹುದು. ಅಲ್ಲದೇ ದಿನಕ್ಕೆ 100 ಎಸ್ ಎಂ ಎಸ್ ಗಳನ್ನು ಉಚಿತವಾಗಿ ಮಾಡಬಹುದು. ಜೊತೆಗೆ ಜಿಯೋ ಮೂವಿ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್‌ನ ಉಚಿತ ಚಂದಾದಾರಿಕೆಯನ್ನು ಯೋಜನೆಯಲ್ಲಿ ನೀಡಲಾಗಿರುವುದು ವಿಶೇಷ.

Comments (0)
Add Comment