ಟೀಮ್ ಇಂಡಿಯಾ ಆಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದ ಕೋಚ್ ರಾಹುಲ್ ದ್ರಾವಿಡ್, ಇದು ಪಾಠ ಕೂಡ ಎಂದ ನೆಟ್ಟಿಗರು, ಏನು ಗೊತ್ತೇ?

AMP Ads

ನಮಸ್ಕಾರ ಸ್ನೇಹಿತರೇ ಟೀಮ್ ಇಂಡಿಯಾ ಮೊದಲಿನ ಥರ ಈಗಿಲ್ಲ. ಮೊದಲು ಟೀಮ್ ಇಂಡಿಯಾದಲ್ಲಿ ಆರರಿಂದ ಏಳು ಆಟಗಾರರು ಖಾಯಂ ಸ್ಥಾನ ಹೊಂದಿರುತ್ತಿದ್ದರು. ಉಳಿದ ಆಟಗಾರರ ಸ್ಥಾನ ಆಗಾಗ ಬದಲಾಗತ್ತಿತ್ತು. ಸಮರ್ಥ ಆಟಗಾರರನ್ನು ರಿಪ್ಲೇಸ್ ಮಾಡಬಲ್ಲ ಬೆಂಚ್ ಸ್ಟ್ರೆಂತ್ ಸಹ ಇರಲಿಲ್ಲ. ಆದರೇ ಈಗ ಕಾಲ ಬದಲಾಗಿದೆ. ಟೀಮ್ ಇಂಡಿಯಾದಲ್ಲಿ ಇರುವಷ್ಟೇ ಬಲಿಷ್ಠ ಆಟಗಾರರು ಬೆಂಚ್ ನಲ್ಲಿ ಸಹ ಇದ್ದಾರೆ. ಬೆಂಚ್ ನಲ್ಲಿದ್ದ ಆಟಗಾರರನ್ನೇ ಬಳಸಿ, ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಗೆದ್ದ ಉದಾಹರಣೆ ಇದೆ. ಹೀಗಾಗಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದೇ ಈಗ ದೊಡ್ಡ ಸವಾಲಾಗಿದೆ.

ಇನ್ನು ದೊಡ್ಡ ಸವಾಲೆಂದರೇ ಅದು ಫಿಟ್ ನೆಸ್ ಸಮಸ್ಯೆ. ಈಗಿನ ಆಟಗಾರರು ಹಲವಾರು ರೀತಿಯ ಫಿಟ್ ನೆಸ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸತತವಾಗಿ ಕ್ರಿಕೇಟ್ ಆಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಫಾರ್ಮ್ ಸಮಸ್ಯೆ ಸಹ ಎದುರಿಸುತ್ತಿದ್ದಾರೆ.ಇದು ಸಹ ಟೀಮ್ ಮ್ಯಾನೇಜ್ ಮೆಂಟ್ ಗೆ ತಲೆನೋವಾಗಿದೆ. ಪದೇ ಪದೇ ತಂಡದ ಸಂಯೋಜನೆಯಲ್ಲಿ ಬದಲಾವಣೆಗಳಾದರೇ, ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕದಲ್ಲಿದೆ.

AMP Ad3

ಹೀಗಾಗಿ ಭಾರತ ತಂಡದ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್, ತಂಡದ ಆಟಗಾರರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.ಬನ್ನಿ ಅದು ಏನು ಎಂದು ತಿಳಿಯೋಣ. ಫಾರ್ಮ್ ಕಳೆದುಕೊಂಡಿರುವಾಗ ಅತಿಯಾಗಿ ವಿಚಲಿತರಾಗುವುದು ಬೇಡ. ಸಾಕಷ್ಟು ಧನಾತ್ಮಕವಾಗಿ ಯೋಚಿಸಿ. ನೀವು ಮಾಡುತ್ತಿರುವ ತಪ್ಪುಗಳು ಯಾವುವು ಹಾಗೂ ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳುವುದು ಎಂದು ಯೋಚಿಸಿ. ಅದರ ಬಗ್ಗೆ ಹೆಚ್ಚು ಕೆಲಸ ಮಾಡಿ. ಆಗ ಮಾತ್ರ ನೀವು ಫಾರ್ಮ್ ಗೆ ಮರಳಲು ಸಾಧ್ಯ. ಫಾರ್ಮ್ ಜೊತೆ ಫಿಟ್ ನೆಸ್ ಕಡೆ ಸಹ ಗಮನಹರಿಸಿ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Comments (0)
Add Comment