ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಲು ಮುಂದಾದ ಏರ್ಟೆಲ್ ಹಾಗೂ ವೊಡಾಫೋನ್. ಜಿಯೋ ಬಳಕೆದಾರರು ಮಾತ್ರ ನಿರಾಳ. ಏನು ಗೊತ್ತೇ?

AMP Ads

ನಮಸ್ಕಾರ ಸ್ನೇಹಿತರೇ, ಈಗಾಗಲೇ ಇಂಧನ ಬೆಲೆ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ತತ್ತರಿಸುತ್ತಿದ್ದಾರ್‍ಎ. ಅಲ್ಲದೇ ಕಳೆದ ವರ್ಷ ಟೆಲಿಕಾಂ ಕಂಪನಿಗಳೂ ಕೂಡ ರೀಚಾರ್ಜ್ ಪ್ಲ್ಯಾನ್ ಗಳ ಬೆಲೆ ಏರಿಕೆ ಮಾಡಿದ್ದವು. ಇದೀಗ ಮತ್ತೆ ಟೆಲಿಕಾಂ ಕಂಪನಿಗಳು ಬೆಲೆ ಏರಿಸುವುದಾಗಿ ಗ್ರಾಹಕರಿಗೆ ಕಹಿ ಸುದ್ದಿಯನ್ನು ನೀಡಿವೆ. ಕಳೆದ ನವೆಂಬರ್ 2021 ರಲ್ಲಿ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು 18 ರಿಂದ 25 ಪ್ರತಿಶತದಷ್ಟು, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳು ಏರಿಸಿದ್ದವು.

AMP Ad3

ಏರ್‌ಟೆಲ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲ್ ವಿಟ್ಟಲ್ ಹಾಗೂ ವೋಡಾಫೋನ್ ಐಡಿಯಾ ಎಂಡಿ ಮತ್ತು ಸಿಇಒ ರವೀಂದರ್ ಟಕ್ಕರ್ ಅವರುಗಳು ಪ್ರತ್ಯೇಕವಾಗಿ ನಡೆದಿರುವ ಕಾರ್ಯಕ್ರಮಗಳಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ವೋಡಾಫೋನ್‌ ಐಡಿಯಾ ಅರ್ನಿಂಗ್ಸ್ ಸಭೆಯಲ್ಲಿ ಮಾತನಾಡಿದ್ದ ವೋಡಾಫೋನ್ ಐಡಿಯಾ ಎಂಡಿ ಮತ್ತು ಸಿಇಒ ಆಗಿರುವ ರವೀಂದರ್ ಟಕ್ಕರ್ “2022 ರಲ್ಲಿ ಮತೊಮ್ಮೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಬೆಲೆ ಏರಿಕೆ ನಡೆಸಬೇಕಾಗುತ್ತದೆ.

2022 ರಲ್ಲಿ ಈ ಬೆಲೆಗಳು ಎಷ್ಟು ಬೇಗನೆ ಬದಲಾಗುತ್ತವೆ ಎಂಬುದನ್ನುನೋಡಬೇಕಾಗಿದೆ ಎಂದು ಹೇಳಿದ್ದಾರೆ. ಇದರ ಜೊತೆಯಲ್ಲೇ ಭಾರ್ತಿ ಏರ್‌ಟೆಲ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲ್ ವಿಟ್ಟಲ್ ಅವರು ಕೂಡ ಬೆಲೆ ಏರಿಕೆ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಾರೆ. ಈ ಹಣಕಾಸು ವರ್ಷದಲ್ಲಿ ಬೆಲೆ ಏರಿಕೆ ಸಂಭವಿಸಿದಲ್ಲಿ ಕಂಪನಿಯು ಮುನ್ನಡೆ ಸಾಧಿಸಲು ಹಿಂಜರಿಯುವುದಿಲ್ಲ ಎಂದು ಗೋಪಾಲ್ ವಿಟ್ಟಲ್ ಅವರು ಹೇಳಿದ್ದಾರೆ. ಅಂದಾಜಿನ ಪ್ರಕಾರ ಮುಂದಿನ ವರ್ಷಗಳಲ್ಲಿ ಪ್ರತಿ ಬಳಕೆದಾರರ ಸರಾಸರಿ ಆದಾಯ ರೂ 300 ಕ್ಕೆ ಏರುತ್ತದೆ. ಹಾಗಾಗಿ ನಮ್ಮ ಹಾಗೂ ಬಳಕೆದಾರರ ಆದಾಯ ರೂ. 200 ಗೆ ಏರಿಕೆಯಾಗಲಿದೆ 2022 ರಲ್ಲಿ 25 ಪ್ರತಿಶತದಷ್ಟು ಸುಂಕದ ಹೆಚ್ಚಳವು ನಡೆಯುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕು ಎಂದಿದ್ದಾರೆ. ಗೋಪಾಲ್ ವಿಟ್ಟಲ್ ಅವರು. ಒಟ್ಟಿನಲ್ಲಿ ಬೆಲೆ ಏರಿಕೆ ಸದ್ಯದಲ್ಲೇ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ.

Comments (0)
Add Comment