ಹುಡುಗಿಯರು ರಾತ್ರಿಯ ಸಮಯದಲ್ಲಿ ಹಾಗೂ ಮುಂಜಾನೆ ಇಂಟರ್ನೆಟ್ ಅಲ್ಲಿ ಯಾವ ವಿಷಯಗಳ ಕುರಿತು ಹುಡುಕುತ್ತಾರೆ ಗೊತ್ತಾ??

AMP Ads

ನಮಸ್ಕಾರ ಸ್ನೇಹಿತರೇ, ಕೈಯಲ್ಲಿ ಮೊಬೈಲ್ ಹಿಡಿದು ಪ್ರಪಂಚವನ್ನೇ ಸುತ್ತೋದಕ್ಕೆ ಜನಾಂಗಬೇಧವಂತೂ ಇಲ್ಲವೇ ಇಲ್ಲ! ಯಾವ ವಯಸ್ಸಿನ ಮಿತಿಯೂ ಇಲ್ಲ, ಗಂಡು ಹೆಣ್ಣು ಬೇಧ ಇಲ್ದೆ ಎಲ್ಲರೂ ಅಂತರ್ಜಾಲದಲ್ಲಿಯೇ ದಿನಕಳೆಯುತ್ತಾರೆ. ಕೆಲವರು ಮೊಬೈಲ್ ಹಿಡಿದು ಉಜ್ಜುತ್ತಾ ಇದ್ರೆ, ಇನ್ನೂ ಕೆಲವರು ಅಬ್ಬಾ ಅದೇನು ನೋಡುತ್ತಾರೋ ಇಡೀ ದಿನ ಮೊಬೈಲ್ ನಲ್ಲಿ ಎಂದುಕೊಳ್ಳುತ್ತಾರೆ. ಹೌದು ಪುಟ್ಟ ಮೊಬೈಲ್ ಇಡೀ ಪ್ರಂಪಂಚವನ್ನೇ ನಮ್ಮ ಕಣ್ಮುಂದೆ ಇಡತ್ತೆ. ಅಂದಹಾಗೆ ಅತಿಯಾಗಿ ಮೊಬೈಲ್ ಬಳಸುವವರು ಹುಡುಗಿಯರೂ ಕೂಡ. ಗೂಗಲ್ ನಲ್ಲಿ ಹೆಚ್ಚಾಗಿ ಯಾವ ವಿಷಯ ಸರ್ಚ್ ಮಾಡ್ತಾರೆ ಗೊತ್ತಾ?

ಒಂದು ವರದಿ ಪ್ರಕಾರ, ದೇಶದ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ, ಸುಮಾರು 20 ಮಿಲಿಯನ್ ಮಹಿಳೆಯರು ಆನ್‌ಲೈನ್‌ನಲ್ಲಿ ತಮ್ಮ ದೈನಂದಿನ ಜೀವನದ ಬಗ್ಗೆ ಹಲವು ವಿಷಯಗಳನ್ನು ತಿಳಿಯಲು ಇಂಟರ್ನೆಟ್ ಬಳಸುತ್ತಾರೆ. ಇದರಲ್ಲಿ ಶೇ.75ರಷ್ಟು ಮಹಿಳೆಯರು 15-34 ವರ್ಷದವರು. ಇನ್ನು ಶೇ. 31ರಷ್ಟು ಹದಿಹರೆಯದವರು ಡಯೆಟಿಂಗ್ ಮತ್ತು ಫಿಟ್ ಆಗಿರುವುದರ ಬಗ್ಗೆ ಗೂಗಲ್ ಮಾಡುತ್ತಾರೆ. ಶೇ.17 ರಷ್ಟು ಜನರು ಸೆಕ್ಸ್, ಡಿಪ್ರೆಶನ್ ಡ್ರಗ್ಸ್ ಮೊದಲಾದವುಗಳ ಬಗ್ಗೆ ಸರ್ಚ್ ಮಾಡುತ್ತಾರೆ ಎನ್ನುತ್ತೆ ವರದಿ.

AMP Ad3

ಕೆಲಸದ ಬಗ್ಗೆ ಹೆಚ್ಚು ಒಲವು ಹೊಂದಿರುವ ಹುಡುಗಿಯರು, ಕೆರಿಯರ್ ಬಗ್ಗೆ ಹೆಚ್ಚು ಇಂಟರ್ನೆಟ್ನಲ್ಲಿ ಹುಡುಕುತ್ತಾರೆ. ಉದ್ಯೋಗದ ಬಗ್ಗೆ, ಮುಂದಿನ ಜೀವನದ ಬಗ್ಗೆ ಇತರರ ಕಲ್ಪನೆಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಇನ್ನಷ್ಟು ಜನ ಸದಾ ಸೌಂದರ್ಯ ಪ್ರಿಯರು. ಹಾಗಾಗಿ ಹೊಸ ಹೊಸ ಸೌಂದರ್ಯ ಉತ್ಪನ್ನಗಳ ಬಗ್ಗೆ ಸಂಶೋಧನೆ ನಡೆಸುತ್ತಲೇ ಇರುತ್ತಾರೆ. ಅದರಲ್ಲೂ ಇತ್ತೀಚಿಗೆ ಹೆಚ್ಚಾಗಿ ತ್ವಚೆಯ ಸಮಸ್ಯೆಗೆ ಮನೆಮದ್ದುಗಳ ಪರಿಹಾರವನ್ನು ಹುಡುಕುವವರೇ ಹೆಚ್ಚು.

ಇನ್ನು ಅನೇಕ ಹುಡುಗಿಯರು ತಮ್ಮ ಬೊಜ್ಜಿನಿಂದ ನಿವಾರಣೆ ಹೊಂದುವುದರ ಬಗ್ಗೆ ದಿನದ 24 ಗಂಟೆ ಚಿಂತಿ ಮಾಡುತ್ತಾರೆ. ಹಾಗಾಗಿ ಫಿಟ್ನೆಸ್ ಟಿಪ್ಸ್ ಗಳನ್ನು ಸದಾ ನೋಡುತ್ತಿರುತ್ತಾರೆ. ಕೂಡ ತೊಂದರೆಗೊಳಗಾಗುತ್ತಾರೆ. ಅಂತಹವರು ಹೆಚ್ಚಾಗಿ ತನ್ನ ಬೊಜ್ಜು ಕಡಿಮೆ ಮಾಡಲು ಸಲಹೆಗಳನ್ನು ಹುಡುಕುತ್ತಾರೆ. ಜೊತೆಗೆ ಫಿಟ್ ಆಗಿರಲು ಏನು ಮಾಡಬೇಕು, ಸುಲಭವಾಗಿ ತನ್ನ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ? ಡಯಟ್ ಮೊದಲಾದವುಗಳ ಬಗ್ಗೆ ಹೊಸ ಹೊಸ ವಿಷಯಗಳನ್ನು ಸರ್ಚ್ ಮಾಡುವುದರಲ್ಲಿ ನಿರತರಾಗಿರುತ್ತಾರೆ.

ನಮ್ಮಲ್ಲಿ ಉದ್ದ ಕೂದಲು, ಸಣ್ಣ ಕೂದಲು ಹೀಗೆ ಬೇರೆ ಬೇರೆ ರೀತಿಯ ಕೂದಲಿನ ವಿನ್ಯಾಸದ ಹುಡುಗಿಯರಿದ್ದಾರೆ. ಎಲ್ಲರೂ ತಮಗೆ ಬೇಕಾದ ಹೇರ್ ಸ್ಟೈಲ್, ಕೂದಲಿನ ಸಮಸ್ಯೆ, ಬಿಳೆ ಕೂದಲಿನ ನಿವಾರಣೆ ಹೀಗೆ ಕೂದಲಿಗೆ ಸಂಬಂಧಿಸಿದ ವಿಷಯಗಳನ್ನು ಗೂಗಲ್ ನಲ್ಲಿ ಕಲೆಹಾಕುತ್ತಿರುತ್ತಾರೆ. ಹಾಗೆಯೇ ಲೈಂಗಿಕ ಜೀವನ, ಖಿನ್ನತೆಯ ವಿಚಾರಗಳು, ಡಿಪ್ರೆಶನ್ ನಿವಾರಣೆ, ಅದಕ್ಕೆ ಔಷಧ ಇಂಥ ಸಮಸ್ಯೆಗಳಿಗೂ ಪರಿಹಾರಾರ್ಥವಾಗಿ ಗೂಗಲ್ ಮಾಡುವ ಮಹಿಳೆಯರಿದ್ದಾರೆ. ಈಗ ಹೇಳಿ ನಿಮ್ಮದು ಯಾವ ಕ್ಯಾಟೆಗರಿ!

Comments (0)
Add Comment