ಬಿಗ್ ನ್ಯೂಸ್: ಚೀನೀ ಮೊಬೈಲ್ ಕಂಪನಿಗಳಿಗೆ ಮರ್ಮಾಘಾತ. ಅತಿ ಕಡಿಮೆ ಬೆಳೆಗೆ 5ಜಿ ಬಿಡುಗಡೆಗೆ ಮುಂದಾದ ಅಂಬಾನಿ. ವಿಶೇಷತೆ ಏನು ಗೊತ್ತೇ??

AMP Ads

ನಮಸ್ಕಾರ ಸ್ನೇಹಿತರೇ ಭಾರತೀಯ ಟೆಲಿಕಾಂನಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹಿಡಿದಿಟ್ಟುಕೊಂಡಿರುವ ದೈತ್ಯ ಜಿಯೋ ಇದುವರೆಗೆ ಸಾಕಷ್ಟು ಪ್ಲಾನ್ ಗಳನ್ನು ಪರಿಚಯಿಸುತ್ತಾ ಗ್ರಾಹಕರ ಬೇಡಿಕೆಯನ್ನು ಇಡೇರಿಸುತ್ತಿದೆ. ಅಕ್ಟೋಬರ್ 2021 ರಲ್ಲಿ ಜಿಯೋಫೋನ್ ನೆಕ್ಸ್ಟ್ ಅನ್ನು ಪ್ರಾರಂಭಿಸಿತು. ಅದಾದ ಬಳಿಕ ಜಿಯೋ 5ಜಿ ಮಾರುಕಟ್ಟೆಗೆ ಬರುತ್ತೆ ಬರುತ್ತೆ ಅಂತ ವದಂತಿ ಹಬ್ಬಿದ್ದೇ ಆಯ್ತು. ಆದರೆ ಅದು ಬರಲಿಲ್ಲ. ಆದರೆ ಜಿಯೋ 5ಜಿ ಈ ವರ್ಷ ಬರುವ ಎಲ್ಲಾ ನಿರೀಕ್ಷೆಗಳಿವೆ.

ಜಿಯೋ ಇನ್ನೂ 5G ನೆಟ್‌ವರ್ಕ್ ಅನ್ನು ಭಾರತೀಯ ಮಾರುಕಟ್ಟೆಗೆ ತರಲಿಲ್ಲ. ಆದರೆ ಈ ವರ್ಷ ಜಿಯೋ 5ಜಿ ನೆಟ್ ವರ್ಕ್ ಮಾರುಕಟ್ಟೆಗೆ ತರಲು ಪ್ರಯತ್ನಿಸುತ್ತಿದ್ದು, ದೇಶದ ಕೆಲವು ನಗರಗಳಿಗೆ 5G ಕವರೇಜ್ ಯೋಜನೆಗಳನ್ನು ಈಗಾಗಲೇ ಪೂರ್ಣಗೊಳಿಸಿ ಯಶಸ್ವಿಯಾಗಿದೆ. ಹಾಗಾಗಿ ಈ ವರ್ಷ ಜಿಯೋಫೋನ್ 5ಜಿ ಅನ್ನು ಪರಿಚಯಿಸಬಹುದು ಎಂಬ ನಿರೀಕ್ಷೆಯಿದೆ.

AMP Ad3

ಇನ್ನು ಜಿಯೋ ಫೋನ್ ವೈಶಿಷ್ಯತೆಗಳನ್ನು ನೋಡುವುದಾದರೆ, ಜಿಯೋಪೋನ್ 5ಜಿ ಹೆಚ್ ಡಿ+ (1600 x 720 ಪಿಕ್ಸೆಲ್‌ಗಳು) ರೆಸಲ್ಯೂಶನ್‌ ಜೊತೆಗೆ 6.5- ಇಂಚಿನ ಎಲ್ ಇ ಡಿ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಇದ್ದು 13ಎಂ ಪಿ ಕ್ಯಾಮರ ಇದಾಗಿದೆ. 60fps ನಲ್ಲಿ 1080ಪಿ ವೀಡಿಯೊಗಳನ್ನು ಮತ್ತು 120fps ನಲ್ಲಿ 720ಪಿ ಸ್ಲೋ-ಮೋ ವೀಡಿಯೊಗಳನ್ನು ಶೂಟ್ ಮಾಡಬಹುದು. ಸೆಕೆಂಡರಿ ಲೆನ್ಸ್ 2ಎಂ ಪಿ ಮ್ಯಾಕ್ರೋ ಸೆನ್ಸರ್ ಇದೆ. ಇನ್ನು ಇದು 8ಎಂಪಿ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ.

ಜಿಯೋಪೋನ್ 5ಜಿ ಫೋನ್ ಚಿಪ್‌ಸೆಟ್‌ನಿಂದ 4GB ರಾಮ್ ಮತ್ತು 32ಜಿಬಿ ಇಂಟರ್ನಲ್ ಸ್ಟೋರೆಜ್ ಇದರಲ್ಲಿದೆ. ಅಷ್ಟೇ ಅಲ್ಲ, 5,000ಎಂಎಹೆಚ್ ಬ್ಯಾಟರಿಯನ್ನು ಹೊಂದಿದೆ. 18W ವೇಗದ ಚಾರ್ಜಿಂಗ್ ನ್ನು ಬೆಂಬಲಿಸುತ್ತದೆ. ಜೊತೆಗೆ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಕೂಡ ಹೊಂದಿರುತ್ತದೆ. ಅತ್ಯಂತ ಕಡಿಮೆ ಬೆಲೆಗೆ ಫೋನ್ ಪರಿಚಯಿಸಿರುವ ಏಕೈಕ ಟೆಲಿಕಾಂ ಕಂಪನಿ ಜಿಯೋ. ಈ ಮೂಲಕ ಬಡ ಜನರನ್ನೂ ಕೂಡ ತನ್ನ ಗ್ರಾಹಕರನ್ನಾಗಿಸಿಕೊಂಡಿದೆ ಇದೀಗ 5ಜಿ ನೆಟ್ವರ್ಕ್ ಅಡಿಯಲ್ಲಿ ಸ್ಮಾರ್ಟ್ಫೋನ್ ಪರಿಚಯಿಸಲು ಮುಂದಾಗಿರುವ ಜಿಯೋ, ಇದರಲ್ಲಿ ಯಶಸ್ವಿಯಾದರೆ ಭಾರತದ ಅತೀ ದೊಡ್ಡ ಟೆಲಿಕಾಂ ಕಂಪನಿ ಎನಿಸುವುದರಲ್ಲಿ ಸಂಶಯವಿಲ್ಲ.

Comments (0)
Add Comment