ದಯವಿಟ್ಟು ಇದನೆಲ್ಲ ಇಲ್ಲಿಗೆ ನಿಲ್ಲಿಸಿ, ಮತ್ತೊಮ್ಮೆ ಮಾತನಾಡಿದ ಅಶ್ವಿನಿ ರವರು ಮನವಿ ಮಾಡಿಕೊಂಡಿದ್ದೆ ಬೇರೆ. ದಯವಿಟ್ಟು ಸಾಕು ನಿಲ್ಲಿಸಿ.

AMP Ads

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಅಗಲಿ ಈಗಾಗಲೇ ಹಲವಾರು ದಿನಗಳು ಕಳೆದುಹೋಗಿವೆ. ಈಗಾಗಲೇ ಪುನೀತ್ ರಾಜಕುಮಾರ್ ರವರ 11ನೇ ದಿನದ ಕಾರ್ಯಕ್ರಮವನ್ನು ಮನೆಯಲ್ಲಿ ಹಾಗೂ ಸಮಾಧಿಯಲ್ಲಿ ಮಾಡಲಾಗಿದ್ದು 12ನೇ ದಿನದ ಕಾರ್ಯಕ್ರಮವನ್ನು ಅನ್ನಸಂತರ್ಪಣೆ ಮೂಲಕ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ನಡೆಸಿದ್ದಾರೆ.

ಇನ್ನು ಮರಣಾನಂತರ ಪುನೀತ್ ರಾಜಕುಮಾರ್ ಅವರು ತಮ್ಮ ನೇತ್ರವನ್ನು ದಾನ ಮಾಡಿದರ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಕೂಡ ಸಾವಿರಾರು ಸಂಖ್ಯೆಯಲ್ಲಿ ಈಗಾಗಲೇ ನೇತ್ರದಾನವನ್ನು ಮಾಡಲು ಅರ್ಜಿಗಳಿಗೆ ಸಹಿಹಾಕಿದ್ದಾರೆ. ಮೊನ್ನೆಯಷ್ಟೇ ಪುನೀತ್ ರಾಜಕುಮಾರ್ ರವರ ಪುನೀತ್ ನಮನ ಕಾರ್ಯಕ್ರಮವನ್ನು ಸಾವಿರಾರು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೆರವೇರಿಸಿದೆ.

AMP Ad3

ಇನ್ನು ಈ ಕುರಿತಂತೆ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿಯವರ ಪುನೀತ್ ಅವರನ್ನು ಕಳೆದುಕೊಂಡಿರುವ ದುಃಖ ನಮ್ಮಲ್ಲಿದ್ದರೂ ಕೂಡ ಅವರನ್ನು ಗೌರವಯುತವಾಗಿ ಕಳಿಸಿ ಕೊಡಬೇಕಾದ ಜವಾಬ್ದಾರಿ ಕೂಡ ನಮ್ಮಲ್ಲಿತ್ತು ಇದಕ್ಕೆ ಸಹಕರಿಸಿದ ರಾಜ್ಯ ಪೊಲೀಸ್ ಇಲಾಖೆ ಹಾಗೂ ಗೃಹ ಮಂತ್ರಿಗಳಿಗೆ ನಮ್ಮ ಧನ್ಯವಾದಗಳು ಎಂಬುದಾಗಿ ಕೂಡ ಪತ್ರ ಬರೆದಿದ್ದರು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಬರುತ್ತಿದ್ದ ಎಲ್ಲಾ ಜನ ಸೇವಾಕಾರ್ಯಗಳನ್ನು ತಾನೆ ಮುಂದುವರಿಸುವುದಾಗಿ ಪುನೀತ್ ರಾಜಕುಮಾರ್ ಅಶ್ವಿನಿ ಅವರು ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಲ್ಲಿ ಇದನ್ನು ಇಲ್ಲಿಗೆ ನಿಲ್ಲಿಸಿ ನಾವು ಸಾಕಷ್ಟು ನೊಂದಿದ್ದೇವೆ ಎಂಬುದಾಗಿ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿ ಅವರು ಹೇಳಿದ್ದಾರೆ. ಹಾಗಿದ್ದರೆ ಅವರು ಈ ರೀತಿಯಾಗಿ ಹೇಳಲು ಕಾರಣವೇನು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖದಲ್ಲಿ ಈಗಾಗಲೇ ರಾಜ್ಯಾದ್ಯಂತ ಅವರ ಅಭಿಮಾನಿಗಳು ಇದ್ದಾರೆ.

AMP Ads4

ಈಗಾಗಲೇ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖದಲ್ಲಿ 14ಕ್ಕೂ ಹೆಚ್ಚು ಅಭಿಮಾನಿಗಳು ತಮ್ಮ ಜೀವನವನ್ನು ಕಳೆದುಕೊಂಡು ಪುನೀತ್ ರಾಜಕುಮಾರ್ ಅವರ ಹಿಂದೆಯೇ ಸ್ವರ್ಗದೆಡೆಗೆ ಹೋಗಿದ್ದಾರೆ. ಇದಕ್ಕಾಗಿ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿ ಅವರು ಈಗಾಗಲೇ ಪುನೀತ್ ಅವರನ್ನು ಕಳೆದುಕೊಂಡಿರುವ ದುಃಖದಲ್ಲಿ ನಾವಿದ್ದೇವೆ ನೀವು ಕೂಡ ಹೀಗೆ ಮಾಡಿದರೆ ನಮಗೆ ಇನ್ನಷ್ಟು ದುಃಖ ಹೆಚ್ಚಾಗುತ್ತದೆ,

ಹೀಗೆ ಮಾಡಬೇಡಿ ಎಂಬುದಾಗಿ ಕುಟುಂಬದ ಪರವಾಗಿ ಹೇಳಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಹೇಳಿರುವ ಮಾತು ನೂರಕ್ಕೆ 100% ನಿಜ. ಅಭಿಮಾನಿಗಳಾಗಿ ಅವರು ಹಾಕಿಕೊಟ್ಟಿರುವ ಒಳ್ಳೆಯ ಮಾರ್ಗದಲ್ಲಿ ಅವರಂತೆ ಜೀವಿಸಿ ಅವರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕೆ ಹೊರತು ತಮ್ಮ ಜೀವನವನ್ನು ಕಳೆದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments (0)
Add Comment