ಸುದೀಪ್ ರವರ ಚಿತ್ರ ಕೋತಿಗೊಬ್ಬ 3 ತಂಡದ ಸಮಸ್ಯೆಗೆ ಗೃಹ ಸಚಿವರ ಎಂಟ್ರಿ, ಈ ಬಾರಿ ಸ್ವಲ್ಪ ಯಾಮಾರಿದರೂ ಇದೇ ಮಾರಿಹಬ್ಬ. ಏನು ಗೊತ್ತೇ??

AMP Ads

ನಮಸ್ಕಾರ ಸ್ನೇಹಿತರೇ ಒಂದು ಚಲನಚಿತ್ರ ನಿರ್ಮಿಸುವುದು ಎಂದರೆ ಅದಕ್ಕೆ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಲಾಗುತ್ತದೆ. ಆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಜೊತೆಗೆ ಹಾಕಿದ ಬಂಡವಾಳವೂ ವಾಪಸ್ ಬರಬೇಕು ಎಮ್ತಲೇ ಸರಿಯಾದ ಸಮಯ ನೋಡಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಪೈರೆಸಿ ಎಂಬ ಭೂತ ನಿರ್ಮಾಪಕರ ಅಥವಾ ಚಿತ್ರತಂಡದ ಈ ಎಲ್ಲಾ ಕನಸನ್ನು ನುಚ್ಚುನೂರಾಗಿಸುತ್ತದೆ.

ಹೌದು ಸ್ನೇಹಿತರೆ, ಮುಂದಿನ ತಿಂಗಳು ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ’ಕೋಟಿಗೊಬ್ಬ 3 ತೆರೆ ಕಾಣುತ್ತಿದೆ. ಈ ಸಂತೋಷದ ಸುದ್ದಿಯನ್ನು ಕೊಟ್ಟ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕರಿಗೆ ಇನ್ನೊಂದು ಸಂಕಷ್ಟ ಎದುರಾಗಿತ್ತು. ಕೆಲವು ಕಿಡಿಗೇಡಿಗಳು ಟೆಲಿಗ್ರಾಂ ನಲ್ಲಿ ಮೆಸೆಜ್ ಮಾಡಿ ತಾವು ಈ ಚಿತ್ರವನ್ನು ಪೈರೆಸಿ ಮಾಡುವುದಾಗಿ ನಿರ್ಮಾಪಕ ಸೂರಪ್ಪ ಬಾಬು ಅವರಿಅನ್ನು ಬೆದರಿಸಿದ್ದರು. ಇದರಿಂದ ಕೂಡಲೇ ಎಚ್ಚೆತ್ತುಕೊಂಡಿದ್ದ ನಿರ್ಮಾಪಕರು ಗೃಹ ಸಚಿವರಿಗೆ ಪತ್ರಬರೆದು ದೂರು ಸಲ್ಲಿಸಿದ್ದರು.

AMP Ad3

ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಆಗರ ಜ್ಞಾನೇಂದ್ರ ಅವರು ಪೈರೆಸಿಯನ್ನು ತಡೆಯಲು ಪೋಲೀಸ್ ಇಲಾಖೆಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಇನ್ನು ಕಿಚ್ಚ ಚುದೀಪ್ ಕೂಡ ಪೈರೆಸಿ ತಡೆಗೆ ಬೇಕಾದ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಪೈರೆಸಿ ಮೆಸೆಜ್ ಗಳು ಹರಿದಾಡುತ್ತಿವೆ, ಕೋಟಿಗೊಬ್ಬ 3 ವೀಕ್ಷಿಸಲು ಇಲ್ಲಿ ಸೇರಿಕೊಳ್ಳಿ ಎದು ಕೆಲವು ಗ್ರೂಪ್ ಮೆಸೆಜ್ ಗಳೂ ಬರುತ್ತಿವೆ. ಈ ಸಂಬಂಧ ಸೈಬರ್ ಕ್ರೈಮ್ ಡಿಪಾರ್ಟ್ಮೆಂಟ್ ಗೂ ಕೂಡ ಮಾಹಿತಿ ನೀಡಲಾಗಿದೆ. ಜೊತೆಗೆ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಈ ಬಗ್ಗೆ ಕ್ರಮ‌ ಕೈಗೊಳ್ಳುವಂತೆ ಆಯುಕ್ತರಿಂದ ಶಿಫಾರಸ್ಸು ಮಾಡಲಾಗಿದೆ ಎಂದು ಕೂಡ ಸೂರಪ್ಪ ಬಾಬು ತಿಳಿಸಿದ್ದಾರೆ. ಒಟ್ಟಿನಲ್ಲಿ ಎಲ್ಲಾ ಮುಂಜಾಗ್ರತೆಯ ನಡುವೆಯೂ ಪೈರೆಸಿ ಭೀತಿ ಮಾತ್ರ ಸ್ನಿಮಾಗಳಿಗೆ ತಪ್ಪಿದ್ದಲ್ಲ.

Comments (0)
Add Comment