ಕಡಲಿಕಲ್ಲನ್ನು ನಾವು ಹೇಳಿದ ರೀತಿ ಸೇವಿಸಿ ನೋಡಿ, ಮಧುಮೇಹದಿಂದ ಹಿಡಿದು ಸಾಕಷ್ಟು ಲಾಭ, ಹೇಗೆ ಗೊತ್ತೇ??

AMP Ads

ನಮಸ್ಕಾರ ಸ್ನೇಹಿತರೇ ಕಡಲೆ ಕಾಳು ಗಣಪನಿಗೆ ಪ್ರಿಯ. ಹೆಚ್ಚಾಗಿ ದೇವರ ನೈವೇದ್ಯಕ್ಕೆ ಇಡುವ ಈ ಕಡಲೆ ಕಾಳು ಆರೋಗ್ಯಕ್ಕೂ ಕೂಡ ಅಷ್ಟೇ ಒಳ್ಳೆಯದು ಎಂಬುದು ನಿಮಗೆ ಗೊತ್ತೆ? ಕಡಲೆ ಕಾಳಿನಲ್ಲಿ ಫೈಬರ್ ಪ್ರೋಟಿನ್, ವಿಟಮಿನ್ ಮೊದಲಾದ ಜೀವಸತ್ವಗಳು ಸಾಕಷ್ಟು ಪ್ರಮಾಣದಲ್ಲಿರುತ್ತವೆ. ಹಾಗಾಗಿ ಕಡಲೆ ಕಾಳನ್ನು ದಿನವೂ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.

AMP Ad3

ಕಡಲೆ ಕಾಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂಥ ಒಂದು ಆಹಾರ ವಸ್ತು. ದಿನವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಡಲೆ ಕಾಳು ನೆನೆಸಿದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ರೂಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಹಲವಾರು ರೋಗಗಳಿಂದ ದೂರವಿರಬಹುದು. ಅಷ್ಟೇ ಅಲ್ಲ, ಕಡಲೆ ಕಾಳು ನೆನೆಸಿದ ನೀರನ್ನು ಕುಡಿಯುವುದು ಮಧುಮೇಹ ನಿವಾರಣೆಗೆ ತುಂಬಾನೇ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಗ್ಗಿಸಲು ಸಹಾಯಕವಾಗಿದೆ.

ಸ್ನೇಹಿತರೆ, ಕಡಲೆ ಕಾಳು ನೆನೆಸಿದ ನೀರನು ಕುಡಿಯುವುದರಿಂದ ದೇಹದಲ್ಲಿ ಆಯಾಸ ಕಡಿಮೆಯಾಗಿ ದೇಹ ಶಕ್ತಿಯುತ ವಾಗುತ್ತದೆ. ಇದು ಹೆಚ್ಚು ಹಸಿವಾಗದಂತೆ ತಡೆಯುವುದರಿಂದ ಹೆಚ್ಚಿನ ಆಹಾರ ಸೇವಿಸುವ ಅಗತ್ಯವಿರುವುದಿಲ್ಲ ಹಾಗಾಗಿ ದೇಹದ ತೂಕ ಇಳಿಕೆಗೂ ಕೂಡ ಇದು ಸಹಾಯಕವಾಗುತ್ತದೆ. ಕಡಲೆ ಕಾಳು ನೆನೆಸಿದ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೀಗಾಗಿ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ. ಗ್ರಾಸ್ಟ್ರಿಕ್ ಸಮಸ್ಯೆಯೂ ಕೂಡ ನಿವಾರಣೆಯಾಗುತ್ತದೆ.

ಕಡಲೆ ಕಾಳು ನೆನೆಸಿದ ನೀರು, ಚರ್ಮದ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ. ಕಡಲೆ ಕಾಳು ತಿನ್ನುವುದು ಕೆಲವರಿಗೆ ಗ್ಯಾಸ್ ಆದಂತೆ ಅನ್ನಿಸಬಹುದು. ಹಾಗಾಗಿ ಕಡಲೆ ಕಾಳನ್ನು ನೆನೆಸಿಟ್ಟು ಅದನ್ನು ಬೇಯಿಸಿ ಜೀರಿಗೆ, ಉಪ್ಪು ಹಾಗೂ ನಿಂಬೆರಸ ಹಾಕಿಕೊಂಡು ಸೇವಿಸಬಹುದು. ಇದು ನಾಲಿಗೆಗೆ ರುಚಿ ಹಾಗೆಯೇ ದೇಹಕ್ಕೆ ಆರೋಗ್ಯವನ್ನು ಒದಗಿಸುತ್ತದೆ.

Comments (0)
Add Comment