ಡಾರ್ಲಿಂಗ್ ಕೃಷ್ಣರವರ ಮುಂದಿನ ಚಿತ್ರಕ್ಕೆ ಆಯ್ಕೆಯಾಗಿರುವ ದಕ್ಷಿಣ ಭಾರತದ ಟಾಪ್ ನಟಿ ಯಾರು ಗೊತ್ತಾ??

AMP Ads

ನಮಸ್ಕಾರ ಸ್ನೇಹಿತರೇ ಡಾರ್ಲಿಂಗ್ ಕೃಷ್ಣರವರು ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಕಿರುತೆರೆಯಿಂದ ಜನಪ್ರಿಯತೆಯನ್ನು ಪಡೆದು ಕೊಂಡ ಡಾರ್ಲಿಂಗ್ ಕೃಷ್ಣ ರವರು ಹಲವಾರು ವರ್ಷಗಳಿಂದ ವಿವಿಧ ಪಾತ್ರಗಳಲ್ಲಿ ನಟನೆ ಮಾಡಿದರು ಕೂಡ ಕೇವಲ ಮುಖ ಪರಿಚಯವಷ್ಟೇ ಜನರಿಗೆ ಆಗಿತ್ತು. ಹೆಚ್ಚಿನ ಜನಪ್ರಿಯತೆಯನ್ನು ಯಾವುದೇ ಪಾತ್ರಗಳು ಇವರಿಗೆ ನೀಡಿರಲಿಲ್ಲ ಎಂದರೆ ತಪ್ಪಾಗಲಾರದು.

ಇಂತಹ ಸಂದರ್ಭದಲ್ಲಿ ಲವ್ ಮಾಕ್ಟೇಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ದಾಖಲೆ ರೀತಿಯಲ್ಲಿ ಯಶಸ್ಸು ಗಳಿಸಿ ಡಾರ್ಲಿಂಗ್ ಕೃಷ್ಣರವರು ತಮ್ಮ ಜನಪ್ರಿಯತೆಯನ್ನು ಮತ್ತೊಂದು ಲೆವೆಲ್ಲಿಗೆ ತೆಗೆದುಕೊಂಡು ಹೋಗಿ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸೃಷ್ಟಿಸಿ ಕೊಳ್ಳುವುದರಲ್ಲಿ ಯಶಸ್ವಿಯಾದರು. ಅದೇ ಕಾರಣಕ್ಕಾಗಿ ಮುಂದಿನ ಡಾರ್ಲಿಂಗ್ ಕೃಷ್ಣರವರ ಸಿನಿಮಾ ಎಂದರೆ ಪ್ರೇಕ್ಷಕರು ಒಂದು ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ.

AMP Ad3

ಇಷ್ಟೆಲ್ಲ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಡಾರ್ಲಿಂಗ್ ಕೃಷ್ಣರವರ ಮುಂದಿನ ಸಿನಿಮಾ ಶ್ರೀಕೃಷ್ಣ ಅಟ್ ಜಿಮೈಲ್ ಡಾಟ್ ಕಂ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ, ಈ ಚಿತ್ರದ ನಾಯಕಿ ಯಾರು ಎಂಬುದರ ಕುರಿತು ನಾವು ಮಾತನಾಡುವುದಾದರೇ, ಕನ್ನಡ, ತೆಲುಗು, ತಮಿಳು, ಹಾಗೂ ತೆಲುಗು ಚಿತ್ರರಂಗದಲ್ಲಿ ಹಲವಾರು ಸಿನೆಮಾಗಳಲ್ಲಿ ನಟಿಸುವ ಮೂಲಕ ಲಕ್ಷಾಂತರ ಜನರ ಅಭಿಮಾನಿಗಳನ್ನು ಗಳಿಸಿರುವ ಕ್ಯೂಟ್ ನಾಯಕಿ ನಟಿ ಭಾವನಾ ಅವರು ಈ ಚಿತ್ರದಲ್ಲಿ ಕೃಷ್ಣ ಅವರ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

Comments (0)
Add Comment