ಲಕ್ಷ್ಮಿ ಬಾರಮ್ಮ ಗೊಂಬೆ ನೇಹಾ ಗೌಡ ರವರ ಅಕ್ಕ ಕೂಡ ಕನ್ನಡ ಖ್ಯಾತ ನಟಿ ಯಾರು ಗೊತ್ತೇ??

AMP Ads

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ನಟಿಸಿದ್ದ ನೇಹಾ ಗೌಡ ರವರು ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಟಿಯರಲ್ಲಿ ನೇಹಾ ಗೌಡ ರವರು ಕೂಡ ಒಬ್ಬರು. ಲಕ್ಷ್ಮೀ ಬಾರಮ್ಮ ಧಾರವಾಹಿ ಗೊಂಬೆ ಪಾತ್ರದಲ್ಲಿ ನಟನೆ ಮಾಡುವ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಜನಪ್ರಿಯತೆಯನ್ನು ಪಡೆದುಕೊಂಡರು ಎಂಬುವುದರಲ್ಲಿ ಎರಡು ಮಾತಿಲ್ಲ.

ಹೀಗೆ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡ ಬಳಿಕ ಅದ್ಯಾಕೋ ತಿಳಿದಿಲ್ಲ ಇವರು ಹೆಚ್ಚಿನ ಧಾರವಾಹಿಗಳಲ್ಲಿ ಮತ್ತೆ ನಟನೆ ಮಾಡಲು ಹೋಗಲಿಲ್ಲ, ಅಷ್ಟೇ ಅಲ್ಲದೆ ಅಲ್ಲಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು ಕೂಡ ಬಹುತೇಕ ಬಾರಿ ಕಿರುತೆರೆಯಿಂದ ದೂರ ಉಳಿದಿದ್ದಾರೆ. ಅದರಲ್ಲಿಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಬಹುತೇಕ ಕಿರುತೆರೆಯಿಂದ ದೂರವುಳಿದಿರುವ ನೇಹಾ ಗೌಡರವರು ಮತ್ತೊಮ್ಮೆ ಕಿರುತೆರೆಗೆ ಬರಲಿ ಎಂಬುದು ಅಭಿಮಾನಿಗಳ ಆಶಯ.

AMP Ad3

ಇನ್ನು ನೇಹ ಗೌಡರವರ ಅಕ್ಕ ಯಾರು ಎಂಬುದರ ಕುರಿತು ನಾವು ಮಾತನಾಡುವುದಾದರೆ, ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಸರಿ ಸುಮಾರು 15 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿರುವ ಹಾಗೂ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿರುವ ಸೋನು ಗೌಡ ರವರು ನೇಹಾ ಗೌಡ ರವರ ಅಕ್ಕ. ಕಳೆದ 12 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ವಿವಿಧ ಸಿನಿಮಾಗಳಲ್ಲಿ ನಟನೆ ಮಾಡಿರುವ ಸೋನು ಗೌಡ ರವರು ಹಲವಾರು ಯಶಸ್ವಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Comments (0)
Add Comment