ಏಳು ವರ್ಷದ ಹಿಂದೆ ನಿರ್ಮಿಸಲಾದ ಮಹಾಭಾರತ ಧಾರಾವಾಹಿಯ ಬಜೆಟ್ ಎಷ್ಟು ಕೋಟಿ ಗೊತ್ತಾ??

AMP Ads

ನಮಸ್ಕಾರ ಸ್ನೇಹಿತರೇ ಕಳೆದ ವರ್ಷ ಮಹಾಭಾರತ ಧಾರವಾಹಿಯು ಬೇರೆ ಭಾಷೆಯಿಂದ ಕನ್ನಡ ಭಾಷೆಗೆ ಡಬ್ ಆಗಿತ್ತು. ಡಬ್ಬಿಂಗ್ ಧಾರವಾಹಿಗಳನ್ನು ಯಾರು ನೋಡುವುದಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಕನ್ನಡದ ಜನತೆಯು ಕೆಲವೊಂದು ಧಾರವಾಹಿಗಳನ್ನು ಹೆಚ್ಚಿನ ಟಿಆರ್ಪಿ ಲೆಕ್ಕದಲ್ಲಿ ನೋಡಿದ್ದರು. ಈ ಸಂದರ್ಭದಲ್ಲಿ ಕೆಲವೊಂದು ಧಾರವಾಹಿಗಳು ಜನರ ಅಚ್ಚು ಮೆಚ್ಚಿನ ಧಾರವಾಹಿಗಳಾಗಿ ಬಿಟ್ಟವು. ಅದರಲ್ಲಿಯೂ ರಾಧಾಕೃಷ್ಣ ಹಾಗೂ ಮಹಾಭಾರತ ಧಾರವಾಹಿಗಳು ಇಂದಿಗೂ ಕೂಡ ಜನರ ಫೇವರೆಟ್ ಧಾರವಾಹಿಗಳಲ್ಲಿ ಸ್ಥಾನ ಪಡೆದುಕೊಂಡಿದೆ.

ಹೀಗೆ ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆಗಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಮಹಾಭಾರತ ಧಾರಾವಾಹಿಯ ಕುರಿತು ಇಂದು ಕೆಲವೊಂದು ಆಸಕ್ತಿಕರ ಮಾಹಿತಿಯನ್ನು ತಿಳಿಸುತ್ತೇವೆ ಕೇಳಿ. ಸ್ನೇಹಿತರೆ ಇತ್ತೀಚೆಗೆ ನೀವು ಸಿನಿಮಾ ಟ್ರೆಂಡ್ ಗಳನ್ನು ನೋಡಿರಬಹುದು, ಬಹುತೇಕ ಸ್ಟಾರ್ ನಟರು ನಾವು 50 ಕೋಟಿ ಬಜೆಟ್ ಹಾಕಿ ನಿರ್ಮಾಣ ಮಾಡುತ್ತಿದ್ದೇವೆ ನಾವು ನೂರು ಕೋಟಿ ಬಜೆಟ್ ಹಾಕಿ ನಿರ್ಮಾಣ ಮಾಡುತ್ತಿದ್ದೇವೆ ಎಂದು ಘೋಷಣೆ ಮಾಡುತ್ತಿರುತ್ತಾರೆ. ಕನ್ನಡದ ಚರಿತ್ರೆಯಲ್ಲಿ ಉತ್ತಮ ಚಿತ್ರಗಳಲ್ಲಿ ಒಂದಾಗಿರುವ ಕೆಜಿಎಫ್ ಚಿತ್ರದ ಬಜೆಟ್ 80 ಕೋಟಿ ಆಗಿದೆ, ಹೀಗೆ ವಿವಿಧ ಸಿನಿಮಾಗಳು ಹಲವಾರು ಕೋಟಿ ಬಜೆಟ್ ಗಳಲ್ಲಿ ನಿರ್ಮಾಣವಾಗುತ್ತವೆ.

AMP Ad3

ಆದರೆ ಕಳೆದ ಎರಡು ವರ್ಷದ ಹಿಂದೆ ನಿರ್ಮಾಣವಾದ ಮಹಾಭಾರತ ಧಾರವಾಹಿಯ ಕೂಡ ನೂರಾರು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿತ್ತು ಎಂದರೆ ನೀವು ನಂಬಲೇಬೇಕು. ಹೌದು ಸ್ನೇಹಿತರೇ 2013ರಲ್ಲಿ ನಿರ್ಮಾಣವಾದ ಮಹಾಭಾರತ ಧಾರವಾಹಿಯನ್ನು ತಿವಾರಿ ಕುಟುಂಬ ನಿರ್ಮಾಣ ಮಾಡಲು ನಿರ್ಧಾರ ಮಾಡಿ ಸಿನಿಮಾ ಶೈಲಿಯ ನಿರೂಪಣೆ, ಸಿನಿಮಾ ರೀತಿಯಲ್ಲಿ ವಿ ಎಫ್ ಎಕ್ಸ್ ಗಳು ಗ್ರಾಫಿಕ್ಸ್ ಸೇರಿದಂತೆ ಯಾವುದಕ್ಕೂ ಹಿಂದೆ ಮುಂದೆ ನೋಡದೇ ಕೋಟಿ ಕೋಟಿ ಹಾಕಿ ನಿರ್ಮಾಣ ಮಾಡಿದ್ದಾರೆ, ಹೀಗೆ ಒಟ್ಟಾರೆಯಾಗಿ 120 ಕೋಟಿಗೂ ಹೆಚ್ಚು ಹಣವನ್ನು ಧಾರವಾಹಿ ನಿರ್ಮಾಣ ಮಾಡಲು ಖರ್ಚಾಗಿತ್ತು.

Comments (0)
Add Comment