ಕಾಫಿ-ಟೀ ಗೆ ಸಕ್ಕರೆ ಹಾಕುತ್ತಿದ್ದಿರಾ?? ಸಕ್ಕರೆ ಬದಲು ಬೆಲ್ಲ ಹಾಕಿದರೇ ಏನಾಗುತ್ತದೆ ಗೊತ್ತಾ??

AMP Ads

ಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಪ್ರತಿಯೊಂದು ಮನೆಗಳಲ್ಲಿ ಕಾಫಿ ಅಥವಾ ಟೀ ಮಾಡುವಾಗ ಸಕ್ಕರೆಯನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ನಮ್ಮ ಹಿರಿಯರು ಟೀ ಅಥವಾ ಕಾಫಿ ಮಾಡುವಾಗ ಸಕ್ಕರೆಯ ಬದಲಾಗಿ ಬೆಲ್ಲವನ್ನು ಬಳಸುತ್ತಿದ್ದರು. ಅಲ್ಲದೆ, ಪ್ರತಿಯೊಂದು ಅಡುಗೆಯಲ್ಲಿಯೂ ಸಹ ಸ್ವಲ್ಪವಾದರೂ ಬೆಲ್ಲವನ್ನು ಬಳಸುತ್ತಿದ್ದರು.ಇದರ ಹಿಂದೆ ಒಂದು ವೈಜ್ಞಾನಿಕ ಕಾರಣ ಇದೆ. ಈಗಿನ ಒಂದು ಆಹಾರ ಪದ್ದತಿಯಲ್ಲಿ ಹೆಚ್ಚಾಗಿ ಬೆಲ್ಲವನ್ನು ಬಳಸುವುದಿಲ್ಲ.ಇದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಮುಖ್ಯ ಕಾರಣವೆಂದರೆ, ಮಾರುಕಟ್ಟೆಯಲ್ಲಿ ಕಲಬೆರಕೆ ಬೆಲ್ಲ ದೊರೆಯುವುದು. ಇಂದು ನಾವು ಸಕ್ಕರೆ ಬದಲಿಗೆ ಬೆಲ್ಲವನ್ನು ಬಳಸಿದರೆ ಯಾವೆಲ್ಲ ಲಾಭವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಬೆಲ್ಲದಲ್ಲಿ ಅಧಿಕವಾದ ಖನಿಜಾಂಶಗಳು ಹಾಗೂ ಕಬ್ಬಿಣದ ಅಂಶಗಳು ಹೇರಳವಾಗಿವೆ. ಒಂದು ವೇಳೆ ನೀವು ನಿಮ್ಮ ಅಡುಗೆಗಳಲ್ಲಿ ಬೆಲ್ಲವನ್ನು ಬಳಸುವುದಕ್ಕೆ ಶುರು ಮಾಡಿದರೆ, ನಿಮ್ಮ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಇಂದಿಗೂ ಸಹ ಕಂಡುಬರುವುದಿಲ್ಲ ಮತ್ತು ಬೆಲ್ಲದಲ್ಲಿರುವ ಕಬ್ಬಿಣಾಂಶವು ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಗಣನೀಯವಾಗಿ ಏರಿಕೆ ಮಾಡುತ್ತದೆ.

AMP Ad3

ಇನ್ನು ನಿಮಗೆ ಸಾಮಾನ್ಯ ನೆಗಡಿ ಅಥವಾ ಶೀತ ಕಾಣಿಸಿಕೊಂಡರೆ ತಕ್ಷಣ ಚಿಕ್ಕ ಪ್ರಮಾಣದಲ್ಲಿ ಬೆಲ್ಲವನ್ನು ಸೇರಿಸಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಕೆಲವೇ ಕೆಲವು ನಿಮಿಷಗಳಲ್ಲಿ ನಿಮಗೆ ರಿಲೀಫ್ ಆಗುತ್ತದೆ. ಏಕೆಂದರೆ ಬೆಲ್ಲದಲ್ಲಿರುವ ಅಂಶವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ತಕ್ಷಣ ಹೆಚ್ಚು ಮಾಡುವ ಸಾಮರ್ಥ್ಯವನ್ನು ಹೊಂದಿದೆ.ಇನ್ನು ಯಾವಾಗಲೂ ಬೆಲ್ಲವನ್ನು ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಅಲ್ಲದೆ ಮುಖದ ಮೇಲಿನ ನೆರಿಗೆಗಳು ಕಡಿಮೆಯಾಗುತ್ತದೆ ಹಾಗೂ ಮುಖದಲ್ಲಿ ಮೊಡವೆಗಳು ಆಗುವುದು ಕಡಿಮೆಯಾಗುತ್ತದೆ.

ಇನ್ನು ಅಷ್ಟೇ ಅಲ್ಲದೆ ಕಾಫಿ ಅಥವಾ ಟೀ ಸೇವಿಸುವಾಗ ನೀವು ಸಕ್ಕರೆ ಬದಲಿಗೆ ಬೆಲ್ಲವನ್ನು ಉಪಯೋಗಿಸಿದರೆ ನಿಮ್ಮ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಒಂದು ವೇಳೆ ನಿಮಗೆ ಕೂದಲು ಉದುರುವಿಕೆ ಅಥವಾ ಕೂದಲಿನ ಸಮಸ್ಯೆ ಇದ್ದರೆ ನೀವು ಬೆಲ್ಲದ ಜೊತೆಯಲ್ಲಿ ಒಂದು ಲೋಟ ಬಿಸಿ ನೀರು ಕುಡಿಯುವುದರಿಂದ ಈ ಸಮಸ್ಯೆಯು ನಿವಾರಣೆಯಾಗುತ್ತದೆ.

Comments (0)
Add Comment