ನಿಮ್ಮ ಕಷ್ಟವೆಲ್ಲ ಮುಗಿದು, ಅದೃಷ್ಟ ಬದಲಾಗುವ ದಿನ ಬಂದೆ ಬಿಡ್ತು: ಈ ದಿನದಂದು ನಾಲ್ಕು ರಾಶಿಯ ಅದೃಷ್ಟವೇ ಬದಲು. ಯಾರ್ಯಾರಿಗೆ ಗೊತ್ತೇ??

75

Get real time updates directly on you device, subscribe now.

ಸೂರ್ಯನು ಯಶಸ್ಸಿನ ಸಂಕೇತ, ಅದೇ ರೀತಿ ಶುಕ್ರನು ಪ್ರೀತಿ, ಪ್ರೇಮ, ಭೌತಿಕ ಸಂತೋಷದ ಸಂಕೇತ. ಅತ್ಯಂತ ಮಹತ್ವ ಇರುವ ಈ ಎರಡು ಗ್ರಹಗಳು ಈ ತಿಂಗಳಿನಲ್ಲಿ ಸಿಂಹ ರಾಶಿಯನ್ನು ಪ್ರವೇಶ ಮಾಡಲಿದ್ದಾರೆ. ಸಿಂಹ ರಾಶಿಯಲ್ಲಿ ಈ ಎರಡು ಗ್ರಹಗಳ ಸಂಯೋಜನೆ ಆಗುವುದರಿಂದ, 4 ರಾಶಿಗಳಿಗೆ ವಿಶೇಷವಾದ ಫಲವಿದೆ. ಆಗಸ್ಟ್ 17ರಂದು ಸೂರ್ಯನು, ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದು, ಆಗಸ್ಟ್ 31ರಂದು ಶುಕ್ರನು ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರಿಂದಾಗಿ ಸೂರ್ಯ ಮತ್ತು ಶುಕ್ರನ ಸಂಯೋಗ ಉಂಟಾಗಲಿದ್ದು, ಇದರ ಪ್ರಯೋಜನ ಪಡೆಯುವ ನಾಲ್ಕು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಸೂರ್ಯ ಮತ್ತು ಶುಕ್ರನ ಸಂಯೋಗದಿಂದ ಈ ರಾಶಿಯವರಿಗೆ ಲಾಭ ಹೆಚ್ಚಾಗುತ್ತದೆ. ಇವರು ಹೆಚ್ಚಿನ ಯಶಸ್ಸು ಪಡೆಯುತ್ತಾರೆ. ಆದಾಯ ಹೆಚ್ಚಾಗುತ್ತದೆ, ಕುಟುಂಬದಲ್ಲಿ ಸಂತೋಷ ಇರುತ್ತದೆ, ಸೌಕರ್ಯಗಳು ಹೆಚ್ಚಾಗುತ್ತದೆ. ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗುವುದರಿಂದ ಸಂತೋಷ ಬರುತ್ತದೆ.

ಮಿಥುನ ರಾಶಿ :- ಈ ರಾಶಿಯವರ ಕುಟುಂಬದ ಜೀವನ ಚೆನ್ನಾಗಿರುತ್ತದೆ. ಮಾಡುವ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ನಿಮ್ಮ ಆದಾಯ ಹೆಚ್ಚಾಗುತ್ತದೆ, ದಂಪತಿಗಳ ಜೀವನದಲ್ಲಿ ಸಂತೋಷವಾಗಿರುತ್ತದೆ.

ಕರ್ಕಾಟಕ ರಾಶಿ :- ಈ ರಾಶಿಯ ಜನರಿಗೆ ಸೂರ್ಯ ಮತ್ತು ಶುಕ್ರನ ಸಂಯೋಗದಿಂದ ಲಾಭ ಸಿಗುತ್ತದೆ. ಹೆಚ್ಚಿನ ಹಣ ಪಡೆಯುತ್ತಾರೆ. ಉದ್ಯಮಿಗಳಿಗೆ ಲಾಭ ಹೆಚ್ಚಾಗುತ್ತದೆ. ಎಲ್ಲಾ ಹಂತಗಳಲ್ಲಿ ಅದೃಷ್ಟ ನಿಮ್ಮ ಜೊತೆ ಇರುತ್ತದೆ. ಮಾಡುವ ಕೆಲಸಗಳು ಸುಲಭವಾಗಿ ಪೂರ್ತಿಯಾಗುತ್ತದೆ.

ಕುಂಭ ರಾಶಿ :- ಸೂರ್ಯ ಮತ್ತು ಶುಕ್ರನ ಸಂಯೋಗದಿಂದ ಈ ರಾಶಿಯವರಿಗೆ ಲಾಭ ಹೆಚ್ಚಾಗುತ್ತದೆ. ದಂಪತಿಗಳ ಜೀವನದಲ್ಲಿ ಖುಷಿ ಮತ್ತು ಪ್ರೀತಿ ಹೆಚ್ಚಾಗುತ್ತದೆ. ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುವವರಿಗೆ ಲಾಭ ಹೆಚ್ಚಾಗುತ್ತದೆ. ಹೂಡಿಕೆ ಮಾಡಲು ಇದು ಉತ್ತಮವಾದ ಸಮಯ ಆಗಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಪ್ರಯಾಣದಿಂದ ಲಾಭ ಸಿಗುತ್ತದೆ.

Get real time updates directly on you device, subscribe now.