ಮಾಜಿ ವಿಶ್ವ ಸುಂದರಿ, ಕನ್ನಡತಿ ಐಶ್ವರ್ಯ ರವರು, ಮಗಳು ಬೆಳೆದು ದೊಡ್ಡವರಾದರು ಕೂಡ ಎಲ್ಲೇ ಹೋದರು ಮಗಳ ಕೈ ಹಿಡಿದುಕೊಳ್ಳಲು ಕಾರಣವೇನು ಗೊತ್ತೇ??
ನಮಸ್ಕರ ಸ್ನೇಹಿತರೇ ಮಾಜಿ ವಿಶ್ವ ಸುಂದರಿ ಬಾಲಿವುಡ್ ಎವರ್ಗಿನ್ ಬೆಡಗಿ ಐಶ್ವರ್ಯ ರೈ ಬಚ್ಚನ್ ಎಲ್ಲಿ ಹೋದ್ರು ತನ್ನ ಮಗಳ ಕೈಯನ್ನು ಹಿಡಿದಿಟ್ಟಿರುತ್ತಾರೆ. ಇದಕ್ಕೆ ಕಾರಣ ಕೇಳಿದ್ರೆ ನಿಜಕ್ಕೂ ಕೂಡ ಒಮ್ಮೆ ಸಂತೋಷ ಆಗುತ್ತೆ. ಇನ್ನೊಂದ್ ಕಡೆ ಅತಿಯಾದ ವ್ಯಾಮೋಹ ಅನಿಸುತ್ತೆ. ಆದ್ರೇ ಈ ಎಲ್ಲಾ ಪ್ರಶ್ನೆಗಳಿಗೆ ಐಶ್ವರ್ಯ ರೈ ಬಚ್ಚನ್ ಅವರು ಉತ್ತರ ನೀಡಿದ್ದಾರೆ. ಅವರ ಮಾತನ್ನ ಕೇಳಿದರೆ ಅವರ ದೃಷ್ಟಿಯಲ್ಲಿ ಅದು ಸರಿಯಾಗಿಯೇ ಇದೆ ತಿಳಿಯುತ್ತದೆ.
ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ ಅವರನ್ನ ಕೈ ಹಿಡಿದು ಅಮಿತಾಬ್ ಬಚ್ಚನ್ ಅವರ ಸೊಸೆಯಾದ ನಂತರ ಸಿನಿಮಾ ರಂಗದಿಂದ ಕೊಂಚ ಅಂತರ ಕಾಯ್ದುಕೊಂಡ ಐಶ್ವರ್ಯ ರೈ , ಮಗಳು ಆರಾಧ್ಯ ಜನಿಸಿದ ನಂತರ ತಾಯಿಯ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈಗ ಮಗಳು ಆರಾಧ್ಯ ಕೂಡ ತನ್ನ ತಾಯಿಯಂತೆ ಮುದ್ದಾಗಿ ಎಲ್ಲರೊಂದಿಗೆ ಚಿಟಪಟ ಮಾತನಾಡುತ್ತಾ, ತಾಯಿ ಹೋಗುವ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾಳೆ.

ಒಂಭತ್ತು ವರ್ಷದ ಆರಾಧ್ಯಳನ್ನ ತಾಯಿ ಐಶ್ವರ್ಯ ರೈ ಎಲ್ಲೇ ಹೋದರು ಕೂಡ ಕೈ ಹಿಡಿದುಕೊಂಡೇ ಬರುತ್ತಾರೆ. ಜೊತೆಯಾಗಿಯೇ ಇರಿಸಿಕೊಳ್ಳುತ್ತಾರೆ ಐಶ್ವರ್ಯ ರೈ. ಐಶ್ವರ್ಯ ರೈ ಬಚ್ಚನ್ ಅವರು ತಮ್ಮ ಮಗಳನ್ನು ಎಲ್ಲಾ ಕಡೆ ಕೈ ಹಿಡಿದುಕೊಂಡೇ ಹೋಗುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಸೇರಿದಂತೆ ಸ್ವತಃ ಬಿಟೌನ್ ನ ಕೆಲವು ಮಂದಿಯೇ ಪ್ರಶ್ನೆ ಮಾಡಿದ್ರು. ಐಶ್ವರ್ಯ ರೈ ಪುತ್ರಿ ಆರಾಧ್ಯ ಚಿಕ್ಕ ಮಗುವಂತೂ ಅಲ್ಲ.
ಒಂಭತ್ತು – ಹತ್ತು ವರ್ಷದ ಆರಾಧ್ಯಳಿಗೆ ಕೊಂಚ ಮಟ್ಟಿಗೆ ಆದರು ಅರಿವಿರುತ್ತದೆ. ಹೀಗಿರುವಾಗ ಐಶ್ವರ್ಯ ರೈ ಬಚ್ಚನ್ ಆರಾಧ್ಯಳನ್ನು ಚಿಕ್ಕ ಮಗುವಿನಂತೆ ಹೋದಲೆಲ್ಲಾ ಕೈ ಹಿಡಿದುಕೊಂಡೇ ಹೋಗುವುದು ಅತಿಯಾದ ಕಾಳಜಿ ಅನಿಸುತ್ತದೆ ಎಂದು ಹೇಳುತ್ತಲೇ ಇರುತ್ತಾರೆ. ನೆಟ್ಟಿಗರ ಈ ಪ್ರಶ್ನೆಗೆ ಐಶ್ವರ್ಯ ರೈ ಅವರು ತುಂಬಾ ಅರ್ಥ ಪೂರ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಿರೂಪಕರು ನೀವು ಎಲ್ಲೇ ಹೋದರು ನಿಮ್ಮ ಮಗಳು ಆರಾಧ್ಯಳನ್ನ ಕೈ ಹಿಡಿದುಕೊಂಡೇ ಹೋಗುವ ಕಾರಣ ಏನು ಅಂತ ಕೇಳಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸಿದ ಐಶ್ವರ್ಯ ರೈ ಅವರು ನಾನು ಯಾವುದೇ ಕಾರ್ಯಕ್ರಮಗಳಿಗೂ ಹೋದರು ಅಲ್ಲಿ ಫೋಟೋಗ್ರಾಫರ್ಸ್, ಮಾಧ್ಯಮ ಮಿತ್ರರು ಮತ್ತು ಅಭಿಮಾನಿಗಳು ಸುತ್ತುವರಿಯುತ್ತಾರೆ. ಇದರಿಂದ ನನಗೆ ತೊಂದರೆ ಆದರೂ ಪರವಾಗಿಲ್ಲ. ಆದರೆ ನನ್ನ ಮಗಳಿಗೆ ತೊಂದರೆ ಆಗಬಾರದು. ಸುತ್ತುವರಿದ ಜನರ ನಡುವೆ ಮಗಳು ಆರಾಧ್ಯಳಿಗೆ ತೊಂದರೆ ಆಗಬಾರದು ಅನ್ನೊ ಕಾಳಜಿಯ ಮನೋಭಾವದಿಂದ ನನ್ನ ಮಗಳು ಆರಾಧ್ಯಳ ಕೈ ಹಿಡಿದಿರುತ್ತೇನೆ ಎಂದು ಉತ್ತರಿಸಿದ್ದಾರೆ.

ಐಶ್ವರ್ಯ ರೈ ಅವರ ಈ ಪ್ರತಿಕ್ರಿಯೆಗೆ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ಐಶ್ವರ್ಯ ರೈ ಅವರು ಇಂದು ವಿಶ್ವ ಸುಂದರಿಯಾಗಿ ಬಾಲಿವುಡ್ ಸೂಪರ್ ಸ್ಟಾರ್ ನಟಿಯಾಗಿ ಮಿಂಚಿ ಇಂದಿಗೂ ಕೂಡ ತನ್ನ ಸೌಂದರ್ಯವನ್ನು ಅದೇ ರೀತಿ ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ಮಗಳು ಆರಾಧ್ಯ ಕೂಡ ತಾಯಿಯಂತೆ ಮುದ್ದಾಗಿದ್ದು, ಭವಿಷ್ಯದಲ್ಲಿ ಸ್ಟಾರ್ ನಟಿಯಾಗಿ ಬಾಲಿವುಡ್ ನಲ್ಲಿ ಮಿಂಚಬಹುದು ಎಂದು ಬಾಲಿವುಡ್ ಮಂದಿ ಭವಿಷ್ಯ ನುಡಿಯುತ್ತಿದ್ದಾರೆ.