ದೂರಾಗಿರುವ ಹೆಂಡತಿ ಬಗ್ಗೆ ಫೋಟೋ ಹಾಕಿ ಮರಳಿ ಬಂದುಬಿಡು ಎಂದ ಪುಟ್ಟಕ್ಕನ ಮಕ್ಕಳು ನಟ ಧನುಷ್, ಅಷ್ಟಕ್ಕೂ ಇದೇನಿದು ಹೊಸ ಸಮಾಚಾರ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆ ವಾಹಿನಿಗಳಲ್ಲಿ ಜೀ ಕನ್ನಡ ವಾಹಿನಿ ಧಾರವಾಹಿಗಳ ರೇಟಿಂಗ್ ವಿಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಅದರಲ್ಲೂ ಇತ್ತೀಚಿಗಷ್ಟೇ ಪ್ರಾರಂಭವಾಗಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಹಲವಾರು ಸಮಯಗಳಿಂದ ಮೊದಲನೇ ಸ್ಥಾನದಲ್ಲಿ ಮಿಂಚುತ್ತಿದೆ. ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಕಂಠಿ ಪಾತ್ರಧಾರಿಯಾಗಿರುವ ಧನುಷ್ ರವರು ಎಂದರೆ ಎಲ್ಲರಿಗೂ ಎಲ್ಲಿಲ್ಲದ ಅಚ್ಚುಮೆಚ್ಚು. ಆದರೆ ಅವರ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಒಂದು ಸುದ್ದಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ.
ಧನುಷ್ ರವರು ಮಧ್ಯಮವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರಿಗೆ ಕಿರುತೆರೆ ಕ್ಷೇತ್ರದಲ್ಲಿ ಯಾರು ಕೂಡ ಗಾಡ್ಫಾದರ್ ಇಲ್ಲ. ಹಲವಾರು ಆಡಿಶನ್ ಗಳನ್ನು ನೀಡಿದ್ದರೂ ಕೂಡ ಯಾವುದು ಅವರಿಗೆ ಕೈ ಹಿಡಿದಿರಲಿಲ್ಲ. ಪುಟ್ಟಕ್ಕನ ಮಕ್ಕಳು ಧಾರವಾಹಿಯನ್ನು ಕೂಡ ಆಡಿಶನ್ ಮೂಲಕವೇ ಕಂಠಿ ಪಾತ್ರಧಾರಿಯಾಗಿ ಪಡೆದುಕೊಂಡಿದ್ದು. ಈಗ ಈ ಧಾರಾವಾಹಿಯನ್ನು ನೋಡುವ ಪ್ರತಿಯೊಂದು ಮನೆಯಲ್ಲಿ ಕೂಡ ಕಂಠಿ ರವರೆ ಸೂಪರ್ಸ್ಟಾರ್. ಪ್ರತಿಯೊಬ್ಬರು ಕೂಡ ಕಂಠಿ ಪಾತ್ರವನ್ನು ಮೆಚ್ಚುತ್ತಿದ್ದಾರೆ. ಸದ್ಯಕ್ಕೆ ಜನಪ್ರಿಯತೆ ವಿಚಾರಕ್ಕೆ ಬರುವುದಾದರೆ ಧನುಶ್ ರವರ ಕಂಠಿ ಪಾತ್ರವೇ ಕಿರುತೆರೆಯ ವಾಹಿನಿಗಳ ಧಾರವಾಹಿಗಳಲ್ಲಿ ನಂಬರ್1 ಎಂದು ಹೇಳಬಹುದಾಗಿದೆ.
ಇತ್ತೀಚಿಗಷ್ಟೇ ತಾವು ದುಡಿದ ಹಣದಿಂದ ಮೊದಲ ಕಾರನ್ನು ಖರೀದಿಸಿ ತನ್ನ ತಾಯಿಯ ಬಳಿ ಸಲ್ಲಿಸಿದ್ದಾರೆ. ಮಧ್ಯಮ ವರ್ಗದ ಹುಡುಗರಿಗೆ ಖಂಡಿತವಾಗಿ ಈ ಅನುಭವ ಯಾವ ಮಟ್ಟಿಗೆ ಇರಬಹುದು ಎನ್ನುವುದರ ಸಂಪೂರ್ಣ ಪರಿಚಯ ಇರುತ್ತದೆ. ಸದ್ಯಕ್ಕೆ ಕಂಠಿ ಪಾತ್ರದಲ್ಲಿ ಧನುಶ್ ರವರು ಎಲ್ಲರ ಮನಗೆಲ್ಲಲು ಯಶಸ್ವಿಯಾಗಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಈಗ ಕಂಠಿ ಸ್ನೇಹಾಳಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಒದ್ದಾಡುತ್ತಿದ್ದಾನೆ. ಈ ಸಂಚಿಕೆ ಈಗಾಗಲೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಸ್ನೇಹಾಳಿಗೆ ಕಂಠಿ ಒಳ್ಳೆಯವನು ಎಂಬುದಾಗಿ ಪೊಲೀಸರ ಮೂಲಕ ತಿಳಿದುಬಂದಿದೆ. ಹೀಗಾಗಿ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಮುಂದಿನ ಸಂಚಿಕೆಯಿಂದ ಇವರಿಬ್ಬರ ನಡುವಿನ ಪ್ರೀತಿಯ ಸಂಚಿಕೆಗಳು ಪ್ರಾರಂಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸದ್ಯಕ್ಕೆ ಧನುಶ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ಆಕ್ಟಿವ್ ಆಗಿದ್ದು ಆಗಾಗ ಅಭಿಮಾನಿಗಳೊಂದಿಗೆ ತಮ್ಮ ಖಾಸಗಿ ಜೀವನದ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತದೆ. ಆಗಾಗ ಫೋಟೋಗಳನ್ನು ಕೂಡ ಪೋಸ್ಟ್ ಮಾಡುತ್ತಾರೆ. ಇತ್ತೀಚಿಗಷ್ಟೆ ತಮ್ಮ ಹೆಂಡತಿಯ ಫೋಟೋವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ ನೀನಿಲ್ಲದೆ ಬದುಕಿಲ್ಲ ಎನ್ನುವ ಎಮೋಷನಲ್ ಕ್ಯಾಪ್ಷನ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಕುರಿತಂತೆ ಅಭಿಮಾನಿಗಳಿಗೆ ಈಗ ಗೊಂದಲ ಉಂಟಾಗಿದೆ. ಧನುಷ್ ಯಾವಾಗಪ್ಪ ಮದುವೆಯಾದರು ಎನ್ನುವ ಕುತೂಹಲ ಕೂಡ ಕಾಡುತ್ತಿದೆ. ಹಾಗಿದ್ದರೆ ಇದೇನು ಎಂಬುದನ್ನು ತಿಳಿಯೋಣ ಬನ್ನಿ.
ಧನುಷ್ ಹಾಗೂ ಆತನ ಪತ್ನಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ವಿಧಿಯಾಟ ಎನ್ನುವಂತೆ ಅವನ ಪತ್ನಿ ಆ ಕಾಲದಲ್ಲಿ ಮರಣ ಹೊಂದುತ್ತಾಳೆ. ಆಗ ಅವಳಿಲ್ಲದ ಬದುಕಿನಲ್ಲಿ ಧನುಷ್ ದಿನಾಲು ಅವಳನ್ನು ನೆನೆದುಕೊಂಡು ದುಃಖ ಪಡುತ್ತಿರುತ್ತಾನೆ. ಆಗ ಆತ ತನ್ನ ಮಗುವಿಗಾಗಿ ಕಾಯುತ್ತಿರುತ್ತಾನೆ. ಆ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಫೋಟೋದ ಜೊತೆಗೆ ಅವರ ಚಿತ್ರದ ಸಾಲಾಗಿರುವ ಜೊತೆಗಿರದ ಜೀವ ಎಂದಿಗಿಂತ ಸನಿಹ ಎನ್ನುವ ವಾಕ್ಯ ಬರುತ್ತದೆ. ಈ ದೃಶ್ಯ ಸಾಕಷ್ಟು ಭಾವನಾತ್ಮಕವಾಗಿ ಮೂಡಿಬಂದಿದ್ದು ಇದೇನಪ್ಪಾ ಅಭಿಮಾನಿಗಳಿಗೂ ಕೂಡ ಕನ್ಫ್ಯೂಷನ್ ಎನ್ನುವಂತೆ ಮಾಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಜಾಸ್ತಿ ಗೊಂದಲ ಪಟ್ಕೋಬೇಡಿ ಇದು ಧನುಷ ರವರ ನೂತನ ಆಲ್ಬಮ್ ವಿಡಿಯೋ ಸಾಂಗ್. ಇದರಲ್ಲಿ ರೋಮ್ಯಾಂಟಿಕ್ ಹೀರೋ ಕೂಡ ಆಗಿ ಕಾಣಿಸಿಕೊಂಡಿದ್ದು ತಾನ್ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪತ್ನಿ ತನ್ನನ್ನು ಬಿಟ್ಟು ಹೋದಾಗ ಅಂದರೆ ಬಾರದ ಲೋಕಕ್ಕೆ ಹೋದಾಗ ಆತ ಪಡುವಂತಹ ದುಃಖವನ್ನು ಇಲ್ಲಿ ದನುಶ್ ರವರು ಪರಿಪಕ್ವವಾಗಿ ವಿಡಿಯೋ ಸಾಂಗ್ ನಲ್ಲಿ ತೋರಿಸಿದ್ದಾರೆ ಎಂದು ಹೇಳಬಹುದಾಗಿದೆ. ಧನುಷ್ ನಟಿಸಿರುವ ಮನಸೆಲ್ಲಾ ನೀನೆ ಎನ್ನುವ ಈ ವೀಡಿಯೋ ಆಲ್ಬಮ್ ಸಾಂಗ್ ಈಗಾಗಲೇ ಬಿಡುಗಡೆಯಾಗಿ ಸಹಸ್ರಾರು ಜನರಿಂದ ವೀಕ್ಷಿಸಲ್ಪಟ್ಟಿದೆ. ಇದೇ ರೀತಿ ಧನುಶ್ ರವರಿಗೆ ಇನ್ನಷ್ಟು ಹೊಸ ಹೊಸ ಅವಕಾಶ ಆಫರ್ ಗಳು ಹುಡುಕಿಕೊಂಡು ಬರಲಿ ಎಂದು ಹಾರೈಸೋಣ.