ದೀಪಿಕಾ ದಾಸ್ ರವರ ಹುಟ್ಟುಹಬ್ಬದ ಪ್ರಯುಕ್ತ ಬಿಗ್ ಬಾಸ್ ಸ್ಪರ್ದಿಗಳಿಂದ ವಿಶೇಷ ಸರ್ಪ್ರೈಸ್ ಏನು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ನಾಗಿಣಿ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಿತರಾದವರು ದೀಪಿಕಾ ದಾಸ್. ಆ ಸಮಯದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆಯ ನಟಿ ಎಂಬ ಖ್ಯಾತಿಗೆ ಕೂಡ ಪಾತ್ರರಾಗಿದ್ದರು. ದೀಪಿಕಾ ದಾಸ್ ರವರು ಧಾರವಾಹಿಗಳಲ್ಲಿ ಹಾಗೂ ಬೇರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವುದು ಕಡಿಮೆ ಆದರೂ ಕೂಡ ಅವರ ಅಭಿಮಾನಿಗಳ ಸಂಖ್ಯೆಗೇನು ಕಡಿಮೆಯಿಲ್ಲ. ನೀವು ಅವರ ಸೋಶಿಯಲ್ ಮೀಡಿಯಾ ನೋಡಿರಬಹುದು ಲಕ್ಷಾಂತರ ಜನರು ಅಭಿಮಾನಿಗಳಿದ್ದಾರೆ.

ಇನ್ನು ಕೇವಲ ನಾಗಿಣಿ ಧಾರಾವಾಹಿ ಮಾತ್ರವಲ್ಲದೆ ದೀಪಿಕಾ ದಾಸ್ ಅವರು ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸುವ ಮೂಲಕ ತಮ್ಮ ನೃತ್ಯದ ಸ್ಕಿಲ್ ಅನ್ನು ಪ್ರೇಕ್ಷಕರಿಗೆ ತೋರ್ಪಡಿಸಿದ್ದರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಡೆಸಿಕೊಡುವ ಕನ್ನಡದ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ ಸೀಸನ್ 7 ರಲ್ಲಿ ಫೈನಲ್ಗೆ ಕೂಡ ತಲುಪಿದ್ದರು.

ಟಿವಿ ಕಾರ್ಯಕ್ರಮಗಳಲ್ಲಿ ಕಡಿಮೆ ಕಾಣಿಸಿಕೊಂಡರು ಕೂಡ ಆಗಾಗ ಸೋಶಿಯಲ್ ಮೀಡಿಯಾ ಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವುದರ ಮೂಲಕ ಸದಾಕಾಲ ಸುದ್ದಿಯಲ್ಲಿರುತ್ತಾರೆ. ಇನ್ನು ಇತ್ತೀಚಿಗಷ್ಟೇ ದೀಪಿಕಾ ದಾಸ್ ರವರು ತಮ್ಮ ಜನ್ಮದಿನವನ್ನು ಆಚರಿಸಿ ಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಬಿಗ್ ಬಾಸ್ ನ ಸಹ ಸ್ಪರ್ಧಿಗಳಾಗಿರುವ ಭೂಮಿಕ ಶೆಟ್ಟಿ ಹಾಗೂ ಪ್ರಿಯಾಂಕ ಶಿವಣ್ಣನವರು ಕೇಕ್ ಜೊತೆಗೆ ಬಂದು ತಮ್ಮ ಸ್ನೇಹಿತೆಯ ಹುಟ್ಟುಹಬ್ಬವನ್ನು ಸಂತೋಷದಿಂದ ಆಚರಿಸಿಕೊಂಡು ಇರುವುದು ಫೋಟೋಗಳ ಮೂಲಕ ತಿಳಿದು ಬಂದಿದೆ. ಇದನ್ನು ನೋಡಿ ದೀಪಿಕಾದಾಸ್ ರವರ ಜೊತೆಗೆ ಅವರ ಅಭಿಮಾನಿಗಳು ಕೂಡ ನೋಡಿ ಖುಷಿ ಪಟ್ಟಿದ್ದಾರೆ.

Get real time updates directly on you device, subscribe now.