ಬಿಗ್ ನ್ಯೂಸ್: ಸಿದ್ದರಾಮಯ್ಯ ರವರನ್ನು ಭೇಟಿಯಾದ ಚಿಕ್ಕಣ್ಣ, ಅದು ಗೋವಾ ದಲ್ಲಿ. ಗರಿಗೆದರಿದ ಲೆಕ್ಕಾಚಾರ, ಅಲ್ಲಿ ನಡೆದದ್ದೇನು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸಿನಿಮಾ ಹಾಗೂ ರಾಜಕೀಯ ರಂಗ ಎನ್ನುವುದು ಮೊದಲಿನಿಂದಲೂ ಕೂಡ ಜೊತೆಯಾಗಿ ನಡೆದುಕೊಂಡು ಬಂದಂತಹ ಕ್ಷೇತ್ರಗಳಾಗಿವೆ. ಇದನ್ನು ನೀವು ಕೂಡ ಹಲವಾರು ಬಾರಿ ಪ್ರತ್ಯಕ್ಷವಾಗಿ ನೋಡಿದ್ದೀರಿ. ಹೌದು ಸಿನಿಮಾದಲ್ಲಿ ಇರುವಂತಹ ನಟರು ಹಾಗೂ ಇನ್ನಿತರ ಕಲಾವಿದರು ರಾಜಕೀಯ ರಂಗಕ್ಕೆ ಹೋಗಿ ಶಾಸಕ ಮಂತ್ರಿಗಳಾಗಿದ್ದನ್ನು ಕೂಡ ನೋಡಿದ್ದೀರಿ. ಉದಾಹರಣೆಗೆ ನಮ್ಮ ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದಾಗಿದೆ.

ಇನ್ನು ರಾಜಕೀಯ ಕ್ಷೇತ್ರದಲ್ಲಿ ಇರುವಂತಹ ವ್ಯಕ್ತಿಗಳು ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ನಿರ್ಮಾಪಕರಾಗಿ ಕಾಣಿಸಿಕೊಂಡಿರುವುದನ್ನು ಕೂಡ ನೀವು ಈಗಾಗಲೇ ನೋಡಿದ್ದೀರಿ. ಉದಾಹರಣೆಯಾಗಿ ನೋಡುವುದಾದರೆ ಎಚ್ ಡಿ ಕುಮಾರಸ್ವಾಮಿ ಹಾಗೂ ಅವರ ಪುತ್ರರಾಗಿರುವ ನಿಖಿಲ್ ಕುಮಾರ್ ಅವರನ್ನು ನೀವು ನೋಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಕೂಡ ಹಲವಾರು ಕಲಾವಿದರು ರಾಜಕೀಯ ಕ್ಷೇತ್ರಕ್ಕೆ ಹೋಗಿರುವುದನ್ನು ನಾವು ಗಮನಿಸಿರುತ್ತೇವೆ. ಇತ್ತೀಚಿಗಷ್ಟೇ ಕಲಾಸಾಮ್ರಾಟ್ ನಿರ್ದೇಶಕ ಎಸ್ ನಾರಾಯಣ್ ರವರು ಕೂಡ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷವನ್ನು ಸೇರುವ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರಂತೆ. ಅದು ಬಿಡಿ ನಾವು ಇನ್ನೂ ಮಾತನಾಡಲು ಹೊರಟಿರುವುದು ಚಿಕ್ಕಣ್ಣ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತಂತೆ. ಇಬ್ಬರೂ ಕೂಡ ಗೋವಾದಲ್ಲಿ ಭೇಟಿಯಾಗಿರುವುದು ಈಗಾಗಲೇ ಹಲವಾರು ಗುಸುಗುಸು ಮಾತುಗಳಿಗೆ ಎಡೆಮಾಡಿಕೊಟ್ಟಿದೆ.

ಇದರ ಹಿಂದಿನ ಅಸಲಿ ಕಾರಣವನ್ನು ನಾವು ಹೇಳುತ್ತೇವೆ ಬನ್ನಿ. ಅದೇನೆಂದರೆ ಸಿದ್ದರಾಮಯ್ಯರವರು ಪಂಚರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಗೋವಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಹಾಸ್ಯನಟ ಚಿಕ್ಕಣ್ಣನವರು ಯಾವುದೋ ಚಿತ್ರದ ಚಿತ್ರೀಕರಣದಲ್ಲಿ ಗೋವಾದಲ್ಲಿ ಭಾಗಿಯಾಗಿದ್ದಾರೆ. ಈ ಸಮಯದಲ್ಲಿ ಸಿದ್ದರಾಮಯ್ಯನವರು ಸಿಕ್ಕಿರುವ ಕಾರಣದಿಂದಾಗಿ ಚಿಕ್ಕಣ್ಣನವರು ಕೆಲವು ಸಮಯ ಮಾತನಾಡಿಸಿ ಹೋಗಿದ್ದಾರೆ ಎಂದು ಹೇಳಿದ್ದಾರೆ ಆದರೆ ಗುಸು ಗುಸು ಜೋರಾಗಿಯೇ ನಡೆದಿದೆ. ಈ ಕುರಿತಂತೆ ಸಿದ್ದರಾಮಯ್ಯರವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಕುರಿತಂತೆ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಇದು ಕೇವಲ ಭೇಟಿಯಾಗಿದ್ದು ಇದರ ಕುರಿತಂತೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.

Get real time updates directly on you device, subscribe now.