ಬಿಗ್ ನ್ಯೂಸ್: ಬಾರಿ ಬದಲಾವಣೆಗಳೊಂದಿಗೆ ಮತ್ತೆ ಬರುತ್ತಿದೆ ಡ್ರಾಮ್ ಜೂನಿಯರ್ಸ್-4, ಯಾವಾಗ ಗೊತ್ತಾ?? ಮುಹೂರ್ತ ಫಿಕ್ಸ್.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ಧಾರವಾಹಿ ಹಾಗೂ ಇತರ ವಿಶೇಷ ಕಾರ್ಯಕ್ರಮಗಳು ಸಿನಿಮಾಗಳಿಗಿಂತ ಹೆಚ್ಚಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತಿವೆ. ಇದೇ ಕಾರಣಕ್ಕಾಗಿ ಕನ್ನಡ ಕಿರುತೆರೆಯ ವಾಹಿನಿಗಳು ಹೊಸ ಹೊಸ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಲ್ಲಿ ನಿರತವಾಗಿವೆ. ಇನ್ನು ನಾವು ಮಾತನಾಡಲು ಹೊರಟಿರೋದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಮಕ್ಕಳ ಕಾರ್ಯಕ್ರಮ ವಾಗಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಕುರಿತಂತೆ.
ಈ ಕಾರ್ಯಕ್ರಮ ಇಡೀ ಕರ್ನಾಟಕ ರಾಜ್ಯದ ಚಿಕ್ಕ ಮಕ್ಕಳ ಪ್ರತಿಭೆಯನ್ನು ಇಡೀ ರಾಜ್ಯದ ಪ್ರೇಕ್ಷಕರಿಗೆ ತೋರಿಸುವಂತಹ ಉತ್ತಮ ಉದ್ದೇಶ ಉಳ್ಳಂತಹ ಕಾರ್ಯಕ್ರಮವಾಗಿತ್ತು. ಇದೇ ಕಾರಣಕ್ಕಾಗಿ ಕನ್ನಡ ಕಿರುತೆರೆಯ ಪ್ರೇಕ್ಷಕರು ಕೂಡ ಡ್ರಾಮಾ ಜೂನಿಯರ್ ಕಾರ್ಯಕ್ರಮವನ್ನು ನೋಡಲು ಸಾಕಷ್ಟು ಉತ್ಸುಕರಾಗಿದ್ದರು. ಈಗಾಗಲೇ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ 3 ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿದೆ. ಈಗಾಗಲೇ ನಾಲ್ಕನೇ ಆವೃತ್ತಿ ಕೂಡ ಅತಿ ಶೀಘ್ರದಲ್ಲಿ ಆರಂಭವಾಗುವ ಅಂತಹ ಎಲ್ಲಾ ಸಿದ್ಧತೆಗಳು ಕೂಡ ನಡೆದಿದೆ.

ಈ ಕಾರ್ಯಕ್ರಮವನ್ನು ನಿರೂಪಕನಾಗಿ ಮಾಸ್ಟರ್ ಆನಂದ್ ರವರು ನಡೆಸಿಕೊಡುತ್ತಿದ್ದಾರೆ. ಹೌದು ಈಗಾಗಲೇ ನಾಲ್ಕನೇ ಸೀಸನ್ ನ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಪ್ರೋಮೊ ವನ್ನು ಕೂಡ ಜೀ ಕನ್ನಡ ಸಂಸ್ಥೆ ಬಿಡುಗಡೆ ಮಾಡಿದ್ದು ಇದೇ ಬೇಸಿಗೆ ಯಲ್ಲಿ ಕಾರ್ಯಕ್ರಮ ತನ್ನ ಪ್ರಸಾರವನ್ನು ಆರಂಭಿಸಲಿದೆ, ಹಾಗೂ ಈ ಬಾರಿ ಕಾನ್ಸೆಪ್ಟ್ ಹಾಗೂ ತೀರ್ಪು ದಾರರಲ್ಲಿಯೂ ಕೂಡ ನಾವು ಬದಲಾವಣೆ ಕಾಣಬಹುದಾಗಿದೆ. ಇನ್ನು ಈ ಬಾರಿಯೂ ಕೂಡ ಹಲವಾರು ಪುಟಾಣಿ ಪ್ರತಿಭೆಗಳು ಕನ್ನಡ ಪ್ರೇಕ್ಷಕರನ್ನು ಈ ಕಾರ್ಯಕ್ರಮದ ಮೂಲಕ ಮನ ರಂಜಿಸುವುದು ಕನ್ಫರ್ಮ್ ಆಗಿದೆ. ಈ ಕಾರ್ಯಕ್ರಮವನ್ನು ನೋಡಲು ನೀವು ಸಿದ್ಧರಾಗಿದ್ದೀರ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.