ಡಿ ಆರ್ ಯಸ್ ತೆಗೆದುಕೊಳ್ಳುವುದು ಬೇಡ ಎಂದು ಸುಮ್ಮನಾಗಿದ್ದ ರೋಹಿತ್ ಗೆ ಕೊಹ್ಲಿ ಬಂದು ಹೇಳಿದ್ದೇನು ಗೊತ್ತೇ? ಆಮೇಲೆ ಏನಾಯಿತು ಗೊತ್ತಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದನ್ನು ನಾವು ಗಮನಿಸಿದ್ದೇವೆ. ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ವಿರಾಟ್ ಕೊಹ್ಲಿ ರವರು ಈಗಾಗಲೇ ಮೂರು ಫಾರ್ಮೆಟ್ ಗಳಲ್ಲಿ ಕೂಡ ತಂಡಕ್ಕೆ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆದರೂ ಕೂಡ ಫೆಬ್ರವರಿ 6ರಿಂದ ಪ್ರಾರಂಭವಾಗಿರುವ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದಲ್ಲಿ ಅದೇ ಜೋಶ್ ನಲ್ಲಿ ತಂಡಕ್ಕೆ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದು ಎಲ್ಲರ ಗಮನವನ್ನು ಸೆಳೆದಿದೆ. ಈಗಾಗಲೇ ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ 6 ವಿಕೆಟ್ಗಳ ಗೆಲುವು ಸಾಧಿಸಿರುವುದು ತಂಡದ ಭರವಸೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ನಡುವಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ರೋಹಿತ್ ಶರ್ಮಾ ನಾಯಕನಾದ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ರವರ ನಡುವಿನ ಸಂಬಂಧ ಹೇಗೆ ಕ್ರಿಕೆಟ್ ತಂಡದಲ್ಲಿ ಉಳಿದುಕೊಳ್ಳಬಹುದು ಹೇಗೆ ಮುಂದುವರೆಯಬಹುದು ಎನ್ನುವುದಾಗಿ ಅನುಮಾನಗಳಿದ್ದವು. ಅದಕ್ಕೆ ಸರಿಯಾದ ಉತ್ತರ ಸಿಕ್ಕಿದೆ ಎಂಬುದಾಗಿ ನಿನ್ನೆ ನಡೆದಿರುವಂತಹ ಪಂದ್ಯಾಟದಲ್ಲಿ ಸಾಕ್ಷಿಯಾಗಿದೆ.
22ನೇ ಓವರ್ನಲ್ಲಿ ಚಹಾಲ್ ರವರು ಶಮರ ಬ್ರೂಕ್ಸ್ ಅವರಿಗೆ ಬೌಲಿಂಗ್ ಮಾಡುತ್ತಾರೆ ಆಗ ಅವರ ಬ್ಯಾಟಿಗೆ ಬಾಲ್ ಸವರಿ ರಿಷಬ್ ಪಂತ್ ರವರ ಕೈಸೇರುತ್ತದೆ. ಮೊದಲಿಗೆ ಅಂಪೈರ್ ಇದಕ್ಕೆ ನಾಟೌಟ್ ನೀಡುತ್ತಾರೆ. ನಾಯಕನಾಗಿರುವ ರೋಹಿತ್ ಶರ್ಮಾ ರವರು ಡಿ ಆರ್ ಎಸ್ ತೆಗೆದುಕೊಳ್ಳುವ ಮುನ್ನ ಇಬ್ಬರ ಬಳಿಯೂ ಕೂಡ ನೀವು 100% ಭರವಸೆಯಿಂದ ಇದ್ದರೆ ಮಾತ್ರ ತೆಗೆದುಕೊಳ್ಳುತ್ತೇನೆ ಎಂಬುದಾಗಿ ಹೇಳುತ್ತಾರೆ. ಆಗ ವಿರಾಟ್ ಕೊಹ್ಲಿ ರವರು ನಾನು 100% ಪಕ್ಕಾ ಇದ್ದೇನೆ ಖಂಡಿತವಾಗಿಯೂ ಔಟ್ ನೀವು ಡಿ ಆರ್ ಎಸ್ ತೆಗೆದುಕೊಳ್ಳಬಹುದು ಎಂಬುದಾಗಿ ರೋಹಿತ್ ಶರ್ಮಾ ರವರಿಗೆ ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿ ರವರ ಭರವಸೆಯ ಮೇರೆಗೆ ರೋಹಿತ್ ಶರ್ಮಾ ರವರು ಡಿ ಆರ್ ಎಸ್ ಅನು ತೆಗೆದುಕೊಂಡಿದ್ದಾರೆ ಹಾಗೂ ಅದರ ಫಲಿತಾಂಶವು ಕೂಡ ಔಟಾಗಿ ಬಂದಿತ್ತು. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇವರಿಬ್ಬರ ನಡುವೆ ಇದ್ದಂತಹ ನಂಬಿಕೆ ಹಾಗೂ ಭರವಸೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತೂ ಇಂತೂ ಈ ಮೂಲಕ ಭಾರತೀಯ ಕ್ರಿಕೆಟ್ ತಂಡ 1000ನೇ ಏಕದಿನ ಪಂದ್ಯದಲ್ಲಿ ಐತಿಹಾಸಿಕ ಗೆಲುವನ್ನು ಗಳಿಸಿದೆ.