ನೀವು ಜಸ್ಟ್ 10ನೇ ತರಗತಿ ಪಾಸಾಗಿದ್ರೆ ಸಾಕು ಅಂಚೆ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಸಿಗುತ್ತಿದೆ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಕೇವಲ 10ನೇ ತರಗತಿ ಉತ್ತೀರ್ಣರಾಗಿದ್ದರೂ ಸಾಕು ಅಂಚೆ ಇಲಾಖೆಯಲ್ಲಿ ಸರ್ಕಾರಿ ನೌಕರಿ ಸಿಗಲಿದೆ. ನೀವು ಎಸ್ ಎಸ್ ಎಲ್ ಸಿ ತೇರ್ಗಡೇ ಹೊಂದಿದ್ದು ಕೆಲಸಕ್ಕಾಗಿ ಅಲೆಯುತ್ತಿದ್ದರೆ ಇದು ನಿಮಗೆ ಸದಾವಕಾಶ. ಅಂಚೆ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ನೋಡೋಣ.
ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟೂ ಖಾಲಿ ಇರುವ ಹುದ್ದೆಗಳು 17. ಅರ್ಜಿಯನ್ನು ಆಫ್ ಲೈನ್ ಮೂಲಕ ಅಂದರೆ ಅರ್ಜಿಯನ್ನು ಪೋಸ್ಟ್ ಮಾಡಬೇಕು. ಜನವರಿ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮಾರ್ಚ್ 10 ಅರ್ಜಿ ಸಲ್ಲಿಕೆಗೆ ಕೊನೆಯ ದಿನ.

ಒಟ್ಟು 17 ಹುದ್ದೆಗಳು ಖಾಲಿ ಇದ್ದು ಅವುಗಳೆಂದರೆ ಮೇಲ್ ಮೋಟಾರ್ ಸರ್ವೀಸ್ ಕೊಯಮತ್ತೂರ್-11 ಹುದ್ದೆಗಳು, ಎರೋಡ್ ಡಿವಿಶನ್-02 ಹುದ್ದೆಗಳು, ನೀಲಗಿರಿ ಡಿವಿಶನ್-01 ಹುದ್ದೆಗಳ್, ಸಲೀಂ ವೆಸ್ಟ್ ಡಿವಿಶನ್-02 ಹುದ್ದೆಗಳು, ತಿರುಪುರ್ ಡಿವಿಶನ್-01 ಹುದ್ದೆಗಳು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಕಡ್ಡಾಯವಾಗಿ 10ನೇ ತರಗತಿ ತೇರ್ಗಡೆ ಹೊಂದಿದ ದಾಖಲೆಯನ್ನು ಅರ್ಜಿ ನಮೂನೆ ಜೊತೆಗೆ ಸಲ್ಲಿಸಬೇಕು ಪಾಸಾಗಿರಬೇಕು. ಅಭ್ಯರ್ಥಿಯು ಲಘು ಮತ್ತು ಭಾರವಾದ ಮೋಟಾರ್ ವೆಹಿಕಲ್ ಓಡಿಸುವುದರಲ್ಲಿ ಕನಿಷ್ಠ 3 ವರ್ಷದ ಅನುಭವ ಹೊಂದಿರಬೇಕು. ವಯಸ್ಸು ಗರಿಷ್ಠ 56 ವರ್ಷ ಮೀರಿರಬಾರದು.
ಇನ್ನು ಆಯ್ಕೆಯಾಗುವ ಅಭ್ಯರ್ಥಿಗಳು ತಮಿಳುನಾಡಿನಲ್ಲಿ ಉದ್ಯೋಗ ಮಾಡಲು ಸಿದ್ಧರಿರಬೇಕು. ಅಭ್ಯರ್ಥಿಗೆ ಸಿಗುವ ವೇತನದ ಬಗ್ಗೆ ಹೇಳುವುದಾದರೆ 19,900-63,200 ತಿಂಗಳ ವೇತನ ಸಿಗುತ್ತದೆ. ಮಾರ್ಚ್ 10ರ ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇನ್ನು ಅಭ್ಯರ್ಥಿಯ ದಾಖಲಾತಿ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಹಾಗೂ ದಾಖಲೆಗಳನ್ನು ಈ ವಿಳಾಸಕ್ಕೆ ಕಳುಹಿಸತಕ್ಕದ್ದು. ವ್ಯವಸ್ಥಾಪಕರು, ಮೇಲ್ ಮೋಟಾರ್ ಸರ್ವೀಸ್, ಗೂಡ್ಸ್ ಶೆಡ್ ರಸ್ತೆ. ಕೊಯಮತ್ತೂರ್-641001. ಹೆಚ್ಚಿನ ಮಾಹಿತಿಗಾಗಿ www.appost.in ಗೆ ಭೇಟಿ ನೀಡಿ