ಇದ್ದಕ್ಕಿದ್ದ ಹಾಗೆ ನಿವೃತ್ತಿ ಪಡೆದು ಬೇರೆ ವೃತ್ತಿ ಆಯ್ದುಕೊಂಡು ಯಶಸ್ವಿಯಾದ ಟಾಪ್ – 5 ಕ್ರಿಕೇಟಿಗರು, ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕ್ರಿಕೇಟ್ ಜಗತ್ತಿನ ಯಶಸ್ವಿ ಕ್ರೀಡೆ. ಇಲ್ಲಿ ಪ್ರತಿಯೊಬ್ಬರೂ ಕಡಿಮೆ ಎಂದರೂ ಹತ್ತರಿಂದ ಹದಿನೈದು ವರ್ಷ ತಮ್ಮ ವೃತ್ತಿ ಜೀವನ ಸವೆಸುತ್ತಾರೆ. ನಿವೃತ್ತರಾದ ನಂತರ ಕೋಚಿಂಗ್ ಅಥವಾ ಅಕಾಡೆಮಿಗಳ ಮೂಲಕ ತಮ್ಮ ಅನುಭವವನ್ನು ಧಾರೆ ಏರೆಯುತ್ತಾರೆ. ಆದರೇ ಕೆಲವು ಕ್ರಿಕೇಟಿಗರು ನಿವೃತ್ತಿಯ ನಂತರ ಹೊಸ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ವಿಯಾದವರಿದ್ದಾರೆ. ಬನ್ನಿ ಅಂತಹ ಟಾಪ್ – 5 ಕ್ರಿಕೇಟಿಗರು ಯಾರು ಎಂಬುದನ್ನು ತಿಳಿದುಕೊಳ್ಳೋಣ.
1.ಸಲೀಲ್ ಅಂಕೋಲಾ : ಲೆಜೆಂಡ್ ಸಚಿನ್ ತೆಂಡೂಲ್ಕರ್ ಜೊತೆ ಇನ್ನಿಂಗ್ಸ್ ಆರಂಭಿಸುವ ಮೂಲಕ ಕ್ರಿಕೇಟ್ ಜೀವನ ಆರಂಭಿಸಿದ್ದ ಅಂಕೋಲಾ, ನಂತರದ ದಿನಗಳಲ್ಲಿ ಅವಕಾಶ ಸಿಗದೇ , ನಿವೃತ್ತಿ ಘೋಷಿಸಿದರು.ನಂತರದ ದಿನಗಳಲ್ಲಿ ಕಲಾವಿದರಾಗಿ ಹಲವಾರು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿದರು.
2.ನಾಥನ್ ಆಸ್ಲೆ : ನ್ಯೂಜಿಲೆಂಡ್ ನ ಆಲ್ ರೌಂಡರ್ ಆಗಿದ್ದ ನಾಥನ್ ಆಸ್ಲೆ , ಕ್ರಿಕೇಟ್ ನಿಂದ ನಿವೃತ್ತಿಯಾದ ನಂತರ, ರೇಸ್ ಕಾರುಗಳ ಚಾಲಕರಾಗಿ ಹೊಸ ವೃತ್ತಿ ಶುರು ಮಾಡಿದರು. 2010 ರಲ್ಲಿ ನಡೆದ ಕಾರ್ ರೇಸ್ ಚಾಂಪಿಯನ್ ಶಿಪ್ ನಲ್ಲಿ 3 ನೇ ಸ್ಥಾನ ಪಡೆದರು.
3.ಹೆನ್ರಿ ಒಲಾಂಗಾ : ಜಿಂಬಾಬ್ವೆಯ ಈ ವಿಶಿಷ್ಠ ಬೌಲರ್ ಒಂದು ಕಾಲದಲ್ಲಿ ವಿಶ್ವದ ಎಲ್ಲಾ ಬ್ಯಾಟ್ಸಮನ್ ಗಳಿಗೂ ಕಬ್ಬಿಣದ ಕಡಲೆಯಾಗಿದ್ದರು. ನಿವೃತ್ತಿಯ ನಂತರ ಇವರು ಗಾಯಕ ಕಮ್ ಸಂಗೀತ ನಿರ್ದೇಶಕರಾಗಿ ಹೊಸ ಜೀವನ ಶುರು ಮಾಡಿದರು.2 006ರಲ್ಲಿ ಇವರು ಬಿಡುಗಡೆ ಮಾಡಿದ ಔರೆಲಿಯಾ ಆಲ್ಬಂ ಹೆಚ್ಚು ಜನಪ್ರಿಯವಾಗಿತ್ತು.
4.ಕರ್ಟ್ಲಿ ಆಂಬ್ರೋಸ್ : ವಿಂಡೀಸ್ ನ ಈ ದೈತ್ಯ ವೇಗಿ ತಮ್ಮ ಕ್ರಿಕೇಟ್ ಹಲವಾರು ಬ್ಯಾಟ್ಸಮನ್ ಗಳ ಎದೆ ನಡುಗಿಸಿದ್ದರು. ಇವರು ನಿವೃತ್ತಿ ನಂತರ ಗಿಟಾರಿಸ್ಟ್ ಆಗಿ, ಹಲವಾರು ಶೋಗಳನ್ನು ನಡೆಸಿದ್ದಾರೆ.
5.ಆಂಡ್ರೂ ಫ್ಲಿಂಟಾಫ್ : ಇಂಗ್ಲೆಂಡ್ ತಂಡದ ಶ್ರೇಷ್ಠ ಆಲ್ ರೌಂಡರ್ ಅಂದರೇ ಅದು ಆಂಡ್ರೂ ಫ್ಲಿಂಟಾಫ್. ಇಂಗ್ಲೆಂಡ್ ಪರ ಹಲವಾರು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದರು. ನಿವೃತ್ತಿ ನಂತರ ಇವರು ಕ್ರಿಕೇಟ್ ಬಿಟ್ಟು ಬಾಕ್ಸಿಂಗ್ ಕ್ರೀಡೆಯತ್ತ ಹೊರಳಿದರು. ಈಗ ವೃತ್ತಿಪರ ಬಾಕ್ಸಿಂಗ್ ರಿಂಗ್ ಗಳಲ್ಲಿ ಆಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.